ಖ್ಯಾತ ಕ್ರಿಕೆಟಿಗ ಅಬ್ದುಲ್ ಖಾದಿರ್ ವಿಧಿವಶ

ಪಾಕಿಸ್ತಾನದ ಖ್ಯಾತ ಕ್ರಿಕೆಟಿಗ ಅಬ್ದುಲ್ ಖಾದಿರ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ತೀವ್ರ ಹೃದಯಾಘಾತಕ್ಕೊಳಗಾದ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲೇ ಸಾವನ್ನಪ್ಪಿದ್ದರು.

ಸೆಪ್ಟೆಂಬರ್ 15ಕ್ಕೆ 64ನೇ ವಸಂತಕ್ಕೆ ಕಾಲಿಡಲಿದ್ದ ಅಬ್ದುಲ್ ಖಾದಿರ್ ನಿಧನಕ್ಕೆ ಪಾಕಿಸ್ತಾನದ ಪ್ರಧಾನಿ ಹಾಗೂ ಒಂದು ಕಾಲದ ಅವರ ಸಹ ಆಟಗಾರ ಇಮ್ರಾನ್ ಖಾನ್ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

ತಾವೊಬ್ಬ ಉತ್ತಮ ಸ್ನೇಹಿತನನ್ನು ಕಳೆದುಕೊಂಡಿದ್ದೇನೆ ಎಂದು ಹೇಳಿರುವ ಇಮ್ರಾನ್ ಖಾನ್, ದೇಶದ ಕ್ರಿಕೆಟ್ ರಂಗಕ್ಕೆ ಅಬ್ದುಲ್ ಖಾದಿರ್ ಭಾರಿ ಕೊಡುಗೆ ನೀಡಿದ್ದಾರೆ ಎಂದು ಬಣ್ಣಿಸಿದ್ದಾರೆ.

Leave a Comment