ಖ್ಯಾತ ವಕೀಲರಾದ ಪದ್ಮವರ್ಧನ್ ಇನ್ನಿಲ್ಲ

ರಾಯಚೂರು.ಡಿ.02- ಖ್ಯಾತ ನ್ಯಾಯವಾದಿ, ಸಾಮಾಜಿಕ ಸಂಘಟನೆಗಳ ವಿಚಾರವಾದಿ ಎನ್.ಪದ್ಮವರ್ಧನ್ ಅವರು ನಿನ್ನೆ ರಾತ್ರಿ ತೀವ್ರ ಹೃದಯಘಾತದಿಂದ ನಿಧನರಾಗಿದ್ದಾರೆ.
ಪದ್ಮವರ್ಧನ್ ಅವರು ಪಾವಗ‌ಡದಲ್ಲಿ ಎಪಿಪಿಯಾಗಿ ಕಾರ್ಯ ನಿರ್ವಹಿಸಿದ್ದರು. ರಾಯಚೂರಿನಲ್ಲಿ ಖ್ಯಾತ ಕ್ರಿಮಿನಲ್ ನ್ಯಾಯವಾದಿಗಳಾಗಿ ಗುರುತಿಸಿಕೊಂಡಿದ್ದರು. ಸಾಮಾಜಿಕ ಸಂಘ, ಸಂಸ್ಥೆಗಳೊಂದಿಗೆ ನಿರಂತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಅವರು ವಿಚಾರವಾದಿ ಹಾಗೂ ಪ್ರಗತಿಪರ ಚಿಂತಕರಾಗಿದ್ದರು. ನಕ್ಸಲ್ ಹೋರಾಟಗಾರರಾದ ನರಸಿಂಹ ಮೂರ್ತಿ ಅವರ ಪ್ರಕರಣವನ್ನು ಇವರು ವಾದಿಸುತ್ತಿದ್ದರು.
ನಿನ್ನೆ ರಾತ್ರಿ ಅವರು ತೀವ್ರ ಹೃದಯಘಾತಕ್ಕೆ ಗುರಿಯಾಗಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಆ ವೇಳೆಗಾಗಲೇ ಅವರು ಕೊನೆಯುಸಿರೆಳೆದಿದ್ದರು. ಇವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕಾಗಿ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿರುವ ಸ್ಪಂದನ ಭವನದಲ್ಲಿ ಇರಿಸಲಾಗಿದೆ.

Leave a Comment