ಗಗನಕ್ಕೇರಿದ ಬೆಲೆ ಮತ್ತೇ ಏರಿಕೆ

ನವದೆಹಲಿ, ಸೆ. ೧೦- ಇಂಧನ ದರ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿರುವುದನ್ನು ಖಂಡಿಸಿ ಭಾರತ್ ಬಂದ್ ನಡೆಯುತ್ತಿರುವ ಸಂದರ್ಭದಲ್ಲಿ ಪೆಟ್ರೋಲ್-ಡೀಸೆಲ್ ದರ ಮತ್ತೆ ಏರಿಕೆಯಾಗಿದೆ. ಅದರಲ್ಲೂ ಪ್ರತಿ ಲೀಟರ್ ಪೆಟ್ರೋಲ್‌ ದರ 90 ರೂ. ಆಸುಪಾಸಿನಲ್ಲಿದೆ.
ಪೆಟ್ರೋಲ್ ಮತ್ತು ಡೀಸೆಲ್‌ನ್ನು ಜಿಎಸ್‌ಟಿ ವ್ಯಾಪ್ತಿಗೆ ತರಬೇಕೆಂದು ಕಾಂಗ್ರೆಸ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ. ಈ ಹಿನ್ನೆಲೆಯಲ್ಲಿ 20 ರಾಜಕೀಯ ಪಕ್ಷಗಳು ಇಂದು ದೇಶಾದ್ಯಂತ ಪ್ರತಿಭಟನೆ ನಡೆಸಿದ್ದರೂ ಇಂಧನ ದರ ಮಾತ್ರ ಇಳಿಕೆಯಾಗುವ ಲಕ್ಷಣಗಳೇ ಕಂಡು ಬಂದಿಲ್ಲ.
ಪ್ರತಿ ಲೀಟರ್ ಪೆಟ್ರೋಲ್‌ಗೆ 23 ಪೈಸೆ ಹಾಗೂ ಡೀಸೆಲ್ 22 ಪೈಸೆ ಏರಿಕೆಯಾಗಿದೆ. ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 80.73 ಪೈಸೆ, ಪ್ರತಿ ಲೀಟರ್ ಡೀಸೆಲ್‌ಗೆ 72.83 ಪೈಸೆಯಷ್ಟಿದೆ.
ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 82.12 ರೂ. ಹಾಗೂ ಡೀಸೆಲ್ ದರ 77.32 ರೂ.ಗೆ ಏರಿಕೆಯಾಗಿದೆ.
ಇತ್ತ ರಾಜಧಾನಿ ಬೆಂಗಳೂರಿನಲ್ಲೂ ತೈಲ ದರದ ಬಿಸಿ ತಟ್ಟಿದ್ದು, ಪ್ರತಿ ಲೀಟರ್‌ ಡೀಸೆಲ್‌ಗೆ 75.23 ರೂ. ಹಾಗೂ ಪೆಟ್ರೋಲ್ ದರ 83.43 ರೂ. ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ.

Leave a Comment