ಖಾಸಗಿ ಸಹಭಾಗಿತ್ವದ ಸ್ಕೈವಾಕ್ ಉದ್ಘಾಟನೆ

ಬೆಂಗಳೂರು, ಜ. ೨೨- ಬಿಬಿಎಂಪಿ ವತಿಯಿಂದ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಹೊಸೂರು ರಸ್ತೆಯ ಚೆಕ್‌ಪೋಸ್ಟ್ ಬಳಿ ನೂತನವಾಗಿ ನಿರ್ಮಿಸಿರುವ ಪಾದಚಾರಿ ಮೇಲ್ಸೇತುವೆ (ಸ್ಕೈವಾಕ್) ಅನ್ನು ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರು ಸಾರ್ವಜನಿಕರಿಗೆ ಸಮರ್ಪಿಸಿದರು.
ಪ್ರಕಾಶ್ ಆರ್ಟ್ಸ್ ಪ್ರೈ ಲಿಮಿಟೆಡ್ ಸಂಸ್ಥೆಯವರು 2.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಪಾದಚಾರಿ ಸ್ಕೈವಾಕ್‌ನಿಂದ ಹೊಸೂರು ರಸ್ತೆ ಸಜ್ಜಾಪುರ ಕೂಡುವ ರಸ್ತೆಯಲ್ಲಿದ್ದು ಪಾದಚಾರಿಗಳು ನಿಟ್ಟಿಸಿರು ಬಿಟ್ಟಿದ್ದಾರೆ. ಈ ಭಾಗದಲ್ಲಿ ರಸ್ತೆ ದಾಟಲು ಪಾದಚಾರಿಗಳು ಹರಸಾಹಸ ಮಾಡುತ್ತಿದ್ದರು.
ಸ್ಕೈವಾಕ್ ಒಟ್ಟು ಇದ್ದ 73 ಮೀ. ಉದ್ದ, 360 ಮೀ. ಅಗಲ ಇದ್ದು. ಈ ಸ್ಕೈವಾಕ್ ರಸ್ತೆಯಿಂದ 5.50 ಮೀಟರ್ ಎತ್ತರವಿದೆ. ಸ್ಕೈವಾಕ್‌ನಲ್ಲಿ ಒಂದೇ ಬಾರಿಗೆ 10 ಮಂದಿಯನ್ನು ಹೊತ್ತೊಯ್ಯಬಹುದಾದ ಎರಡು ಲಿಫ್ಟ್‌ಗಳನ್ನು ಒಳಗೊಂಡಿದೆ. ಪ್ರತಿನಿತ್ಯ 2 ಸಾವಿರ ಪಾದಚಾರಿಗಳು ಈ ಸ್ಕೈವಾಕ್ ಅನ್ನು ಬಳಸಿಕೊಳ್ಳಬಹುದಾಗಿದೆ.
ಪ್ರಕಾಶ್ ಆರ್ಟ್ಸ್ ಸಂಸ್ಥೆಯು ಪಾಲಿಕೆಗೆ ಪ್ರತಿವರ್ಷ 3 ಲಕ್ಷದ 6 ಸಾವಿರ ರೂ. ಅನ್ನು ನೆಲ ಬಾಡಿಗೆ ರೂಪದಲ್ಲಿ 13,70 ರೂ.ಗಳನ್ನು ಜಾಹೀರಾತು ಶುಲ್ಕದ ರೂಪದಲ್ಲಿ ಪಾಲಿಕೆಗೆ ಪಾವತಿಸಲಿದೆ.
ಸ್ಕೈವಾಕ್ ಉದ್ಘಾಟನೆಯ ಬಳಿಕ ಮಾಜಿ ಸಚಿವ ರಾಮಲಿಂಗಾರೆಡ್ಡಿ, ಸಂಸದ ತೇಜಸ್ವಿ ಸೂರ್ಯ, ಹಾಗೂ ಮೇಯರ್ ಗೌತಮ್ ಕುಮಾರ್ ಅವರು ಇದೇ ವೇಳೆ ಪೌರ ಕಾರ್ಮಿಕರಿಗೆ ಹೈಜೆನಿಕ್ ಕಿಟ್ ಅನ್ನು ವಿತರಿಸಿದರು. ಉಪಮೇಯರ್ ರಾಮಮೋಹನ್ ರಾಜ್, ವಿರೋಧ ಪಕ್ಷದ ಅಬ್ದುಲ್ ವಾಜಿದ್, ಮಾಜಿ ಮೇಯರ್ ಮಂಜುನಾಥ್ ರೆಡ್ಡಿ, ಪಾಲಿಕೆ ಸದಸ್ಯರಾದ ಚಂದ್ರಪ್ಪ, ಜಿ. ಮಂಜುನಾಥ್, ಸರಳ ಸಿ. ಮಹೇಶ್ ಬಾಬು, ಮುಖ್ಯ ಅಭಿಯಂತರ ಸೋಮಶೇಖರ್, ಅಧೀಕ್ಷಕ ಅಭಿಯಂತರ ಬಸವರಾಜ್ ಕಬಾಡೆ ಅವರು ಉಪಸ್ಥಿತರಿದ್ದರು.

Leave a Comment