ಗಾಂಜಾ ಮಾರಾಟ : ತಂದೆ-ಮಗನ ಬಂಧನ

(ನಮ್ಮ ಪ್ರತಿನಿಧಿಯಿಂದ)

ಕಲಬುರಗಿ,ಜೂ.13-ನಗರದ ಬ್ರಹ್ಮಪುರ ಬಡಾವಣೆಯ ಅನಂತಸೇನ ಮಂದಿರದ ಹತ್ತಿರವಿರುವ ಮನೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ತಂದೆ ಮತ್ತು ಮಗನನ್ನು ಪೊಲೀಸರು ಬಂಧಿಸಿದ್ದಾರೆ.

ಭೀಮಶ್ಯಾ ಶಂಕ್ರೆಪ್ಪ ಪರೀಟ್ ಮತ್ತು ಅವರ ಮಗ ರವಿ ಭೀಮಶ್ಯಾ ಪರೀಟ್ ಎಂಬುವವರನ್ನು ಬಂಧಿಸಿ 6 ಸಾವಿರ ರೂಪಾಯಿ ಮೌಲ್ಯದ 960 ಗ್ರಾಂ. ಗಾಂಜಾ ಜಪ್ತಿ ಮಾಡಿದ್ದಾರೆ.

ಮನೆಯಲ್ಲಿ ಗಾಂಜಾ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಬ್ರಹ್ಮಪುರ ಪಿ.ಐ.ಎಸ್.ಎಂ.ಯಾಳಗಿ, ರಾಘವೇಂದ್ರ ನಗರ ಪಿಎಸ್ಐ ಅಕ್ಕಮಹಾದೇವಿ, ಪ್ರೊಬೇಷನರಿ ಪಿಎಸ್ಐ ಸುವರ್ಣ ಮತ್ತು ಸಿಬ್ಬಂದಿ ದಾಳಿ ನಡೆಸಿ ಗಾಂಜಾ ಜಪ್ತಿ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ.

ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.

Leave a Comment