ಗಿರೀಶ್ ಕಾರ್ನಾಡ್‌ ಬದಲು ಗಿರೀಶ್ ಕಾಸರವಳ್ಳಿ ಎಂದು ಜಯಮಾಲ ಯಡವಟ್ಟು

ಬೆಂಗಳೂರು: ಇಂದು ವಿಧಾನ ಪರಿಷತ್‌ನಲ್ಲಿಯೂ ಕಲಾಪ ಆರಂಭವಾಗುತ್ತಿದ್ದಂತೆ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಯಿತು.

ಈ ವೇಳೆ ಸಭಾ ನಾಯಕಿ ಜಯಮಾಲಾ ಅವರು ಗಿರೀಶ್ ಕಾರ್ನಾಡ್‌ಗೆ ಸಂತಾಪ ಸೂಚನೆ ವೇಳೆ ಮಾಡಿದರು. ಗಿರೀಶ್ ಕಾರ್ನಾಡ್ ಎಂದು ಹೇಳುವ ಬದಲು ಗಿರೀಶ್ ಕಾಸರವಳ್ಳಿ ಎಂದು ಉಲ್ಲೇಖಿಸಿ ಕಾನೂರು ಹೆಗ್ಗಡತಿ ಸಿನಿಮಾದಂತಹ ಅದ್ಭುತ ಸಿನಿಮಾ ಕೊಟ್ಟವರು ಗಿರೀಶ್ ಕಾಸರವಳ್ಳಿ ಎಂದು ಹೇಳಿದರು. ಬಳಿಕ ತಪ್ಪನ್ನು ಸರಿ ಪಡಿಸಿಕೊಂಡು ಗಿರೀಶ್ ಕಾಸರಹಳ್ಳಿ ಅಲ್ಲ ಗಿರೀಶ್ ಕಾರ್ನಾಡ್ ಎಂದು ಹೇಳಿದರು.

Leave a Comment