ಖಾಸಗಿ ಆಸ್ಪತ್ರೆಗಳು ತೆರೆಯದೆ ರೋಗಿಗಳ ಪರದಾಟ

ನಂಜನಗೂಡು. ಏ.2- ಖಾಸಗಿ ಆಸ್ಪತ್ರೆಗಳು ಸರ್ಕಾರ ಆದೇಶವನ್ನು ಧಿಕ್ಕರಿಸಿ ತಮ್ಮ ಹಾಸ್ಪಿಟಲ್ ಗಳನ್ನು ತೆರೆಯದೆ ಇರುವುದರಿಂದ ಗ್ರಾಮಾಂತರ ಹಾಗೂ ನಗರದ ನಿವಾಸಿಗಳಿಗೆ ಬಹಳ ತೊಂದರೆ ಉಂಟಾಗಿದೆ ಪ್ರತಿದಿನ ಪರದಾಡುವ ಸ್ಥಿತಿ ಮಾಮೂಲಾಗಿದೆ.
ಕೆಲವು ದಿನಗಳ ಹಿಂದೆ ಕೆಲವು ಕ್ಲಿನಿಕ್ ತೆರೆದು ಬಂದಂತ ರೋಗಿಗಳಿಗೆ ಟ್ರೀಟ್ಮೆಂಟ್ ನೀಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ತೆರೆಯದೆ ಬಹಳ ತೊಂದರೆಯಾಗಿದೆ ಪ್ರತಿಮನೆಯಲ್ಲೂ ವೃದ್ಧರು ಮಕ್ಕಳು ಇದ್ದೇ ಇರುತ್ತಾರೆ. ಅದರಲ್ಲಿ ಬಿಪಿ ಸುಗರ್ ಇರುವುದು ಕಡ್ಡಾಯ ಮಕ್ಕಳಿಗೆ ವೃದ್ಧರಿಗೆ ಸಣ್ಣಪುಟ್ಟ ಯಾವುದೇ ತೊಂದರೆ ಆದರೂ ಅದನ್ನು ತೋರಿಸಲು ಖಾಸಗಿ ಕ್ಲಿನಿಕ್ ಇಲ್ಲದೆ ಪ್ರತಿಯೊಬ್ಬರೂ ಪ್ರತಿದಿನ ಪರದಾಡುವ ಸ್ಥಿತಿ ಉಂಟಾಗಿದೆ. ಆದ್ದರಿಂದ ಹೇಳುವುದೇನೆಂದರೆ ಪ್ರತಿದಿನ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ತೆರೆದರೆ ನಮಗೆ ಅನುಕೂಲವಾಗುತ್ತದೆ ಎಂದು ಗ್ರಾಮಾಂತರ ಹಾಗೂ ನಗರದ ನಿವಾಸಿಗಳು ಇದಕ್ಕೆ ಸಂಬಂಧಪಟ್ಬ ಅಧಿಕಾರಿಗಳು ಖಾಸಗಿ ಹಾಸ್ಪಿಟಲ್ ಡಾಕ್ಟರುಗಳಿಗೆ ಸೂಚನೆ ನೀಡಬೇಕೆಂದು ಮನವಿ ಮಾಡಿದ್ದಾರೆ.

Leave a Comment