ಗಭೀಣಿಯಾದ ನಟಿ ಶ್ರುತಿ ಹರಿಹರನ್

ಬೆಂಗಳೂರು, ಜು ೧೭- ನಟ ಅರ್ಜುನ್ ಸರ್ಜಾ ವಿರುದ್ಧ ಮೀಟೂ ಆರೋಪ ಮಾಡಿ ಚಂದನವನದಲ್ಲಿ ಸಂಚಲನ ಮೂಡಿಸಿದ ನಟಿ ಶ್ರುತಿ ಹರಿಹರನ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಗರ್ಭೀಣಿಯಾಗಿರುವ ವಿಚಾರವನ್ನು ಹಂಚಿಕೊಂಡು ಅಚ್ಚರಿ ಮೂಡಿಸಿದ್ದಾರೆ.

ಅಷ್ಟಕ್ಕೂ ಮದುವೆಯಾಗಿರವ ವಿಚಾರವನ್ನು ಗುಟ್ಟಾಗಿ ಇಟ್ಟಿದ್ದ ಶ್ರುತಿ ಹರಿಹರನ್ ಅವರ ಮದುವೆ ವಿಚಾರ ಇತ್ತೀಚೆಗೆ ಅರ್ಜುನ್ ಸರ್ಜಾ ವಿರುದ್ಧದ ಮೀಟೂ ಆರೋಪದ ವೇಳೆ ಬಹಿರಂಗವಾಗಿತ್ತು. ಈ ವೇಳೆ ಪೊಲೀಸರಿಗೆ ನೀಡಿದ ದೂರಿನ ಪ್ರತಿಯಲ್ಲಿ ತಮ್ಮ ವಿಳಾಸ ಬರೆಯುವಾಗ ಗಂಡನ ಹೆಸರಿನ ಜಾಗದಲ್ಲಿ ರಾಮ್ ಕುಮಾರ್ ಹೆಸರನ್ನು ಶ್ರುತಿ ಹರಿಹರನ್ ಬರೆದಿದ್ದರು. ಉತ್ತಮ ನಟನೆ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಭರವಸೆ ಮೂಡಿಸಿದ ನಟಿ ಶ್ರುತಿ ಹರಿಹರನ್ ಅವರು ಮೀಟೂ ಪ್ರಕರಣದಿಂದ ಭಾರಿ ಸುದ್ದಿ ಮಾಡಿದ್ದರು. ಆನಂತರ ಎಲ್ಲಿಯೂ ಕಾಣಸಿಗದೇ ಕೆಲದಿನಗಳಿಂದ ಮೌನಕ್ಕೆ ಶರಣಾಗಿದ್ದರು.
ಇದೀಗ, ತಾವು ಗರ್ಭಿಣಿಯಾಗಿರುವ ಸಿಹಿಸುದ್ದಿ ನೀಡಿರುವ ಶ್ರುತಿ ಹರಿಹರನ್ ಅಧಿಕೃತವಾಗಿ ಈ ವಿಚಾರವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ನನ್ನೊಳಗೆ ಒಂದು ಜೀವ ಉಸಿರಾಡುತ್ತಿದೆ. ಇದು ನನ್ನ ಹೊಸ ಜರ್ನಿಯ ಆರಂಭವಷ್ಟೇ. ನಿನ್ನನ್ನು ನೋಡಲು ನಾವು ಕಾತುರರಾಗಿದ್ದೇವೆ ಎಂದು ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿರುವ ಶ್ರುತಿ ಹರಿಹರನ್ ಈ ಫೋಟೋವನ್ನು ಕ್ಲಿಕ್ಕಿಸಿದ್ದು ತನ್ನ ಮಗುವನ್ನು ನೋಡಲು ಬಹಳ ಕುತೂಹಲದಿಂದ ಕಾಯುತ್ತಿರುವ ಅಪ್ಪ ರಾಮ್‌ಕುಮಾರ್’ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ.
ಕೇರಳದ ಕಲರಿಪಯಟ್ಟು ಕಲಾವಿದ ಮತ್ತು ಕೋರಿಯೋಗ್ರಾಫರ್ ಆಗಿರುವ ರಾಮ್‌ಕುಮಾರ್ ಜೊತೆಗೆ ಶ್ರುತಿ ಹರಿಹರನ್ ಮದುವೆಯಾಗಿದ್ದಾರೆ. ಕನ್ನಡದಲ್ಲಿ ’ಹ್ಯಾಪಿ ನ್ಯೂ ಇಯರ್’ ಸಿನಿಮಾ ಆದ ಬಳಿಕ ಅವರಿಬ್ಬರೂ ಗುಟ್ಟಾಗಿ ಮದುವೆಯಾಗಿದ್ದರು. ಕನ್ನಡ ಮಾತ್ರವಲ್ಲದೆ ಮಲೆಯಾಳಂ ಸಿನಿಮಾಗಳಲ್ಲೂ ನಟಿಸಿರುವ ಶ್ರುತಿ ಹರಿಹರನ್ ಈ ’ಲೂಸಿಯಾ’ ಸಿನಿಮಾಗೂ ಮೊದಲು ಕೋರಿಯೋಗ್ರಾಫರ್ ಆಗಿದ್ದವರು. ಇತ್ತೀಚೆಗೆ ಮನ್ಸೋರೆ ನಿರ್ದೇಶನದ ’ನಾತಿಚರಾಮಿ’ ಸಿನಿಮಾಗೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾದರೂ ಬಾಕ್ಸ್ ಆಪೀಸ್‌ನಲ್ಲಿ ಹೆಚ್ಚೇನೂ ಸದ್ದು ಮಾಡಲಿಲ್ಲ. ಇದಕ್ಕೆ ಮೀಟೂ ಪ್ರಕರಣವೂ ಕಾರಣ ಎನ್ನಲಾಗಿತ್ತು.

Leave a Comment