ಗುಂಡಿನ ಘರ್ಷಣೆ, ಮೂವರು ನಕ್ಸಲರು, ಯೋಧ ಹುತಾತ್ಮ

ರಾಂಚಿ, ಏ.೧೫- ಇಲ್ಲಿನ ಗಿರಿಧ್ ಜಿಲ್ಲೆಯಲ್ಲಿ ಇಂದು ಬೆಳಿಗ್ಗೆ ನಡೆದ ಗುಂಡಿನ ಘರ್ಷಣೆಯಲ್ಲಿ ಮೂವರು ಮಾವೋವಾದಿಗಳು ಮತ್ತು ಒಬ್ಬ ಸಿಆರ್‌ಪಿಎಫ್ ಯೋಧ ಸತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂದು ಬೆಳಿಗ್ಗೆ ಸುಮಾರು 6 ಗಂಟೆಯಲ್ಲಿ ಬೆಲ್‌ಭಾ ಘಾಟ್ ಅರಣ್ಯ ಪ್ರದೇಶದಲ್ಲಿ ನಕ್ಸಲರು ಮತ್ತು ಸಿಆರ್‌ಪಿಎಫ್ ಯೋಧರ ನಡುವೆ ಗುಂಡಿನ ಘರ್ಷಣೆ ನಡೆಯಿತು. ಈ ಸಂದರ್ಭದಲ್ಲಿ ಸಿಆರ್‌ಪಿಎಫ್‌ನ 7ನೇ ಬೆಟಾಲಿಯನ್ ಕಾರ್ಯಚರಣೆ ನಡೆಸಿತ್ತೆಂದೂ ಅಧಿಕಾರಿಗಳು ತಿಳಿಸಿದ್ದಾರೆ.
ಗಿರಿಧ್ ಜಿಲ್ಲೆ ಜಾರ್ಖಂಡ್ ರಾಜಧಾನಿ ರಾಂಚಿಯಿಂದ 185 ಕಿ.ಮೀ. ದೂರದಲ್ಲಿದೆ.
ಮಾವೋವಾದಿಗಳ 3 ಮೃತದೇಹ, ಒಂದು ಎ.ಕೆ.-47 ಬಂದೂಕು, ಮೂರು ಬುಲೆಟ್ ಮ್ಯಾಗಜೀನ್‌ಗಳು ಮತ್ತು ಮೂರು ಪೈಪ್ ಬಾಂಬ್‌ಗಳನ್ನು ಘರ್ಷಣೆ ನಡೆದ ಸ್ಥಳದಲ್ಲಿ ವಶಪಡಿಸಿಕೊಳ್ಳಲಾಗಿದೆ.
ಘರ್ಷಣೆಯಲ್ಲಿ ಸಿಆರ್‌ಪಿಎಫ್‌ನ ಒಬ್ಬ ಯೋಧನೂ ಸತ್ತಿದ್ದಾನೆ.
ಇಡೀ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಲಾಗಿದ್ದು, ಇನ್ನಷ್ಟು ಶಸ್ತ್ರಾಸ್ತ್ರ ಮದ್ದು ಗುಂಡುಗಳು ಸಿಗುವ ಸಾಧ್ಯತೆಯಿದೆ ಎನ್ನಲಾಗಿದೆ.
7 ಹಂತಗಳ ಲೋಕಸಭೆ ಚುನಾವಣೆಯ ಕೊನೆಯ 4 ಹಂತಗಳು ಜಾರ್ಖಂಡ್‌ನಲ್ಲಿ ನಡೆಯಲಿವೆ.

Leave a Comment