ಗಿನ್ನಿಸ್ ದಾಖಲೆ ಪಟ್ಟಿಗೆ ಕರಾಟೆ ಶ್ರೀನಾಥ್

ರಾಜ್ಯದ ಕನ್ನಡಿಗ ಡಾ. ಎ.ಪಿ. ಕರಾಟೆ ಶ್ರೀನಾಥ್ ಹೆಸರು ಇದೀಗ ಗಿನ್ನಿಸ್ ದಾಖಲೆ ಪಟ್ಟಿಯಲ್ಲಿ ಸೇರ್ಪಡೆಗೊಂಡಿದೆ. ಹೌದು ಯೋಗಹಾಸನ ಕಲೆಯನ್ನು ಕರಗತ ಮಾಡಿಕೊಂಡಿರುವ ಕರಾಟೆ ಪಟು ಶ್ರೀನಾಥ್ ಅವರ ಈ ಸಾಧನೆಗೆ ಇಡೀ ರಾಜ್ಯವೇ ಹೆಮ್ಮೆಪಡುವಂತಾಗಿದೆ.

ಚೆನ್ನೈನ ಬಸಂತ್ ನಗರ ಬೀಚ್ ಅಂಗಳದಲ್ಲಿ ಯುವ ಯೋಗಮಂದಿರ ಟ್ರಸ್ಟ್ ಆಯೋಜಿಸಿದ ವಿವಿಧ ಬಗ್ಗೆಯ ಸಾಧನೆಗಳನ್ನು ಪ್ರದರ್ಶನದಲ್ಲಿ ರಾಜ್ಯದಿಂದ ಸ್ಪರ್ಧಿಸಿದ್ದ  ಡಾ. ಕರಾಟೆ ಶ್ರೀನಾಥ್‌ಅವರು ಇತರೆ ದೇಶದ ಸಾಧಕರನ್ನು ಹಿಂದಿಕ್ಕಿ ಗಿನ್ನಿಸ್ ದಾಖಲೆ ಪಟ್ಟಿಯಲ್ಲಿ ಸೇರಿಕೊಂಡಿರುವುದು ಹೆಮ್ಮೆಯ ವಿಚಾರ.

ಗಿನ್ನಿಸ್ ದಾಖಲೆ ಸೇರ್ಪಡೆಗೊಂಡ ಕರ್ನಾಟಕದಿಂದ ಆಯ್ಕೆಯಾದ ಡಾ. ಕರಾಟೆ ಶ್ರೀನಾಥ್‌ರವರು ಸತತವಾಗಿ ಮೂರು ನಿಮಿಷಗಳ ಕಾಲ ಭುಜ್ಜಿಪಟಾಸನಂ ಮತ್ತು ಸೇತ್ತುಂಬಂದಾಸನಂ ಎಂಬ ಯೋಗ ಆಸನಗಳನ್ನು ಪ್ರದರ್ಶಿಸುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

ಕಾರ್ಯಕ್ರಮದಲ್ಲಿ ಕರಾಟೆ ಶ್ರೀನಾಥ್ ಅವರಿಗೆ ಚೆನ್ನೈನ ಪ್ರವಾಸೋದ್ಯಮ ಸಚಿವ ವೇಲಾಮಾಂಡಿ ರಾಜೇಂದ್ರನ್‌ರವರು ಗಿನ್ನಿಸ್ ದಾಖಲೆಯ ಪ್ರಮಾಣಪತ್ರ ನೀಡಿ ಗೌರವಿಸಿದರು. ಹಾಗೂ ಅಂತಾರಾಷ್ಟ್ರೀಯ ಯೋಗ ತೀರ್ಪುಗಾರರಾಗಿ ತೇರ್ಗಡೆಯಾದ ಶ್ರೀನಾಥ್ ಅವರಿಗೆ ಬೆಂಗಳೂರಿನ ಕರಾಟೆಯ ಸಂಘ ಸಂಸ್ಥೆಗಳು, ವಿದ್ಯಾರ್ಥಿಗಳು, ಕನ್ನಡ ಪ್ರೇಮಿಗಳು ಅಭಿನಂದಿಸಿ ಗೌರವಿಸುವ ಮೂಲಕ ಅವರನ್ನು ಪ್ರೋತ್ಸಾಹಿಸಿದ್ದಾರೆ.

ಭಾರತ, ಚೈನಾ, ಮಲೇಷಿಯಾ, ಹಾಂಗ್ ಕಾಂಗ್ ಮುಂತಾದ ವಿವಿಧ ದೇಶಗಳಿಂದ ಸುಮಾರು ೧೨೮೧ ಸಾಧಕರು ಸಾಹಸ ಕಲೆ ಪ್ರದರ್ಶನದಲ್ಲಿ ಭಾಗವಹಿಸಿದರು. ಸಾವಿರಾರು ಸಾಧಕರ ನಡುವೆ ಕರುನಾಡ ಕರಾಟೆ ಶ್ರಿನಾಥ್ ಅವರು ಮಾಡಿರುವ ಸಾಧನೆಗೆ ಎಲ್ಲೆಡೆ ಬಾರಿ ಪ್ರಶಂಸೆ ವ್ಯಕ್ತವಾಗಿ ಶುಭಾಶಯ ಕೋರಿದ್ದಾರೆ.

ಈ ಬಗ್ಗೆ ಮಾತನಾಡಿದ ಕರಾಟೆ ಶ್ರೀನಾಥ್ ಅವರು ರಾಜ್ಯದಿಂದ ಭಾಗವಹಿಸಿದ ನಾನು ವಿವಿಧ ಯೋಗಹಾಸನಗಳನ್ನು ಮಾಡುವ ಮೂಲಕ ಗಿನ್ನಿಸ್ ಸೇರ್ಪಡೆಗೆ ಆಯ್ಕೆಗೊಂಡಿರುವುದು ಬಹಳ ಸಂತೋಷವಾಗಿದೆ. ನಮ್ಮ ದೇಶಕ್ಕೆ ಕನ್ನಡ ನಾಡಿನ ಹೆಚ್ಚಿನ ಕೀರ್ತಿಯನ್ನು ತರುವುದು ನನ್ನ ಗುರಿಯಾಗಿತ್ತು.  ನಮ್ಮ ದೇಶ ಹಾಗೂ ರಾಜ್ಯದ ಯುವಕರು ವಿವಿಧ ಕ್ಷೇತ್ರದಲ್ಲಿ ಪ್ರಾಮಾಣಿಕ ಪ್ರಯತ್ನ ಶ್ರಮಪಟ್ಟರೆ ಸಾಧನೆಯೆಂಬ ಗುರಿ ಮುಟ್ಟಲು ಸಾಧ್ಯವಾಗುವುದು ಎಂದು ಸಲಹೆ ನೀಡಿದ್ದಾರೆ.

Leave a Comment