ಗಂಗಮತಸ್ಥ ಸಮಾಜದಿಂದ ಶಾಸಕರಿಗೆ ಮನವಿ

ಹರಿಹರ, ಸೆ. 14 – ಅನ್ಯಾಯದ ವಿರುದ್ಧ ದನಿ ಎತ್ತಿದ ಏಕೈಕ ನಿಜಶರಣ ಅಂಬಿಗ ಚೌಡಯ್ಯನವರು ಎಂದು ಗಂಗಾ ಮತಸ್ಥರ ಸಮಾಜದ ಅಧ್ಯಕ್ಷ ಪೇಟೆ ಬಸಪ್ಪ ಹೇಳಿದರು.
ತಾಲ್ಲೂಕಿನ ಗಂಗಾ ಮತಸ್ಥರ ಸಮಾಜದ ಅಭಿವೃದ್ಧಿಗೆ ಕ್ಷೇತ್ರದ ಶಾಸಕ ಎಸ್.ರಾಮಪ್ಪನವರಿಗೆ ಮನವಿ ಪತ್ರವನ್ನು ನೀಡಿ ನಂತರ ಮಾತನಾಡಿದ ಅವರು ಗೋವಿನ ಹಾಳು, ಮಲೇಬೆನ್ನೂರು, ಗುತ್ತೂರು ಮತ್ತು ಇನ್ನಿತರ ಗ್ರಾಮಗಳಲ್ಲಿ ಸಮುದಾಯ ಭವನ ದೇವಸ್ಥಾನಗಳ ಸುತ್ತಲೂ ತಡೆಗೋಡೆ ನಿರ್ಮಾಣ ಮತ್ತು ಗಂಗಾ ಮತಸ್ಥರ ಸಮಾಜದ ಶಿಕ್ಷಣ, ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವಂತೆ ಮನವಿಯನ್ನು ಮಾಡಿದ್ದೇವೆ. ಮನವಿಗೆ ಸ್ಪಂದಿಸಿ ಸಮಾಜದ ಅಭಿವೃದ್ಧಿಗೆ ಅನುದಾನ ನೀಡಿ ಶಿಕ್ಷಣ, ದೇವಸ್ಥಾನದ ಜೀರ್ಣೋದ್ಧಾರ, ಉದ್ಯಾನವನ, ನಿವೇಶನಗಳು ಇನ್ನಿತರೆ ಸರ್ಕಾರದ ಸವಲತ್ತುಗಳನ್ನು ಒದಗಿಸಿಕೊಡುತ್ತೇನೆಂದು ಶಾಸಕರು ಭರವಸೆ ನೀಡಿದ್ದಾರೆಂದು ತಿಳಿಸಿದರು.
ತಾಪಂ ಮಾಜಿ ಅಧ್ಯಕ್ಷ ಮಾಗಾನಗಳ್ಳಿ ಹಾಲಪ್ಪ ಮಾತನಾಡಿ ಸಮಾಜದಲ್ಲಿ ಕೀಳರಿಮೆ ತ್ಯಜಿಸಿ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಬೇಕು ನಮ್ಮ ಸಮಾಜ ಉತ್ತಮ ನಾಗರೀಕ ಸಮಾಜ ಕಟ್ಟುವುದಕ್ಕೆ ಮುಂದಾಗಬೇಕು. ರಾಜಕೀಯ, ಶೈಕ್ಷಣಿಕವಾಗಿ ಮುಂದಾಗಬೇಕಾದರೆ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ದೊರಕಿಸುವ ಮೂಲಕ ಸಮಾಜವನ್ನು ಮುಖ್ಯ ವಾಹಿನಿಗೆ ಬರಲು ಸಮಾಜದ ಎಲ್ಲಾ ಹಿರಿಯ ಕಿರಿಯರು ಶ್ರಮಿಸಬೇಕೆಂದರು.

Leave a Comment