ಗದಗದಲ್ಲಿ ಮತ್ತೆ 15 ಕೋವಿಡ್ ಪಾಸಿಟಿವ್ ಪ್ರಕರಣ ದೃಢ

ಗದಗ, ಮೇ 23 -ಗದಗ ಜಿಲ್ಲೆಗೆ ಗುಜರಾತದಿಂದ ಹಿಂದಿರುಗಿದ 15 ಮಂದಿಯಲ್ಲಿ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.

25 ವರ್ಷದ ಪುರುಷ ಪಿ-1744, 17 ವರ್ಷದ ಪುರುಷ ಪಿ-1745, ಮಹಾರಾಷ್ಟ್ರದಿಂದ ಹಿಂದುರಿಗಿದ 7 ವರ್ಷದ ಹೆಣ್ಣು ಮಗು ಪಿ-1746, 20 ವರ್ಷದ ಪುರುಷ ಪಿ-1747, 50ವರ್ಷದ ಮಹಿಳೆ ಪಿ-1748, ರಾಜಸ್ಥಾನ ದಿಂದ ಹಿಂದಿರುಗಿದ 17 ವರ್ಷದ ಹೆಣ್ಣುಮಗಳು ಪಿ-1763, ಪಿ-913 ಪ್ರಕರಣ ಸಂಪರ್ಕಿತ 15 ವರ್ಷದ ಗಂಡುಮಗ ಪಿ-1794, 17 ವರ್ಷದ ಗಂಡುಮಗ ಪಿ-1795, 50 ವರ್ಷದ ಮಹಿಳೆ ಪಿ-1932, 20 ವರ್ಷದ ಹೆಣ್ಣು ಮಗಳು ಪಿ-1933, 22 ವರ್ಷದ ಹೆಣ್ಣು ಮಗಳು ಪಿ-1934, 18 ವರ್ಷದ ಗಂಡುಮಗ ಪಿ-1935, 18 ವರ್ಷದ ಹೆಣ್ಣು ಮಗಳು ಪಿ-1936, 8 ವರ್ಷದ ಹೆಣ್ಣು ಮಗಳು ಪಿ-1937, 21 ವರ್ಷದ ಗಂಡುಮಗ ಪಿ-1938 ಒಟ್ಟು 15 ಕೋವಿಡ್-19 ಸೋಂಕು ಧೃಡಪಟ್ಟಿದ್ದು ಅವರೆಲ್ಲರಿಗೂ ನಿಗದಿತ ಕೊವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಎಂ.ಜಿ.ಹಿರೇಮಠ ತಿಳಿಸಿದ್ದಾರೆ.

ಸೋಂಕಿತರ ಪ್ರಯಾಣದ ವಿವರ:- ದಿ. 18ರಂದು ಗುಜರಾತದ ಅಹಮದಾಬಾದದಿಂದ ಎರಡು ವಾಹನಗಳ ಮೂಲಕ ಒಟ್ಟು 17ಜನ ಜಿಲ್ಲೆಗೆ ಆಗಮಿಸಿದ್ದು ಇದರಲ್ಲಿ ಪಿ-1744 ಹಾಗೂ ಪಿ-1745 ಇವರು ಎರಡು ಕೋವಿಡ್-19 ಸೋಂಕು ಧೃಡಪಟ್ಟಿದೆ. ಪ್ರಾಥಮಿಕ ಸಂಪರ್ಕಿತ ಉಳಿದ 15 ಜನರನ್ನು ನಿಗಾದಲ್ಲಿರಿಸಲಾಗಿದೆ. ಮಹಾರಾಷ್ಟ್ರದಿಂದ ನಿಪ್ಪಾಣಿ ವರೆಗೆ ಬಾಡಿಗೆ ವಾಹನದ ಮೂಲಕ ಬಂದು ನಿಪ್ಪಾಣಿಯಿಂದ ಗದಗ ವರೆಗೆ ಲಾರಿ ಮೂಲಕ ಜಿಲ್ಲೆಗೆ ಆಗಮಿಸಿದ್ದ 4 ಜನರಲ್ಲಿ ಪಿ-1746, ಪಿ-1747, ಪಿ-1748 ಮೂರ ಜನರಿಗೆ ಸೋಂಕು ದೃಡಪಟ್ಟಿದ್ದು ಪ್ರಾಥಮಿಕ ಸಂಪರ್ಕಿತ ಒಬ್ಬರನ್ನು ನಿಗಾದಲ್ಲಿರಿಸಲಾಗಿದೆ.

ಮೇ 18 ರಂದು ರಾಜಸ್ಥಾನದ ಅಜ್ಮೀರ ಧಾರ್ಮಿಕ ಕ್ಷೇತ್ರಕ್ಕೆ ಭೇಟಿ ನೀಡಿದ ಲಕ್ಷ್ಮೇಶ್ವರ ತಾಲೂಕಿನ 4 ಕುಟುಂಬದ ಒಟ್ಟು 17 ಜನರಲ್ಲಿ ಪಿ-1763ಗೆ ಸೋಂಕು ಧೃಡಪಟ್ಟಿದ್ದು ಪ್ರಾಥಮಿಕ ಸಂಪರ್ಕಿತ 16, ದ್ವೀತಿಯ ಸಂಪರ್ಕಿತ 5 ಜನರನ್ನು ನಿಗಾದಲ್ಲಿರಿಸಲಾಗಿದೆ.

ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯ ಗಂಜಿ ಬಸವೇಶ್ವರ ವೃತ್ತದ ನಿರ್ಬಂಧಿತ ಪ್ರದೇಶದಲ್ಲಿ ಸೋಂಕು ಧೃಡಪಟ್ಟ ಪಿ-1933 ಸಂಪರ್ಕಿತ ಪಿ-1794, ಪಿ-1795, ಪಿ-1932, ಪಿ-1933, ಪಿ-1934, ಪಿ-1935, ಪಿ-1936, ಪಿ-1937, ಪಿ-1938 ಗೆ ಸೋಂಕು ಧೃಡಪಟ್ಟಿರುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Leave a Comment