ಗಂಡು ಮಗುವಿಗೆ ಜನ್ಮವಿತ್ತ ರೈನಾ ಪತ್ನಿ

ನವದೆಹಲಿ, ಮಾ 23 – ಭಾರತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಸುರೇಶ್ ರೈನಾ ಮತ್ತು ಅವರ ಪತ್ನಿ ಪ್ರಿಯಾಂಕಾ ಸೋಮವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಇದರೊಂದಿಗೆ ಈ ದಂಪತಿ ಸದ್ಯ ಇಬ್ಬರು ಮಕ್ಕಳನ್ನು ಹೊಂದಿದಂತಾಗಿದೆ. 2016ರ ಮೇನಲ್ಲಿ ರೈನಾ ಮಗಳು ಗ್ರೇಸಿಯಾ ಜನಿಸಿದ್ದಳು. ಭಾರತ ತಂಡದಲ್ಲಿ ಉಜ್ವಲ ಭವಿಷ್ಯ ಕಂಡುಕೊಂಡ ಎಡಗೈ ಬ್ಯಾಟ್ಸ್ ಮನ್ ರೈನಾ, 2011ರ ವಿಶ್ವಕಪ್ ಮತ್ತು 2013ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ವಿಜೇತ ಭಾರತ ತಂಡದ ಸದಸ್ಯರಾಗಿದ್ದರು.

ರೈನಾ ಪ್ರತಿನಿಧಿಸುವ ಐಪಿಎಲ್ ಫ್ರಾಂಚೈಸಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಚೆನ್ನೈ ತಂಡದ ಸಹ ಆಟಗಾರ ಹರ್ಭಜನ್ ಸಿಂಗ್ , ರೈನಾ ದಂಪತಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಭಾರತದ ಪರ 226 ಏಕದಿನ ಪಂದ್ಯಗಳನ್ನಾಡಿರುವ ರೈನಾ, 5615 ರನ್ ಗಳಿಸಿದ್ದಾರೆ. 35.31 ರ ಬ್ಯಾಟಿಂಗ್ ಸರಾಸರಿ ಹೊಂದಿರು ಅವರು 5 ಶತಕ 36 ಅರ್ಧಶತಗಳನ್ನು ದಾಖಲಿಸಿದ್ದಾರೆ.

Leave a Comment