ಗುಂಡಿನ ಚಕಮಕಿ: ಇಬ್ಬರು ಹಿಜ್ಬುಲ್ ಉಗ್ರರ ಸಾವು

 

ಶ್ರೀನಗರ, ಆ. ೨೯: ಜಮ್ಮು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ನಡೆದ ಪರಸ್ಪರ ಗುಂಡಿನ ಚಕಮಕಿಯಲ್ಲಿ ಹಿಜ್ಬುಲ್ ಮುಜಾಹಿದೀನ್ ಉಗ್ರ ಸಂಘಟನೆಯ ಇಬ್ಬರು ಭಯೋತ್ಪಾದಕರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ.
ಉಗ್ರರು ಅಲ್ಲಿ ನುಸುಳಿದ್ದಾರೆಂಬ ಖಚಿತ ಸುಳಿವಿನ ಆಧಾರದ ಮೇಲೆ ಖನಬಾಲ್ ಪ್ರದೇಶದ ಮುನಿವಾರ್ಡ್ ಎಂಬ ಗ್ರಾಮದ ಬಳಿ ಭದ್ರತಾ ಪಡೆಗಳು ಗಸ್ತು ಹಾಗೂ ಶೋಧ ಕಾರ್ಯಾಚರಣೆಗೆ ತೊಡಗಿದ ಸಂದರ್ಭದಲ್ಲಿ, ಮೊದಲು ಉಗ್ರರೇ ಭದ್ರತಾ ಪಡೆಗಳನ್ನು ಕಂಡು ಗುಂಡು ಹಾರಿಸಲಾರಂಭಿಸಿದಾಗ ಭದ್ರತಾ ಪಡೆಗಳು ಮರು ಪ್ರತಿಕ್ರಿಯೆ ಅನ್ವಯ ಗುಂಡು ಹಾರಿಸಿ ಇಬ್ಬರನ್ನು ಕೊಂದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪೊಲೀಸ್ ಅಧಿಕಾರಿಗಳೂ ಸಹ ಈ ಗುಂಡಿನ ಚಮಮಕಿ ಹಾಗೂ ಇಬ್ಬರು ಉಗ್ರರ ಸಾವನ್ನು ಖಚಿತಪಡಿಸಿದ್ದಾರೆ.

Leave a Comment