ಖಾಲಿ ನಿವೇಶನಗಳಲ್ಲಿ ಹಾವುಗಳ ಕಾಟ

ದೇವಸ್ಥಾನಕ್ಕೆ ಹೋಗುವವರಿಗೆ ಬಿಟ್ಟಿ ದುರ್ವಾಸನೆ
ನಂಜನಗೂಡು. ಜು.17- ಗೊತ್ತು ಗುರಿಯಿಲ್ಲದೆ ನಗರದ ಹಲವು ಕಡೆ ಬಿದ್ದಿರುವ ಖಾಲಿ ನಿವೇಶನಗಳು ಅದರ ತುಂಬಾ ಬೆಳೆದು ನಿಂತಿರುವ ಗಿಡಗಂಟಿಗಳು ಬಿಸಾಡಿರುವ ತ್ಯಾಜ್ಯಗಳಲ್ಲಿ ತುಂಬಿಕೊಂಡು ಗಬ್ಬು ನಾರುತ್ತಿರುವ ಜೊತೆಗೆ ವಿಷ ಜಂತುಗಳು ಗಳಿಂದ ಕೂಡಿದ ಜಾಗಗಳು ಪಕ್ಕದಲ್ಲೇ ಇರುವ ಮನೆಗಳಲ್ಲಿ ಇರಲಾಗುತ್ತಿಲ್ಲ, ಇದರ ಸಮಸ್ಯೆ ಕೇಳುವವರು ಯಾರು ? ಕಣ್ಣು ಮುಚ್ಚಿ ಕುಳಿತ ನಗರಸಭೆ ಅಧಿಕಾರಿಗಳು.
ಪಟ್ಟಣದ ಹಲವು ಬಡಾವಣೆಗಳಲ್ಲಿ ದೇವಸ್ಥಾನದ ಅಕ್ಕಪಕ್ಕ ಖಾಲಿ ನಿವೇಶನಗಳ ಕಾರುಬಾರು. ಖಾಲಿ ಜಾಗ ಇಲ್ಲಿ, ಮಾಲೀಕರು ಎಲ್ಲೋ, ದೇವಸ್ಥಾನದ ಪಕ್ಕದಲ್ಲಿರುವ ಹಳೆಯ ಜೆಎಸ್ಎಸ್ ಕಾಲೇಜ್ ಮುಂಬಾಗ ಖಾಲಿ ನಿವೇಶನದ ತುಂಬಾ ಗಿಡಗಳು ಬೆಳೆದಿದ್ದು ಸುರಿದ ತ್ಯಾಜ್ಯವಸ್ತುಗಳಿಂದ ಗಬ್ಬುನಾರುತ್ತಿದೆ. ಎದುರುಗಡೆ ಮಹಿಳಾ ಕಾಲೇಜು ಇದೆ. ಇದರ ವಾಸನೆ ಹೇಳತೀರದು ಜೊತೆಗೆ ಕೆಲವರು ಖಾಲಿ ನಿವೇಶನವನ್ನು ಶೌಚಾಲಯ ಮಾಡಿಕೊಂಡಿದ್ದಾರೆ ಜೊತೆಗೆ ರಾತ್ರಿ ಸಮಯದಲ್ಲಿ ವ್ಯಾಪಾರಿಗಳಾದ ಪಾನಿಪುರಿ ಗೋಬಿ ಮಂಚೂರಿ ಈ ರೀತಿ ಅಂಗಡಿ ಮಾಲೀಕರು ವ್ಯಾಪಾರ ಮುಗಿದಮೇಲೆ ಮಿಕ್ಕ ತ್ಯಾಜ್ಯ ವನ್ನು ಇಲ್ಲೇ ಸುರಿಯುತ್ತಾರೆ. ಇದರಿಂದ ಕೊಳೆತು ಗಾಳಿಬೀಸಿದರೆ ದುರ್ವಾಸನೆ ಉಂಟಾಗಿದೆ ಇದೇ ರೀತಿ ಎಲ್ಲಾ ಖಾಲಿ ನಿವೇಶನಗಳಲ್ಲಿ ಇದೇ ತೊಂದರೆ ಉಂಟಾಗಿದೆ ಅದರಿಂದಾಗಿ ನಗರಸಭೆ ಅಧಿಕಾರಿಗಳು ಮುಂದಾಗಿ ಮಾಲೀಕರಿಗೆ ನೋಟಿಸ್ ನೀಡಿ ದಂಡ ವಿಧಿಸಬೇಕು ಈ ರೀತಿ ಮಾಡಿದರೆ ಪಟ್ಟಣದಲ್ಲಿ ಇರುವಂತ ಖಾಲಿ ನಿವೇಶನಗಳಲ್ಲಿ ತೋರಿರುವ ತೊಂದರೆಗಳಿಗೆ ಪರಿಹಾರ ಸಿಗಬಹುದು. ಜೊತೆಗೆ ಅಕ್ಕ ಪಕ್ಕದ ಮನೆಯಲ್ಲಿ ವಾಸ ಮಾಡಲಾಗುತ್ತಿಲ್ಲ. ವಾಸನೆ ಜೊತೆಗೆ ಹವುಗಳ ಕಾಟ ಸಂಜೆ 5:00 ಆದರೆ ಸಾಕು ಮನೆಯ ಬಾಗಿಲು ಹಾಕಿಕೊಳ್ಳಬೇಕು. ಮಕ್ಕಳನ್ನು ಹೊರಗಡೆ ಬಿಡುವಂತಿಲ್ಲ. ಇದರಿಂದ ಮುಕ್ತಿ ಯಾವಾಗ ? ಎಂಬುದೇ ಸವಾಲಿನ ಪ್ರಶ್ನೆಯಾಗಿದೆ.

Leave a Comment