ಗಂಗಾಮತಸ್ಥ ಸಮಾಜ : ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೆ ಆಗ್ರಹ

ರಾಯಚೂರು.ಜ.20- ಗಂಗಾಮತಸ್ಥ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ, ಜ.21 ರಂದು ನಡೆಯುವ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಜಯಂತಿಯನ್ನು ಸರ್ಕಾರಿ ರಜೆಯನ್ನಾಗಿ ಘೋಷಿಸಬೇಕೆಂದು ಜಿಲ್ಲಾ ಗಂಗಾಮತಸ್ಥ ವಕೀಲರ ಸೇವಾ ಸಂಘ ವತಿಯಿಂದ ಜಿಲ್ಲಾಧಿಕಾರಿಗಳ ಸ್ಥಾನಿಕ ಕಛೇರಿ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಗಂಗಾಮತ ಸಮಾಜವೂ ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಹಿಂದುಳಿದಿದ್ದು, ಈ ಸಮಾಜವೂ ಆಯಾ ಪ್ರಾಂತ್ಯಗಳಿಗೆ ಅನುಗುಣವಾಗಿ 39 ಪರ್ಯಾಯ ಪದಗಳಿಂದ ಕರೆಯಲ್ಪಡುವ ಸಮಾಜವಾಗಿದ್ದು, ಅನ್ಯಾಯಕ್ಕೊಳಪಟ್ಟ ಸಮಾಜವಾಗಿದೆ. ನಮ್ಮ ಸಮಾಜದ ಹಿರಿಯರು ಸುಮಾರು ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದಾರೆ. ಅದರಂತೆ ರಾಯಚೂರು ಗಂಗಾಮತಸ್ಥ ವಕೀಲರ ಸೇವಾ ಸಂಘವೂ ಹಲವು ವರ್ಷಗಳಿಂದ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.
ಆದ್ದರಿಂದ ಈಗೀರುವ ಕರ್ನಾಟಕ ಸರ್ಕಾರವೂ ನಮ್ಮ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಹಾಗೂ ಜ.21 ರಂದು ಆಚರಿಸಲ್ಪಡುವ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿಯನ್ನು ಸರ್ಕಾರ ರಜೆಯನ್ನಾಗಿ ಘೋಷಿಸಬೇಕೆಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ರಾಜೇಶ ಎನ್.ಎಸ್., ಪ್ರಕಾಶ, ಶರಣ ಬಸವ, ರಂಗಾರಾಜೇಶ, ತಾಯಣ್ಣ, ಜಿತೇಂದ್ರ, ಶರಣಪ್ಪ ನೆಲಹಾಳ, ಸಿ.ಎನ್.ಮಾಲಿ ಪಾಟೀಲ್, ಗೋಪಾಲಕೃಷ್ಣ ಕಡಗೋಳ, ನಾರಾಯಣ, ಮಲ್ಲೇಶ, ಮಲ್ಲಿಕಾರ್ಜುನ, ಬಸವರಾಜ ಕಲ್ಲೂರು, ಆಂಜಿನೇಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Comment