ಗಣಿ ಸಂಪತ್ತಿಗಾಗಿ ದೇವಸ್ಥಾನವನ್ನೇ ಧ್ವಂಸ ಮಾಡಿದವರಿಗೆ ದೇವರೇ ಪಾಠ ಕಲಿಸಿದ್ದಾರೆ: ಕುಮಾರಸ್ವಾಮಿ

ಬಳ್ಳಾರಿ, ನ.1: ಇಲ್ಲಿನ ಮಣ್ಣಿಗೆ ಚಿನ್ನದ ಬೆಲೆ ಇದೆ. ಇದರಿಂದ ಗಣಿ ಸಂಪತ್ತಿಗಾಗಿ ದೇವಸ್ಥಾನವನ್ನೇ ಧ್ವಂಸ ಮಾಡಿದವರಿಗೆ ದೇವರೇ ಪಾಠ ಕಲಿಸಿದ್ದಾರೆ. ಅದಿರಿನ ಸಂಪತ್ತು ಕೆಲವರ ಪಾಲಾಗಿ ಶ್ರೀಮಂತರಾದರೆ. ಹೊರತು ಜನತೆಗೆ ಸಹಕಾರಿಯಾಗಲಿಲ್ಲ. ತಾವು ಈ ಹಿಂದೆ ಸಿಎಂ ಆದಾಗ ಈ ಜಿಲ್ಲೆಯ ಬಿಜೆಪಿ ಶಾಸಕ, ಸಚಿವರು ತಮಗೆ ಸರಕಾರ ನಡೆಸಲು ನೀಡಿದ ಕಿರಿಕಿರಿಯನ್ನು ಮುಖ್ಯ ಮಂತ್ರಿ ಕುಮಾರಸ್ವಾಮಿ ವಿವರಿಸಿದರು.

ಅವರು ನಿನ್ನೆ ರಾತ್ರಿ ನಗರ ಮುನಿಷಿಪಲ್ ಹೈಸ್ಕೂಲ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಜಂಟಿ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು. ವಯಕ್ತಿಕ ಟೀಕೆಗಳಿಂದ ಗೆಲಿಯುತ್ತೇವೆ ಎಂದು ಭಾವಿಸಿದ್ದರೆ ಅದು ತಪ್ಪಾಗಲಿದೆ. ಅಕ್ರಮ ಹಣ ಸಂಗ್ರಹಿಸಿ ಶಾಸಕರನ್ನು ಖರೀದಿ ಮಾಡಿ ಸರಕಾರ ಬೀಳಿಸಲು ಹೊರಟಿದ್ದಿರಿ ಅದಕ್ಕೆ ಶಾಸಕರು ಸಿದ್ದರಿಲ್ಲ ಎಂದರು.

ಇಂದಿನಿಂದ ರಾಜ್ಯದಲ್ಲಿ ವೃದ್ದರಿಗೆ ಆರು ನುರು ರೂಪಾಯಿ ಇದ್ದ ಮಾಶಾಸನವನ್ನು ಒಂದು ಸಾವಿರ ರೂಪಾಯಿ ನೀಡುವ ಮತ್ತು ಗರ್ಭಿಣಿ ಸ್ತೀಯರಿಗೆ ಆರು ತಿಂಗಳ ಕಾಲ ತಾಯಿ ಮಗುವಿನ ಆರೈಕೆಗೆ ಮಾಸಿಕ ಎರೆಡು ಸಾವಿರ ರೂಪಾಯಿ ನೀಡುವ ಯೋಜನೆ ಜಾರಿಗೆ ಬರಲಿದೆಂದು ತಿಳಿಸಿದರು.

ಹಿಂದನ ಸರಕಾರದ ಯೋಜನೆಗಳನ್ನು ಮುಂದುವರಿಸಿಕೊಂಡು ಹೋಗುತ್ತಿದ್ದು. ಈ ಸರಕಾರದಲ್ಲಿ ಈ ವರ್ಷದ ಸಹಕಾರಿ ಬ್ಯಾಂಕ್‍ಗಳಲ್ಲಿನ 9458 ಕೋಟಿ ರೂಪಾಯಿಗಳನ್ನು ಮನ್ನಾ ಮಾಡುವ ನಿರ್ಧಾರ ತೆಗೆದುಕೊಂಡಿದೆ. ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿನ 35 ಸಾವಿರ ಕೋಟಿ ರೂಪಾಯಿಗಳ ಸಾಲ ಮನ್ನಾ ಮಾಡಲು ಈಗಾಗಲೇ ಕ್ರಮ ಕೈಗೊಂಡಿದೆಂದರು.

ಇದಕ್ಕೆ ಬಿಜೆಪಿಯವರು ಎಲ್ಲಿ ಸಾಲ ಮನ್ನಾ ಮಾಡಿದ್ದೀರಿ ಎಂದು ಕೇಳುತ್ತಾರೆ. ಉತ್ತರ ಪ್ರದೇಶದಲ್ಲಿ ಅವರ ಪಕ್ಷರ ಸರಕಾರ ಹೇಳಿ ಎರೆಡು ವರ್ಷ ಆದರೂ ಈ ಕ್ಷಣದ ವರೆಗೆ ಎಷ್ಟು ಹಣ ಬಿಡುಗಡೆ ಮಾಡಿದ್ದಾರೆ ತಿಳಿಸಿ. ಆದರೆ ನಮ್ಮ ಸರಕಾರ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿನ ಸಾಲ ಮನ್ನಾಗೆ ಈ ವರ್ಷ 6500 ಕೋಟಿ ರೂಪಾಯಿ ತೆಗೆದಿರಿಸಿದ್ದು ಮುಂದಿನ ವರ್ಷದ ಜುಲೈ ಒಳಗೆ ಎಲ್ಲಾ ಸಾಳ ಮನ್ನಾ ಮಾಡಲು ನಿರ್ಧರಿಸಿದ್ದು. ಪ್ರತಿ ಒಬ್ಬ ರೈತನಿಗೆ ರಾಷ್ಟ್ರೀಕೃಥ ಬ್ಯಾಂಕ್‍ಗಳಲ್ಲಿ 2 ಲಕ್ಷ ರೂಪಾಯಿ ಮತ್ತು ಸಹಕಾರಿ ಬ್ಯಾಂಕ್‍ನಲ್ಲಿ ಸಾಲ ಮನ್ನಾ ಆಗಲಿದೆಂದು ಹೇಳಿದರು.

ರಾಜ್ಯದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಒಂದಾಗಿ ದೇಶದಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ. ಒಮ್ಮತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು. ಎಲ್ಲಾ ಕ್ಷೇತ್ರಗಳಲ್ಲಿ ಮೈತ್ರಿ ಸರಕಾರದ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕೆಂದು ಮನವಿ ಮಾಡಿದ ಅವರು. ಕರ್ನಾಕದ ಈ ಉಪ ಚುನಾವಣೆಗಳ ಫಲಿತಾಂಶ ಮುಂದಿನ ದೇಶದ ರಾಜಕೀಯ ಭವಿಷ್ಯವನ್ನು ಬದಲಾವಣೆ ಮಾಡಲಿಕ್ಕೆ ದಿಕ್ಸೂಚಿ ಆಗಲಿದೆಂದರು.

ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಮಾತನಾಡಿ 371 ಜೆ ಆಗಬೇಕೆಂದು ಸಂಸತ್‍ನಲ್ಲಿ ಬಿಜೆಪಿ ಮುಖಂಡ ಶ್ರೀರಾಮುಲು ಮಾತಾಡಿಲ್ಲ ಎಂದು ಆರೋಪಿಸಿದ ಅವರು ರಾಜ್ಯದ ಉಪ ಚುನಾವಣೆಯ ಎಲ್ಲಾ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳು ಜಯ ಸಾಧಿಸಲಿದ್ದಾರೆಂಬ ವಿಶ್ವಾಸವ್ಯಕ್ತಪಡಿಸಿ. ಭಾಷಣದುದ್ದಕ್ಕೂ ಶ್ರೀರಾಮುಲು ಅವರನ್ನು ಟೀಕೆ ಮಾಡಿದರು.

ಲೋಕಸಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇದೆ ಎನ್ನುವ ಅವರು ಮತ್ತೊಂದು ಕಡೆ ಸ್ವಯತ್ತ ಸಂಸ್ಥೆಗಳನ್ನು ದುರ್ಬಳಕೆ ಮಾಡುತ್ತಿದ್ದಾರೆಂದು ಆರೋಪಿಸಿದರು.

ಯಾವ ಪಕ್ಷ ಹೆಚ್ಚನ ಸ್ಥಾನಗಳನ್ನು ಗೆಲ್ಲುತ್ತಾರೆ ಅವರು ಪ್ರಧಾನಿ ಆಗುತ್ತಾರೆ ಎಂಬುದನ್ನು ಮೈತ್ರಿ ಪಕ್ಷಗಳು ಒಪ್ಪಿಕೊಂಡಿದ್ದು ಎಲ್ಲರೂ ಸೇರಿ ಬರುವ ಚುನಾವಣೆಯಲ್ಲಿ ಬಿಜೆಪಿ ಸರಕಾರವನ್ನು ತೊಲಗಿಸಲಿದೆಂದರು.

ಸಮಾರಂಭದಲ್ಲಿ ಸಚಿವರು, ಶಾಸಕರು, ಸಂಶದರು ಮತ್ತು ಜೆಡಿಎಸ್ ಹಾಗು ಕಾಂಗ್ರೆಸ್ ಮುಖಂಡರು ಪಾಲ್ಗೊಂಡಿದ್ದರು.

Leave a Comment