ಗಡಿಯಲ್ಲಿ ಮತ್ತೆ ಪಾಕ್ ಕ್ಯಾತೆ

ಶ್ರೀನಗರ, ಸೆ. ೧೦- ಪಾಕಿಸ್ತಾನ ಸೇನೆ ಇಂದು ಕದನ ವಿರಾಮ ಉಲ್ಲಂಘಿಸಿ ಗಡಿಯಲ್ಲಿ ಭಾರತೀಯ ಸೇನಾ ಗಡಿ ಠಾಣೆಗಳ ಮೇಲೆ ಗುಂಡಿನ ದಾಳಿ ನಡೆಸಿದೆ.
ಗಡಿ ನಿಯಂತ್ರಣ ರೇಖೆಯಲ್ಲಿ ಕದನ ವಿರಾಮ ಉಲ್ಲಂಘಿಸಿ ಭಾರತೀಯ ಸೇನಾಗಡಿ ಠಾಣೆಗಳ ಮೇಲೆ ದಾಳಿ ನಡೆಸುವ ಪರಿಪಾಠವನ್ನು ಮುಂದುವರೆಸಿರುವ ಪಾಕಿಸ್ತಾನ ಪಡೆಗಳು ಇಂದು ಕುಪ್ಪವಾರ ಜಿಲ್ಲೆಯ ಕರ್ನಾಟಕ ವಲಯದಲ್ಲಿಯ ಭಾರತೀಯ ಸೇನೆಯ ಬ್ಲಾಕ್ ರಾಕೆಟ್ ಪಡೆ ಗಡಿ ಠಾಣೆಯ ಮೇಲೆ ಗುಂಡಿನ ದಾಳಿ ನಡೆಸಿದೆ.
ಪ್ರತಿಯಾಗಿ ಭಾರತೀಯ ಪಡೆಗಳು ಪ್ರತಿ ದಾಳಿ ನಡೆಸಿವೆ. ಈ ದಾಳಿ -ಪ್ರತಿದಾಳಿಯಲ್ಲಿ ಯಾರೂ ಗಾಯಗೊಂಡಿಲ್ಲ ಎಂದು ಭಾರತೀಯ ಗಡಿ ಭದ್ರತಾ ಮೂಲಗಳು ತಿಳಿಸಿವೆ.

Leave a Comment