ಗಾಲ್ಫ್ ನಲ್ಲಿ ಪ್ರಶಸ್ತಿ  ಗೆದ್ದ  ಕಪಿಲ್ ದೇವ್

ಟೀಂ ಇಂಡಿಯಾದ ಮಾಜಿ ನಾಯಕ ಕಪಿಲ್, ಕ್ರಿಕೆಟ್ ಜಗತ್ತಿನಲ್ಲಿ ಮಾತ್ರವಲ್ಲ ಗಾಲ್ಫ್ ಜಗತ್ತಿನಲ್ಲೂ ತಮ್ಮ ಶಕ್ತಿ ಪ್ರದರ್ಶಿಸಿದ್ದಾರೆ. ಕಪಿಲ್ ದೇವ್ 1983ರಲ್ಲಿ ಮೊದಲ ಬಾರಿ ಭಾರತಕ್ಕೆ ವಿಶ್ವಕಪ್ ತಂದುಕೊಟ್ಟ ನಾಯಕರು. ಈಗ ಎವಿಟಿ ಚಾಂಪಿಯನ್ಸ್ ಟೂರ್ ಗಾಲ್ಫ್ ಪಂದ್ಯಾವಳಿಯ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.

ಕಪಿಲ್ ದೇವ್, 60 ರಿಂದ 64 ವರ್ಷದೊಳಗಿನವರ ಗಾಲ್ಫ್ ಪಂದ್ಯಾವಳಿಯಲ್ಲಿ ಪಾಲ್ಗೊಂಡು ಕಪ್ ಎತ್ತಿ ಹಿಡಿದಿದ್ದಾರೆ. ಈ ಪಂದ್ಯಾವಳಿಗೆ 10 ನಗರಗಳಿಂದ 100ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಎರಡು ದಿನಗಳಿಂದ ಸತತವಾಗಿ ಸುರಿದ ಮಳೆ ಪಂದ್ಯಕ್ಕೆ ಅಡ್ಡಿಯುಂಟು ಮಾಡಿತ್ತು. ಗೆಲುವು ಯಾವಾಗ್ಲೂ ಖುಷಿ ನೀಡುತ್ತದೆ ಎಂದು ಕಪಿಲ್ ದೇವ್ ಹೇಳಿದ್ದಾರೆ.

ಎವಿಟಿ ಪ್ರವಾಸ ಒಂದು ದೊಡ್ಡ ಪ್ರಯತ್ನ. ಇದು ನಮ್ಮಂತಹ ಹಿರಿಯ ಹವ್ಯಾಸಿಗಳಿಗೆ ಕೆಲವು ಉದ್ದೇಶಗಳಿಗಾಗಿ ನಿಯಮಿತವಾಗಿ ಆಡಲು ಸಹಾಯ ಮಾಡುತ್ತದೆ. ಇದು ಪ್ರತಿಭಾವಂತ ಗಾಲ್ಫ್ ಆಟಗಾರರಲ್ಲಿ ಸ್ಪರ್ಧಾತ್ಮಕ ಮನೋಭಾವವನ್ನು ಹುಟ್ಟುಹಾಕಿದೆ ಎಂದು ಕಪಿಲ್ ದೇವ್ ಹೇಳಿದ್ದಾರೆ.

Leave a Comment