ಗಲ್ಲಾಪೆಟ್ಟಗೆ ಬಾಚಿದ ‘ಐ ಲವ್ ಯು” 325 ಚಿತ್ರಮಂದಿಗಳಲ್ಲಿ ಯಶಸ್ವಿ ಪ್ರದರ್ಶನ

ಬೆಂಗಳೂರು, ಜುಲೈ 1-  ‘ಐ ಲವ್ ಯು’ ಎಂದ ರಿಯಲ್ ಸ್ಟಾರ್ ಉಪೇಂದ್ರ, ನಿರ್ದೇಶಕ ಆರ್ ಚಂದ್ರು ಹಾಗೂ ಚಿತ್ರ ತಂಡಕ್ಕೆ ನಿರಾಸೆಯಾಗಿಲ್ಲ    ಗಲ್ಲಾಪೆಟ್ಟಿಗೆ ಬಾಚಿಕೊಳ್ಳುವಷ್ಟರ ಮಟ್ಟಿಗೆ ತಮ್ಮ ಪ್ರೀತಿ ಏನು ಎಂಬುದನ್ನು ಪ್ರೇಕ್ಷಕರು ತೋರಿಸುತ್ತಿದ್ದಾರೆ  ರಾಜ್ಯಾದ್ಯಂತ 325 ಚಿತ್ರಮಂದಿರಗಳಲ್ಲಿ ‘ಐ ಲವ್ ಯು’ ಯಶಸ್ವಿ ಪ್ರದರ್ಶನ ಮುಂದುವರಿದಿದ್ದು, 50ನೇ ದಿನದ ಸಂಭ್ರಮ ಆಚರಿಸುವ ಲಕ್ಷಣ ಕಂಡುಬಂದಿದೆ

“ಯುವ ಪೀಳಿಗೆ ಹಾಗೂ ಗೃಹಸ್ಥರಿಗೆ ಬೇಕಿರುವ ಅಂಶಗಳಿಂದಾಗಿಯೇ ಚಿತ್ರ ಈ ಬಗೆಯ ಯಶಸ್ಸು ಕಂಡಿದೆ ಎನಿಸುತ್ತದೆ  ಕ್ಲೈಮಾಕ್ಸ್ ಅದ್ಭುತವಾಗಿ ಮೂಡಿಬಂದಿದ್ದು, ಕುಟುಂಬ ಸಮೇತರಾಗಿ ಜನರು ಚಿತ್ರಮಂದಿರಕ್ಕೆ ಬರಲು ಇದೇ ಮುಖ್ಯಕಾರಣವೆನಿಸುತ್ತಿದೆ” ಎಂದು ನಟ ಉಪೇಂದ್ರ ಅಭಿಪ್ರಾಯಪಟ್ಟಿದ್ದಾರೆ

“ವಿಶ್ವಕಪ್ ಕ್ರಿಕೆಟ್ ಸಂದರ್ಭದಲ್ಲಿ ಕಲಾಭಿಮಾನಿಗಳು ಚಿತ್ರ ಮಂದಿರಕ್ಕೆ ಬರುತ್ತಾರೋ ಇಲ್ಲವೋ ಎಂಬ ಅಳುಕಿತ್ತು.  ಆದರೆ ಚಿತ್ರ ಚೆನ್ನಾಗಿದ್ದರೆ ಜನರು ಸ್ವೀಕರಿಸುತ್ತಾರೆ ಎಂಬ ಮಾತು ನಿಜವಾಗಿದ್ದು, 25ನೇ ದಿನದತ್ತ ‘ಐ ಲವ್ ಯು’ ಮುನ್ನುಗ್ಗುತ್ತಿದೆ” ಎಂದು ನಿರ್ದೇಶಕ ಆರ್ ಚಂದ್ರು ಸಂತಸ ಹಂಚಿಕೊಂಡಿದ್ದಾರೆ

ಚಿತ್ರದ ಗಳಿಕೆ ಎಷ್ಟಾಗಿರಬಹುದು ಎಂಬ ಪ್ರಶ್ನೆಗೆ, “ನಿರ್ದೇಶಕ ಆರ್ ಚಂದ್ರು ಅವರು ಇನ್ನೂ 8 ಸಿನಿಮಾಗಳನ್ನು ನಿರ್ಮಿಸಬಹುದಾದಷ್ಟು ಆದಾಯ ಗಳಿಸಿದೆ” ಎಂದು ವಿತರಕರು ಹೇಳಿದ್ದಾರೆ.

Leave a Comment