ಗಣಿ ಸ್ತ್ರೀರೋಗ ತಜ್ಞ..

* ಚಿಕ್ಕನೆಟಕುಂಟೆ ಜಿ,ರಮೇಶ್
ಕಿರುತೆರೆಯಿಂದ ’ಚಮಕ್ ನೀಡುತ್ತಲೇ ಹಿರಿತೆರೆಗೆ ಸುನಾಮಿ ರೀತಿ ಅಪ್ಪಳಿಸಿದ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಮೊದಲ ಚಿತ್ರದಲ್ಲಿ ಚಿತ್ರರಂಗದ ಮಂದಿ ’ಚಮಕ್ ನೀಡಿದ ನಿರ್ದೇಶಕ ಸುನಿ ಜೋಡಿ ಮೊಟ್ಟ ಮೊದಲ ಬಾರಿಗೆ ಒಂದಾಗಿದೆ.ಇಬ್ಬರೂ ಸೇರಿ “ಚಮಕ್ ನೀಡಲು ನಿರ್ಧರಿಸಿದ್ದಾರೆ. ಅದಕ್ಕಾಗಿ ದಿನಾಂಕವನ್ನೂ ನಿಗಧಿ ಮಾಡಿದ್ದಾರೆ.

ಈ ಜೋಡಿಗೆ ಕಿರಿಕ್‌ಪಾರ್ಟಿಯ ಚೆಲುವೆ ರಶ್ಮಿಕಾ ಮಂದಣ್ಣ ಕೈಜೋಡಿದ್ದಾರೆ. ಹೀಗಾಗಿ ಚಮಕ್‌ಗಳ ಮೇಲೆ ’ಚಮಕ್ ’ನೀಡಲು ಚಿತ್ರತಂಡ ಮುಂದಾಗಿದೆ.ಯಾವ ರೀತಿಯ ಚಮಕ್, ಏನೆಲ್ಲಾ ಇರುತ್ತದೆ ಎನ್ನುವುದನ್ನು ಚಿತ್ರ ಬಿಡುಗಡೆಯಾಗವರೆಗೂ ಕಾಯಬೇಕು.ಅಲ್ಲಿಯವರೆಗೂ ಬರೀ ’ಚಮಕ್.

ನಿರ್ದೇಶಕ ಸುನಿ ಮತ್ತು ಗಣೇಶ್ ಜೋಡಿಯ ಚಮಕ್ ಚಿತ್ರ ಪೂರ್ಣಗೊಂಡಿದ್ದು, ವರ್ಷಾಂತ್ಯಕ್ಕೆ ತೆರೆಗೆ ಬರಲಿದೆ.ಕಳೆದವಾರ ಚಿತ್ರದ ಧ್ವನಿ ಸುರುಳಿ ಬಿಡುಗಡೆ ಸಮಾರಂಭವನ್ನು ಆಯೋಜಿಸಲಾಗಿತ್ತು.ತೆಲುಗು ಚಿತ್ರರಂಗದಲ್ಲಿ ಅರ್ಜುನ್ ರೆಡ್ಡಿ ಚಿತ್ರದ ಮೂಲಕ ಭರವಸೆ ಮೂಡಿಸಿರುವ ವಿಜಯ್ ದೇವರುಕೊಂಡ ಮತ್ತು ಜಾನಪದ ಗಾಯಕಿ ಸುಕ್ರಿ ಬೊಮ್ಮನಗೌಡ ಅತಿಥಿಯಾಗಿ ಆಗಮಿಸಿ ಚಿತ್ರಕ್ಕೆ ಮತ್ತು ತಂಡವನ್ನು ಹರಸಿ ಹಾರೈಸಿದರು. ಈ ವೇಳೆ ಸುಕ್ರಿ ಅಜ್ಜಿಯನ್ನು ಗೌರವಿಸಿತು ಚಿತ್ರತಂಡ.

ಈ ವೇಳೆ ಮಾತಿಗಿಳಿದ ನಿರ್ದೇಶಕ ಸುನಿ, ಚಿತ್ರದಲ್ಲಿ ಐದು ಹಾಡುಗಳಿದ್ದು ಎಲ್ಲಾ ಹಾಡುಗಳನ್ನು ಬರೆಯಬೇಕು ಎಂದುಕೊಂಡಿದ್ದೆ. ಕೆಲಸದ ಒತ್ತಡದಿಂದ ಬರೆಯಲು ಆಗಲಿಲ್ಲ, ಪತ್ನಿ ಸೌಂದರ್ಯಗೌಡ ಸೇರಿದಂತೆ ಎಲ್ಲರೂ ಹೊಸಬರೇ ಬರೆದಿದ್ದಾರೆ. ಚಿತ್ರಕ್ಕೆ ಖುಷಿ ಖುಷಿಯಾಗಿ ಎಂದು ಹೆಸರಿಡಬೇಕು ಎಂದುಕೊಂಡಿದ್ದೆ. ಚಿತ್ರದಲ್ಲಿ ಅನೇಕ ಚಮಕ್‌ಗಳಿವೆ. ಚಮಕ್ ಎಂದು ಹೆಸರಿಡುವಂತೆ ನಟ ಗಣೇಶ್ ಸೂಚಿಸಿದರು. ಅದರಂತೆ ಹೆಸರಿಡಲಾಗಿದೆ.

ಚಿತ್ರದಲ್ಲಿ ಗಣೇಶ್ ಸ್ತ್ರೀರೋಗ ತಜ್ಞ. ಹಸು ಕರು ಹಾಕಿದರೆ, ಪಕ್ಷಿ ಮೊಟ್ಟೆ ಇಟ್ಟರೆ ಆ ಬಗ್ಗೆ ಕುತೂಹಲಹೊಂದಿದವರು. ಅಲ್ಲದೆ ಮಾಡ್ರರ್ನ್ ಶ್ರೀರಾಮ. ದಿನಾ ಪಾರ್ಟಿ ಮಾಡುವ ಜಾಯಮಾನ ಹೊಂದಿದವರು. ಈ ತಿಂಗಳ ೨೯ಕ್ಕೆ ಚಿತ್ರವನ್ನು ಬಿಡುಗಡೆ ಮಾಡಲು ಮುಂದಾಗಿರುವುದಾಗಿ ಹೇಳಿಕೊಂಡರು.

ನಟ ಗಣೇಶ್,ಚಿತ್ರದ ಟ್ರೈಲರ್ ನೋಡಿ ಎಲ್ಲರೂ ಲೈಟ್ ಯಾವಾಗ ಆಫ್ ಮಾಡುತ್ತೀಯಪ್ಪ ಎಂದು ಕಿಚಾಯಿಸುತ್ತಾರೆ. ಚಿತ್ರ ಮನರಂಜನೆ ನೀಡುವುದರಲ್ಲಿ ಯಾವುದೇ ಸಂಶವಿಲ್ಲ. ನಿರ್ದೇಶಕ ಸುನಿ ಒಳ್ಳೆಯ ಪ್ರಯತ್ನ ಮಾಡಿದ್ದಾರೆ. ಕಿರುತೆರೆಯಲ್ಲಿದ್ದಾಗ ದಿನಕ್ಕೆ ನಾಲ್ಕೈದು ಬಾರಿಯಂತೆ ಸಾವಿರಾರು ಬಾರಿ ಚಮಕ್ ನೀಡಿದ್ದೇನೆ. ಹಾಡುಗಳು ಚೆನ್ನಾಗಿವೆ. ಎಲ್ಲರಿಗೂ ಚಿತ್ರ ಇಷ್ಟವಾಗಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.

ನಟಿ ರಶ್ಮಿಕಾ ಮಂದಣ್ಣ, ಕಥೆ ಕೇಳಿದ ತಕ್ಷಣ ಚಿತ್ರದಲ್ಲಿ ನಟಿಸುವ ಇಷ್ಟವಾಯಿತು. ಚಿತ್ರದಲ್ಲಿ ಗೃಹಣಿಯ ಪಾತ್ರ ನನ್ನದು. ಹೊಸ ಅನುಭವ ನೀಡಿದೆ. ಎಲ್ಲರಿಗೂ ಚಿತ್ರ ಇಷ್ಟವಾಗಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.

ತೆಲುಗು ನಟ ವಿಜಯ್ ದೇವರಕೊಂಡ, ನಿರ್ದೇಶಕ ಸುನಿ ಅವರ ಸಿಂಪಲ್ಲಾಗಿ ಒಂದ್ ಲವ್ ಸ್ಟೋರಿ ಚಿತ್ರದ ಯಶಸ್ಸು ತೆಲುಗು ಚಿತ್ರರಂಗದಲ್ಲಿಯೂ ಸದ್ದು ಮಾಡಿತ್ತು. ಆಗಲೇ ಅವರ ಬಗ್ಗೆ ಕೇಳಿದ್ದೆ. ಚಿತ್ರಕ್ಕೆ ಮತ್ತು ತಂಡಕ್ಕೆ ಒಳ್ಳೆಯದಾಗಿ ಎಂದು ಹಾರೈಸಿದರು. ಚಿತ್ರಕ್ಕೆ ಮೈಸೂರಿನ ಟಿ.ಆರ್ ಚಂದ್ರಶೇಖರ್ ಬಂಡವಾಳ ಹಾಕಿದ್ದಾರೆ. ಜೂಡಾ ಸ್ಯಾಂಡಿ ಐದು ಹಾಡುಗಳಿಗೆ ಸಂಗೀತ ನೀಡಿದ್ದು ಸಂತೋಪ್ ರೈ ಪಾತಾಜೆ ಕ್ಯಾಮರ ಹಿಂದೆ ಕೆಲಸ ಮಾಡಿದ್ದಾರೆ.

Leave a Comment