ಗಾರ್ಮೆಂಟ್ಸ್ ಉದ್ಯೋಗಿ ಕಾಣೆ

ತುಮಕೂರು, ಜ. ೬- ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಭೀಮಸಂದ್ರ ಗ್ರಾಮದಲ್ಲಿರುವ ಗಾರ್ಮೆಂಟ್ಸ್‌ನಲ್ಲಿ ಉದ್ಯೋಗ ಮಾಡುತ್ತಿದ್ದ ಲಕ್ಷ್ಮಿದೇವಮ್ಮ ಎಂ.ಆರ್. (19) ಎಂಬ ಯುವತಿ ಡಿ. 21 ರಿಂದ ಕಾಣೆಯಾಗಿದ್ದಾಳೆ ಎಂದು ತಾಯಿ ಗೌರಮ್ಮ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಅಂದು ಬೆಳಿಗ್ಗೆ ಕೆಲಸಕ್ಕೆಂದು ಗಾರ್ಮೆಂಟ್ಸ್‌ಗೆ ಹೋದ ಯುವತಿ ಈವರೆಗೂ ಮರಳಿ ಬಂದಿರುವುದಿಲ್ಲ.  ಹೆಬ್ಬೂರು ಹೋಬಳಿ ಮೇಣಸಂದ್ರ ಗ್ರಾಮದ ವಾಸಿಯಾಗಿರುವ ಲಕ್ಷ್ಮೀದೇವಮ್ಮ ಮನೆಯಿಂದ ಹೋಗುವಾಗ ಬಿಳಿ ಬಣ್ಣದ ಚೂಡಿದಾರ್ ಧರಿಸಿದ್ದಳು.  ಸುಮಾರು 5 ಅಡಿ ಎತ್ತರ, ಗೋಧಿ ಮೈಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟು ಹೊಂದಿರುವ ಈಕೆಗೆ ಕನ್ನಡ, ಹಿಂದಿ ಮತ್ತು ಇಂಗ್ಲೀಷ್ ಭಾಷೆ ಮಾತನಾಡಲು ಬರುತ್ತದೆ.

ಈಕೆಯ ಬಗ್ಗೆ ಸುಳಿವು ಸಿಕ್ಕಿದವರು ಕೂಡಲೇ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ಸಬ್ ಇನ್ಸ್‌ಪೆಕ್ಟರ್ ಮನವಿ ಮಾಡಿದ್ದಾರೆ.

Leave a Comment