ಗಡಿ ಅಪರಾಧ ವಿಶ್ಲೇಷಣಾ ಸಭೆ

ಹರಪನಹಳ್ಳಿ.ಸೆ.8; ಪಟ್ಟಣದ ತಾಲೂಕು ಪಂಚಾಯ್ತಿಯ ರಾಜೀವಗಾಂಧಿ ಸಭಾಂಗಣದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರ್.ಚೇತನ್ ಅವರ ಅಧ್ಯಕ್ಷತೆಯಲ್ಲಿ ಗಡಿ ಅಪರಾಧ ವಿಶ್ಲೇಷಣಾ ಸಭೆ ನಡೆಯಿತು.
ಸಭೆಯಲ್ಲಿ ಎಸ್ಪಿ ಆರ್.ಚೇತನ್ ಮಾತನಾಡಿ, ಪೆÇಲೀಸ್ ಅಧಿಕಾರಿಗಳು ಗಡಿ ಠಾಣೆಯೊಂದಿಗೆ ನಿರಂತರ ಸಂಪರ್ಕವಿಟ್ಟುಕೊಂಡಲ್ಲಿ ವಿವಿಧ ಪ್ರಕರಣಗಳ ಅಪರಾಧಿಗಳ ಪತ್ತೆಗೆ ಹೆಚ್ಚು ಅನುಕೂಲವಾಗಲಿದೆ. ಪೆÇಲೀಸ್ ಠಾಣೆಗಳಿಗೆ ಗಡಿ ರೇಖೆ ಇರುತ್ತದೆ. ಆರೋಪಿಗಳು ಬಹುತೇಕ ಕೈಚಳಕ ತೋರಿದ ಕಾರ್ಯಕ್ಷೇತ್ರ ಬಿಟ್ಟು ಬೇರೊಂದು ಪ್ರದೇಶದಲ್ಲಿರುತ್ತಾರೆ. ಹಾಗಾಗಿ ಪ್ರಕರಣಗಳನ್ನು ಭೇದಿಸಲು ಗಡಿ ಭಾಗದ ಠಾಣೆಗಳೊಂದಿಗೆ ಮಾಹಿತಿ ವಿನಿಮಯ ಮಾಡಿಕೊಳ್ಳುವುದು ಅನಿವಾರ್ಯ ಎಂದರು. ತಲೆ ಮರೆಸಿಕೊಂಡಿರುವ, ಬೇಕಾಗಿರುವ ಆರೋಪಿಗಳ ಪತ್ತೆ ಬಗ್ಗೆ ಪರಸ್ಪರ ಮಾಹಿತಿ ವಿನಿಮಯ ಮಾಡಿ ಸಹಕರಿಸಿಕೊಳ್ಳುವುದು, ಇತರ ಜಿಲ್ಲೆ ಮತ್ತು ತಾಲೂಕು ಪೆÇಲೀಸರೊಂದಿಗೆ ಉತ್ತಮ ಭಾಂದವ್ಯ ರೂಪಿಸಿಕೊಳುವುದು ಹಾಗೂ ಗಡಿ ಪ್ರದೇಶದಲ್ಲಿ ನಡೆಯುವ ಅಪರಾಧ ಮತ್ತು ಕಾನೂನು ಸುವ್ಯವಸ್ಥೆ ಬಗ್ಗೆ ಸಭೆಯಲ್ಲಿ ರೂಪುರೇಷೆಗಳ ಬಗ್ಗೆ ಚರ್ಚಿಸಲಾಯಿತು.
ಹರಪನಹಳ್ಳಿ ಡಿವೈಎಸ್ಪಿ ನಾಗೇಶ್ ಐತಾಳ್, ದಾವಣಗೆರೆ ಗ್ರಾಮಾಂತರ ಡಿವೈಎಸ್ಸಿ ಗಂಗಲ್, ಕೂಡ್ಲಿಗಿ ಡಿವೈಎಸ್ಸಿ ಬಸವೇಶ್ವರ್, ಹರಪನಹಳ್ಳಿ ಸಿಪಿಐ ಡಿ.ದುರುಗಪ್ಪ, ಜಗಳೂರು ಸಿಪಿಐ ಲತಾ, ಜಗಳೂರು, ಬಿಳಿಚೋಡು, ಕೊಟ್ಟೂರು, ಇಟಿಗಿ, ಹಡಗಲಿ, ಹಿರೇಹಡಗಲಿ, ಹರಿಹರ ಸೇರಿದಂತೆ ವಿವಿಧ ಠಾಣೆಗಳ ಸಿಪಿಐ, ಪಿಎಸ್‍ಐ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

Leave a Comment