ಗಾಂಧಿ 150 ಜನ್ಮವರ್ಷಾಚರಣೆ: ಹಂಪಿ ಉತ್ಸವದಲ್ಲಿ ಜೀವನ ಸಾಧನೆ ಕುರಿತ ಡಿಜಿಟಲ್ ಪ್ರದರ್ಶನ

ಬಳ್ಳಾರಿ. ಜ 10 -ಸುಪ್ರಸಿದ್ಧ ಹಂಪಿ ಉತ್ಸವದ ಹಿನ್ನೆಲೆಯಲ್ಲಿ ಹಂಪಿಯ ಗಜಶಾಲೆ ಆವರಣದ ಬಳಿ‌ ಸ್ವಚ್ಛ ಭಾರತ, ಸಶಕ್ತ ಭಾರತ, ಬಾಪುವಿನ ಕನಸಿನ ಭಾರತ ಎಂಬ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ ಜೀವನ ಸಾಧನೆ ಕುರಿತ ಡಿಜಿಟಲ್ ಚಿತ್ರ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.
ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದಿಂದ ಆಯೋಜಿಸಿರುವ ಈ ಪ್ರದರ್ಶನ ಜನವರಿ 14 ರವರೆಗೆ ಸಾರ್ವಜನಿಕರ ವೀಕ್ಷಣೆಗೆ ಲಬ್ಯವಿದೆ.
ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಹೆಚ್ವುವರಿ‌ ಕಾರ್ಯದರ್ಶಿ ಅತುಲ್ ಕುಮಾರ್ ತಿವಾರಿ ಡಿಜಿಟಲ್ ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ಹಂಪಿ ಉತ್ಸವದ ವೇಳೆ ಬರುವ ಲಕ್ಷಾಂತರ ಪ್ರವಾಸಿಗರಿಗೆ ಗಾಂಧೀಜಿ ಅವರ ಜೀವನ‌ ಮತ್ತು ಹೋರಾಟ ಹಾಗು ಕೇಂದ್ರ ಸರಕಾರದ ವಿವಿಧ ಕಾರ್ಯಕ್ರಮಗಳನ್ನು ಡಿಜಿಟಲ್ ತಂತ್ರಜ್ಞಾನದ ಮೂಲಕ ಜನತೆಗೆ ತಿಳಿಸುವ ಉದ್ದೇಶವಿದೆ ಎಂದರು. .
ಕೇಂದ್ರ ಸಂಪರ್ಕ ಮತ್ತು ಸಂವಹನ ಕಾರ್ಯಾಲಯದ ಮಹಾ ನಿರ್ದೇಶಕ ಸತ್ಯೇಂದ್ರ ಪ್ರಕಾಶ್ ಮಾತನಾಡಿ ಗಾಂಧೀಜಿ ಅವರ ತತ್ವಾದರ್ಶಗಳನ್ನು‌ ಪಾಲಿಸುವುದು ಇಂದಿನ ಅಗತ್ಯವಾಗಿದೆ. ಅವರ ಜೀವನಗಾಥೆಯನ್ನು ಈ‌ ಪ್ರದರ್ಶನದ ಮೂಲಕ ಶಾಲಾ ಮಕ್ಕಳು, ಪ್ರವಾಸಿಗರಿಗೆ ಪರಿಚಯಿಸಲಾಗುತ್ತಿದೆ. ಇದನ್ನು ವೀಕ್ಷಿಸಿ ಜನತೆ ಗಾಂಧೀಜಿ ಅವರ ಆದರ್ಶಗಳನ್ನು ಪಾಲಿಸಲು‌ ಮುಂದಾಗಬೇಕು ಎಂದರು.

Leave a Comment