ಗದ್ದೆ ಕೆಲಸಕ್ಕೆ ಬಂದಿದ್ದ ಯುವಕ ಶಂಕಾಸ್ಪದ ಸಾವು

ಉಡುಪಿ, ಅ.೧೬- ಭತ್ತದ ಕಟಾವು ಕೆಲಸಕ್ಕೆ ಬಂದಿದ್ದ ಯುವಕ ಶಂಕಾಸ್ಪದವಾಗಿ ಮೃತಪಟ್ಟ ಘಟನೆ ಬೆಳ್ಳೆ ಗ್ರಾಮದ ಹಾಡಿಯಲ್ಲಿ ನಡೆದಿದೆ. ಮೃತರನ್ನು ವೇಣುಗೋಪಾಲ್(೧೮) ಎಂದು ಗುರುತಿಸಲಾಗಿದೆ. ಬೆಳ್ಳೆ ಗ್ರಾಮದ ಲೀನಾ ಡಿ ಅಲ್ಮೇಡಾ ಎಂಬವರ ಗದ್ದೆಯ ಭತ್ತ ಕಟಾವು ಮಾಡಲು ವೇಣುಗೋಪಾಲ ಹಾಗೂ ಅರವಿಂದ ಬಂದಿದ್ದು ಈ ವೇಳೆ ಅಲ್ಲೇ ಸಮೀಪದ ಹಾಡಿಯಲ್ಲಿ ಮರದ ಕೊಂಬೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿದ ಸ್ಥಿತಿಯಲ್ಲಿ ವೇಣುಗೋಪಾಲ್ ಪತ್ತೆಯಾಗಿದ್ದಾನೆ. ಆತ ಜೀವಂತ ಇರಬಹುದೆಂಬ ಶಂಕೆಯಲ್ಲಿ ಮೃತದೇಹವನ್ನು ಸ್ಥಳದಿಂದ ಹೊತ್ತುಕೊಂಡು ಬಂದು ರಸ್ತೆಯ ಬಳಿ ಹಾಕಿರುವುದಾಗಿ ಅರವಿಂದ ಹೇಳಿದ್ದಾನೆ. ವೇಣುಗೋಪಾಲ್ ಮರಣದಲ್ಲಿ ಸಂಶವಿರುವುದಾಗಿ ರಫೇಲ್ ಡಿಸೋಜ ನೀಡಿರುವ ದೂರಿನಂತೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment