ಗಲ್ಲಾಪೆಟ್ಟಿಗೆ ಗುದ್ದಾಟದಿಂದ ಹೊರಬಂದ ಅಕ್ಷಯ್-ಸಲ್ಲೂ

ಮುಂಬೈ, ಜೂನ್ 13 – ಮುಂಬರುವ ರಂಜಾನ್ ಹಬ್ಬಕ್ಕೆ ದಬಾಂಗ್ ಸ್ಟಾರ್ ಸಲ್ಮಾನ್ ಖಾನ್ ಅಭಿನಯದ ‘ಇಂಶಾಅಲ್ಲಾ’ ಹಾಗೂ ನಟ ಅಕ್ಷಯ್ ಕುಮಾರ್ ಅಭಿನಯದ ‘ಸೂರ್ಯವಂಶಿ’ ಚಿತ್ರ ಬಿಡುಗಡೆಗೊಳ್ಳಲು ಸಿದ್ಧವಾಗಿದ್ದವು. ಆದರೀಗ ‘ಸೂರ್ಯವಂಶಿ’ ಚಿತ್ರದ ಬಿಡುಗಡೆಯ ದಿನಾಂಕ ಮುಂದೂಡಿದ ಕಾರಣ ಗಲ್ಲಾಪೆಟ್ಟಿಗೆಯ ಗುದ್ದಾಟದಿಂದ ಇಬ್ಬರೂ ನಟರು ಹೊರಬಂದಿದ್ದಾರೆ.
ಪ್ರತಿ ವರ್ಷ ರಂಜಾನ್ ಹಬ್ಬದಂದೇ ನಟ ಸಲ್ಮಾನ್ ಖಾನ್ ಅಭಿನಯದ ಚಿತ್ರವೊಂದು ತೆರೆಗೆ ಬರುವುದು ವಾಡಿಕೆಯಾಗಿ ಬಿಟ್ಟಿದೆ. ನಿರ್ದೇಶಕ ರೋಹಿತ್ ಶೆಟ್ಟಿ ಅವರನ್ನು ಸಲ್ಮಾನ್, ಸಹೋದರರಂತೆ ಭಾವಿಸುತ್ತಾರೆ. ಹೀಗಾಗಿ ‘ಸೂರ್ಯವಂಶಿ’ ಚಿತ್ರದ ಬಿಡುಗಡೆಯ ದಿನಾಂಕ ಮುಂದೂಡಲಾಗಿದೆಯಂತೆ.
‘ಸೂರ್ಯವಂಶಿ’ ಚಿತ್ರದಲ್ಲಿ ಅಕ್ಷಯ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದು, ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಮುಂಬರುವ ರಂಜಾನ್ ಹಬ್ಬದಂದು ಸಲ್ಮಾನ್ ಖಾನ್ ಅಭಿನಯದ ‘ಇಂಶಾಅಲ್ಲಾ’ ಚಿತ್ರ ಬಿಡುಗಡೆಗೊಳ್ಳಲಿದೆ. ಈ ಚಿತ್ರದಲ್ಲಿ ಸಲ್ಮಾನ್ ಖಾನ್, ನಟಿ ಆಲಿಯಾ ಭಟ್ ಅವರೊಂದಿಗೆ ತೆರೆ ಹಂಚಿಕೊಳ್ಳಲಿದ್ದಾರೆ.

ರೋಹಿತ್ ಶೆಟ್ಟಿ ಅವರೊಂದಿಗೆ ಸಲ್ಮಾನ್, ‘ಸೂರ್ಯವಂಶಿ’ ಚಿತ್ರವನ್ನು ಮುಂದಿನ ವರ್ಷ ಮಾರ್ಚ್ 27ರಂದು ಬಿಡುಗಡೆಗೊಳಿಸಬೇಕೆಂದು ಮಾತುಕತೆ ನಡೆಸಿದ್ದಾರಂತೆ.

Leave a Comment