ಗಾಂಜಾ ಮಾರಾಟ: ಆರೋಪಿ ಸೆರೆ

ಕಾಸರಗೋಡು, ನ.೧- ಕುಂದಾಪುರ ಠಾಣಾ ವ್ಯಾಪ್ತಿಯ ಕುಂಭಾಸಿಯ ಹರಿಹರ ದೇವಸ್ಥಾನಕ್ಕೆ ಹೋಗುವ ತಿರುವು ರಸ್ತೆಯ ಉತ್ತರದಲ್ಲಿರುವ ಖಾಲಿ ಜಾಗದ ಬಳಿ ಐ೨೦ ಕಾರಿನಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನನ್ನು ಕಾಳಾವರ ಗ್ರಾಮದ ನಿಶ್ಚಲ್(೨೨) ಎಂದು ಹೆಸರಿಸಲಾಗಿದೆ. ಆರೋಪಿಯಿಂದ ೨೦,೦೦೦ ರೂಪಾಯಿ ಮೌಲ್ಯದ ೬೦೪ ಗ್ರಾಂ ಗಾಂಜಾವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕುಂಭಾಸಿಯ ಹರಿಹರ ದೇವಸ್ಥಾನಕ್ಕೆ ಹೋಗುವ ತಿರುವು ರಸ್ತೆಯ ಸಮೀಪ ಇಬ್ಬರು ನಿಂತುಕೊಂದು ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಬಗ್ಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

Leave a Comment