ಗಿರೀಶ್ ಕಾರ್ನಾಡ್ ನಿಧನಕ್ಕೆ ರಾಹುಲ್ ಗಾಂಧಿ ಸಂತಾಪ

ನವದೆಹಲಿ,ಜೂನ್ 10-ಪ್ರಸಿದ್ದ ನಾಟಕಕಾರ, ನಟ ಹಾಗೂ ನಿರ್ದೇಶಕ ಗಿರೀಶ್ ಕಾರ್ನಾಡ್ ಅವರ ನಿಧನಕ್ಕೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೋಮವಾರ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ನಾಟಕಕಾರ, ನಟ, ನಿರ್ದೇಶಕನಿಗಿಂತ ಮೇಲಾಗಿ ಅವರೊಬ್ಬ ಮಹಾನ್ ಮಾನವರಾಗಿದ್ದರು, ಗಿರೀಶ್ ಕಾರ್ನಾಡ್ ಅವರ ನಿಧನದಿಂದ ದೇಶ ಮಹಾನ್ ಸುಪುತ್ರನೊಬ್ಬನನ್ನು ಕಳೆದಿಕೊಂಡಿದೆ ಎಂದು ರಾಹುಲ್ ಗಾಂಧಿ ತಮ್ಮ ಟ್ವೀಟ್ ನಲ್ಲಿ ಸಂತಾಪ ಸೂಚಿಸಿದ್ದಾರೆ.
ಗಿರೀಶ್ ಕಾರ್ನಾಡ್ ಅವರ ಬಿಟ್ಟು ಹೋಗಿರುವ ಸೃಜನ ಶೀಲ ಭಂಡಾರ ಮೂಲಕ ಅವರು ಸದಾ ಜನರ ಮನಸ್ಸುಗಳಲ್ಲಿ ಜೀವಂತವಾಗಿರಲಿದ್ದಾರೆ. ಅವರ ಆಗಲಿಕೆಯಿಂದ ಕುಟುಂಬ ಸದಸ್ಯರು ಹಾಗೂ ಜಗತ್ತಿನೆಲ್ಲೆಡೆಯಿರುವ ಅಭಿಮಾನಿಗಳ ದುಃಖ ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಸಂತಾಪ ಸೂಚಿಸಿದ್ದಾರೆ.

Leave a Comment