ಗಣಿಗಾರಿಕೆ ನಿಷೇಧ 25 ಲಕ್ಷ ಜನರ ಬದುಕು ಅತಂತ್ರ

ಬೆಂಗಳೂರು, ಸೆ. ೧೧- ಕರ್ನಾಟಕ, ಗೋವಾ, ಒರಿಸ್ಸಾ, ರಾಜ್ಯಗಳಲ್ಲಿ ಗಣಿಗಾರಿಕೆ ನಿಷೇಧ ಮತ್ತು ಸ್ಥಗಿತದ ವಿವಿಧ ಕಾರಣಗಳಿಂದಾಗಿ 2.5 ಲಕ್ಷ ಮಂದಿ ಉದ್ಯೋಗ ಕಳೆದು ಕೊಂಡಿದ್ದು, ಸರಿಸುಮಾರು 25 ಲಕ್ಷ ಜನರು ಬದುಕು ತೊಂದರೆಗೆ ಸಿಲುಕವಂತಾಗಿದೆ ಎಂದು ಭಾರತೀಯ ಖನಿಜ ಕೈಗಾರಿಕೆಗಳ ಒಕ್ಕೂಟದ ಅಧ್ಯಕ್ಷ ಸುನೀಲ್ ದುರ್ಗರ್ ಇಂದಿಲ್ಲಿ ಹೇಳಿದ್ದಾರೆ.
ದೇಶಾದ್ಯಂತ ಕೈಗಾರಿಕಾ ಪರಿವಾನಿಗೆಗಾಗಿ 60 ಸಾವಿರಕ್ಕೂ ಅಧಿಕ ಪರವಾನಿಗಿಗಳು ಬಾಕಿಯಿದ್ದು, ಅವುಗಳ ಪೈಕಿ ಕೇವಲ 6,600ಕ್ಕೂ ಗಣಿಗಾರಿಕೆಗೆ ಮಾತ್ರ ಅನುಮತಿ ನೀಡಲಾಗಿದೆ. ಇದರಿಂದ ಉದ್ಯೋಗ ಸೃಷ್ಟಿ ಮೇಲೆ ಹೊಡೆತ ಬಿದ್ದಿದೆಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ದೇಶಾದ್ಯಂತ ಗಣಿಗಾರಿಕೆಯಿಂದ 66 ಲಕ್ಷ ಉದ್ಯೋಗ ಸೃಷ್ಟಿ ಅವಕಾಶಗಳಿದ್ದರೂ ಕೇಂದ್ರ ರಾಜ್ಯ ಸರ್ಕಾರಗಳು ಪರವಾನಿಗೆ ನೀಡುವಲ್ಲಿ ಮೀನಾಮೇಷ ಎಣಿಸುತ್ತಿರುವುದರಿಂದ ಉದ್ಯೋಗ ಸೃಷ್ಟಿಗೂ ಹೊಡೆತ ಬಿದ್ದಿದೆ ಎಂದು ಹೇಳಿದರು.
ಉದ್ಯೋಗ ಸೃಷ್ಟಿ ಮತ್ತು ದೇಶದ ಜಿಡಿಪಿಯಲ್ಲಿ ಗಣಿಗಾರಿಕೆಗಳ ಕೊಡುಗೆ ಅಪಾರವಾಗಿದೆ. ಭಾರತದಲ್ಲಿ ಹೇರಳವಾದ ಖನಿಜ ಸಂಪತ್ತು ಇದ್ದರೂ ದಕ್ಷಿಣ ಆಫ್ರಿಕ, ಕೆನಡಾ, ಆಸ್ಟ್ರೇಲಿಯಾ, ಬ್ರಿಜಿಲ್, ಇಂಡೋನೇಷಿಯಾ, ಚಿಲಿ ದೇಶಗಳಂತೆ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಇತ್ತೀಚೆಗೆ 204 ಕಲ್ಲಿದಲ್ಲು ನಿಕ್ಷೇಪ ಪರಿವಾನಿಗೆ ರದ್ದು ಮಾಡಿದೆ. ಅದರಲ್ಲಿ 84 ಹರಾಜ ಆದ ಗಣಿಗಳ ಪೈಕಿ 25 ಖಾಸಗಿ, 59 ಸಾರ್ವಜನಿಕ ಉದ್ಯಮಗಳು ಸೇರಿವೆ ಎಂದು ಹೇಳಿದರು.
ಇತ್ತೀಚೆಗೆ ಗಣಿಗಾರಿಕೆ ಸಂಬಂಧ ತಿದ್ದುಪಡಿ ತಂದಿರುವುದು ಸ್ವಾಗತರ್ಹ. ಆದರೆ ಅನುಷ್ಠಾನಕ್ಕೆ ಸಂಬಂಧಿಸಿದ ಮತ್ತು ಗಣಿಗಾರಿಕೆ ಪುನರ್ ಜೀವನ ಮಾಡುವಲ್ಲಿ ಅನೇಕ ಸವಾಲುಗಳಿದ್ದು, ಅವುಗಳನ್ನು ಬಗೆಹರಿಸಲು ಕೇಂದ್ರ ರಾಜ್ಯ ಸರ್ಕಾರಗಳು ಮುಂದಾಗಬೇಕು ಎಂದರು.
ನಾಳೆಯಿಂದ 3 ದಿನಗಳ ಸಮಾವೇಶ
ನಗರದಲ್ಲಿ ನಾಳೆಯಿಂದ 3 ದಿನಗಳ ಗಣಿಗಾರಿಕೆ ತಮ್ಮ ಅವಕಾಶ ಮತ್ತು ವ್ಯಾಪಾರ ಮೇಳ ಕುರಿತ ಅಂತರರಾಷ್ಟ್ರೀಯ ಸಮ್ಮೇಳನ ಮೈನಿಂಗ್ ಮಜ್ಮಾ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಬೆಂಗಳೂರು ಅಂತರರಾಷ್ಟ್ರೀ ವಸ್ತು ಪ್ರದರ್ಶನ ಕೇಂದ್ರದಲ್ಲಿ ನಡೆಯಲಿರುವ 3 ದಿನಗಳ ಈ ಸಮ್ಮೇಳನದಲ್ಲಿ ಗಣಿ ಸಚಿವರು, ಗಣಿ ಕಾರ್ಯದರ್ಶಿಗಳು ಸೇರಿದಂತೆ
ಅನೇಕರು ಭಾಗವಹಿಸಲಿದ್ದು, ಉದ್ಯಮ ರಂಗದಲ್ಲಿನ ಇತ್ತೀಚಿನ ಬೆಳವಣಿಗೆಗಳು, ಸವಾಲುಗಳು, ಮತ್ತು ಸಮಸ್ಯೆಗಳ ಬಗ್ಗೆ ಸುದೀರ್ಘ ಚರ್ಚೆ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟ ಮಹಾ ಪ್ರಧಾನ ಕಾರ್ಯದರ್ಶಿ ಆರ್.ಕೆ. ಶರ್ಮಾ, ಉಪಾಧ್ಯಕ್ಷರಾದ ಆರ್.ಎಲ್. ಮೊಹಂತಿ, ಗುರೂಡ್ಡಿ,ಹೆಚ್. ಇಕ್ಬಾಲ್, ಮಾಜಿ ಉಪಾಧ್ಯಕ್ಷ ನೂರ್ ಅಹ್ಮದ್, ಉಪಸ್ಥಿತರಿದ್ದರು.

Leave a Comment