ಗರ್ಭಿಣಿ ನಾಯಿಗಳಿಗೆ ಸೀಮಂತ ಮಾಡಿದ ಶ್ವಾನಪ್ರಿಯರು

ಬಳ್ಳಾರಿ,ಸೆ.6: ಮಹಿಳೆಯರು ಮೊದಲ ಬಾರಿಗೆ ಗರ್ಭ ಧರಿಸಿದಾಗ ಸೀಮಂತ ಕಾರ್ಯ ಮಾಡೋವುದು ಸಹಜ ಆದರೆ, ನಗರದ ಸ್ವಾನಪ್ರಿಯರೊಬ್ಬರು ತಮ್ಮ ಮುದ್ದಿನ ನಾಯಿಗಳು ಗರ್ಭದರಸಿದ್ದಕ್ಕೆ ಅವುಗಳಿಗೆ ಸೀಮಂತ ಕಾರ್ಯ ಮಾಡಿ ಸಂಭ್ರಮಿಸಿದ್ದಾರೆ.

ನಗರದ ಆರ್ಯುವೇದಕಾಲೇಜಿನ ಬಳಿಯ ವಂದನಾ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ವಿಮಲಾ ಎಂಬುವರು ತಮ್ಮ ಸ್ವಾನಗಳಿಗೆ ಸೀಮಂತ ಕಾರ್ಯವನ್ನು ಮಾಡಿದವರು.

ತಮ್ಮ ಶಾಲೆಯ ಮಹಡಿ ಮನೆಯಲ್ಲೇ ತಂಗಿರುವ ಅವರು, ಪಂಡು ಮತ್ತು ಸ್ವೀಟಿ ಎಂದು ಕರೆಯುವ ಎರಡು ಹೆಣ್ಣು ನಾಯಿಗಳನ್ನು ಸಾಕಿದ್ದಾರೆ. ಅವೆರಡೂ ಈಗ ಗರ್ಭ ಧರಿಸಿ ಒಂದು ತಿಂಗಳಾಗಿದೆ. ಅವು ಎರೆಡು ತಿಂಗಳಲ್ಲಿ ಮರಿ ಹಾಕುವುದರಿಂದ ಅವುಗಳಿಗೆ ಸೀಮಂತ ಕಾರ್ಯ ಹಮ್ಮಿಕೊಂಡರು.

ಸಮಾಜದಲ್ಲಿ ಮಹಿಳೆಯರು ಗರ್ಭ ಧರಿಸಿದರೆ ಮಾತ್ರ ಸೀಮಂತ ಕಾರ್ಯ ಮಾಡುವ ಸಂಪ್ರದಾಯವಿದೆ. ನಮ್ಮ ಮುದ್ದಿನ ಈ ಶ್ವಾನಗಳಿಗೂ ಶಾಸ್ತ್ರೋಕ್ತವಾಗಿ ಸೀಮಂತ ಮಾಡುವ ಎಂದು ಸಂತಸ ಪಟ್ಟಿದ್ದಾರೆ. ಸಂಪ್ರದಾಯದಂತೆ ಒಂಭತ್ತು ಸಿಹಿ ಪದಾರ್ಥಗಳನ್ನು ಮಾಡಿ, ಸ್ವಾನಗಳನ್ನು ಸಿಂಗರಿಸಿ. ಹತ್ತಾರು ಮಹಿಳೆಯರು ಸೇರಿ ಆರತಿ ಬೆಳಗಿದ್ದಾರೆ ಇದೆಲ್ಲವನ್ನೂ ಎರೆಡೂ ನಾಯಿಗಳು ಶಾಂತ ಸ್ವಭಾವದಿಂದ ಕುಳಿತು ಮಾಡಿಸಿಕೊಂಡಿರುವುದು ಅಚ್ಚರಿ ಮೂಡಿಸಿದೆ.

ಸದಾಕಾಲ ನಮ್ಮೊಂದಿಗಿದ್ದು, ನಮ್ಮ ಆಗು, ಹೋಗುಗಳ ಕುರಿತು ನೋಡಿಕೊಳ್ಳುವ ಈ ಪ್ರಾಣಿಗಳಿಗೂ ಮಾನವೀಯತೆ ಇದೆ. ಕೇವಲ ಮಹಿಳೆಯರಿಗಷ್ಟೇ ಈ ಸೀಮಂತ ಕಾರ್ಯ ಸೀಮಿತ ಆಗಬಾರದು. ಅದು ಗರ್ಭ ಧರಿಸುವ ಪ್ರಾಣಿಗಳಿಗೂ ಅನ್ವಯ ಆಗಬೇಕೆಂಬ ಉದ್ದೇಶದಿಂದ ಈ ನಾಯಿಗಳಿಗೆ ಸೀಮಂತ ಕಾರ್ಯ ಮಾಡಲಾಗಿದೆ ಎನ್ನುತ್ತಾರೆ ಶಿಕ್ಷಕಿ ವಿಮಲಾ ಮತ್ತು ಅವರ ಪತಿ ಈಶ್ವರ್.

ಒಟ್ಟಾರೆ ಸೀಮಂತ ಮಾಡಿಕೊಂಡ ಈ ಸ್ವಾನಗಳು ಈಗ ಹೆರಿಗೆಯ ಸಂಭ್ರಮಕ್ಕೆ ಸಿದ್ದವಾಗುತ್ತಿವೆ. ಎಷ್ಟು ಮಕ್ಕಳನ್ನು ತಮ್ಮ ಮಾಲೀಕರಿಗೆ ನೀಡುತ್ತವೆ ಎಂಬದು ಮತ್ತೊಂದು ಕುತೂಹಲವಾಗಿದೆ.

Leave a Comment