ಗಿಡ ನೆಟ್ಟರಷ್ಟೇ ಸಾಲದು : ಅವುಗಳ ಪಾಲನೆ, ಪೋಷಣೆ ಅತ್ಯವಶ್ಯ

ಮೈಸೂರು. ಜೂ. 28. ಗಿಡ ನೆಟ್ಟ ಮಾತ್ರಕ್ಕೆ ಸುಂದರ ವನವಾಗುವುದಿಲ್ಲ. ಅದರ ಪಾಲನೆ, ಪೋಷಣೆ ಅತ್ಯವಶ್ಯಕ ಎಂದು ಮಹಾರಾಜ ಕಾಲೇಜಿನ ಪ್ರಾಂಶುಪಾಳರಾದ ಪ್ರೊ.ಸಿ.ಪಿ. ಸುನಿತಾ ಹೇಳಿದರು.
ಅವರು ಇಂದು ಬೆಳಿಗ್ಗೆ ಮಹಾರಾಜ ಕಾಲೇಜು ಆವರಣದಲ್ಲಿ ಮಹಾರಾಜ ಕಾಲೇಜು, ಸಂಶೋಧನಾ ವಿದ್ಯಾರ್ಥಿ ವೇದಿಕೆ ಆಯೋಜಿಸಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು. ಹಾಲಿ ಕಾಳೇಜಿನ ಆವರಣದಲ್ಲಿ ಹಲವಾರು ರೀತಿಯ ಬೃಹತ್ ಮರಗಳಿವೆ ಮತ್ತಷ್ಟು ಗಿಡಗಳನ್ನು ನೆಡಲು ಸ್ಧಳಾಭಾವವಿದೆ ಎಂಬುದು ಹಲವರ ಅಭಿಪ್ರಾಯ. ನಾವು ಅದೇ ರೀತಿ ಮುಂದುವರೆದರೆ ಯಾವ ಪ್ರಯೋಜನವೂ ಇಲ್ಲವೆಂಬುದನ್ನು ತಿಳಿದ ಸಂಶೋಧನಾ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿ ಕಾಲೇಜು ಆವರಣದಲ್ಲಿರುವ ಉಪಹಾರ ಗೃಹದ ಬಳಿ ಇರುವ ಖಾಲಿ ಜಾಗದಲ್ಲಿ ವಿಶ್ವಪರಿಸರ ದಿನಾಚರಣೆ ನೆನಪಾರ್ಥ ಇಂದು ಈ ಉತ್ತಮ ಕಾರ್ಯಕ್ರಮವನ್ನು ಆಯೋಜಿಸಿರುವುದು ಹಾಗೂ ಈ ದಿಸೆಯಲ್ಲಿ ಸಂಶೋಧನಾ ವಿದ್ಯಾರ್ಥಿಗಳು ನಮ್ಮೊಂದಿಗೆ ಕೈ ಜೋಡಿಸಿರುವುದು ಸ್ವಾಗತಾರ್ಹ ಎಂದರು.
ಇಂದು ನೆಡಲಾಗಿರುವ ಗಿಡಗಳಿಂದ ಸುಂದರವನವನ್ನು ಕಾಣಲು ಸಾಧ್ಯವಿಲ್ಲ. ಈ ಗಿಡಗಳ ಪಾಲನೆ, ಹಾಗೂ ಪೋಷಣೆ ಬಹಳ ಅವಶ್ಯಕ. ಹಾಗಾಗಿ ಔಷಧಿ ಗಿಡಗಳ ಮಹತ್ವ ಮತ್ತು ಉಪಯುಕ್ತತೆಗಳನ್ನು ಅರಿಯುವ ಸಲುವಾಗಿ ಹಿಂದೆ ಇದ್ದ ಆಯುರ್ವೇದ ಹಾಗೂ ನಾಟಿ ವೈದ್ಯ ಪದ್ಧತಿ ತಾನು ಕಳೆದುಕೊಂಡಿರುವ ಗತ ವೈಭವವನ್ನು ಮರಳಿ ಪಡೆಯುವ ದಿಸೆಯಲ್ಲಿ ಇಂತಹ ಗಿಡಗಳನ್ನು ನೆಡಲಾಗಿದೆ. ಇವುಗಳ ಪಾಲನೆ ಹಾಗೂ ಪೋಷಣೆಯ ಜವಾಬ್ದಾರಿಯನ್ನು ಸಂಶೋಧನಾ ವಿದ್ಯಾರ್ಧಿಗಳೇ ಹೊತ್ತಿರುವುದು ನನಗೆ ಬಹಳ ಸಂತೋಷ ತಂದಿದೆ ಎಂದು ಹೇಳಿದ ಪ್ರೊ. ಸುನಿತಾರವರು ಇಂದಿನ ವಾತಾವರಣದಲ್ಲಿ ಉಸಿರು, ಹಸಿರು, ನೆರಳನ್ನು ಅನುಭವಿಸುತ್ತಿರುವ ನಾವುಗಳು ಈ ಗಿಡಗಳ ಸಂಪೂರ್ಣ ರಕ್ಷಣೆ ಮಾಡುವತ್ತ ಕಂಕಣ ಬದ್ಧರಾಗಿರೋಣ. ಇಂದಿನ ಈ ಕಾರ್ಯಕ್ರಮಕ್ಕೆ ತಮ್ಮೊದಿಗೆ ಸಹಕರಿಸಿದ ಸಂಶೋಧನಾ ವಿದ್ಯಾರ್ಥಿಗಳನ್ನ
ಅಭಿನಂದಿಸಿದರು.
ಸಂಶೋಧನಾ ವಿದ್ಯಾರ್ಥಿ ವೇದಿಕೆ ಅಧ್ಯಕ್ಷ ಲಿಂಗರಾಜ ಕೆಸ್ತೂರು ಮಾತನಾಡಿ ನಮ್ಮ ಕಾಲೇಜಿನಲ್ಲಿ 42 ಮಂದಿ ಸಂಶೋಧನಾ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಅವರು ತಮ್ಮ ಅಧ್ಯಯನದೊಂದಿಗೆ ಪರಿಸರವನ್ನು ರಕ್ಷಿಸುವತ್ತಲೂ ಕಾಳಜಿ ವಹಿಸಿರುವುದು ಉತ್ತಮ ಬೆಳವಣಿಗೆ. ಇತ್ತೀಚೆಗೆ ನಮ್ಮಲ್ಲಿ ಪಾರಂಪಾರಿಕ ಗಿಡ ಮೂಲಕೆಗಳು ಕಣ್ಮರೆಯಾಗುತ್ತಿರುವುದನ್ನು ಗಮನಿಸಿದ ಸಂಶೋಧನಾ ವಿದ್ಯಾರ್ಥಿಗಳು ಕಾಲೇಜು ಆವರಣದಲ್ಲಿ ಲಭ್ಯವಿರುವ ಸ್ಧಳದಲ್ಲಿ ಔಷಧೀಯ ಗಿಡಗಳನ್ನು ಬೆಳಸಲು ಮುಂದಾಗಿದ್ದು, ಈ ಬಗ್ಗೆ ಕಾಲೇಜಿನ ಪ್ರಾಂಶುಪಾಲರೊಂದಿಗೆ ವಿಚಾರ ವಿನಿಮಯ ನಡೆಸಿ ಅವರ ಸಮ್ಮತಿಯಂತೆ ಇಂದು ಗಿಡಗಳನ್ನು ನೆಡಲಾಗುತ್ತಿದೆ. ಪ್ರತಿಯೊಬ್ಬರ ಮೇಲೂ ಪರಿಸರವನ್ನು ರಕ್ಷಿಸುವ ಜವಾಬ್ದಾರಿ ಇದ್ದು, ಅದಕ್ಕೆ ತಕ್ಕಂತೆ ನೆಡೆದುಕೊಂಡಲ್ಲಿ ನಮ್ಮಗಳಲ್ಲರ ಉದ್ದೇಶ ಖಂಡಿತ ಈಡೇರುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.
ಇಂದಿನ ಕಾರ್ಯಕ್ರಮದಲ್ಲಿ ಮೈಸೂರು ವಿ.ವಿ.ಕುಲಪತಿ ಹೇಮಂತ್‍ಕುಮಾರ್, ಕುಲಸಚಿವ ಪ್ರೊ.ಲಿಂಗರಾಜ ಗಾಂಧಿ, ವೈದ್ಯಾಧಿಕಾರಿ ಡಾ|| ಬಸವರಾಜು, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ಕೆ. ಮಂಜಾವರ್, ಮಹಾರಾಕ ಕಾಲೇಜಿನ ಆಡಳಿತಾಥಿಕಾರಿ ಅನಿಟಾ ವಿಮ್ಲಾ ಬ್ರಾಗ್ಸ್, ಸಂಶೋಧನಾ ವಿದ್ಯಾರ್ಥಿ ವೇದಿಕೆಯ ಉಪಾಧ್ಯಕ್ಷರಾದ ಶಾಲಿನಿ, ಕಾರ್ಯದರ್ಶಿ ಶಿವರಾಜು.ಎ. ಹಾಗೂ ಸಂಶೋಧನಾ ವಿದ್ಯಾರ್ಧಿಗಳು ಪಾಲ್ಗೊಂಡಿದ್ದರು.

Leave a Comment