ಖಾಲಿಹೊಟ್ಟೆ ಟೀ ಸೇವನೆ ಬೇಡ

ಮುಂಜಾನೆ ಚಹಾ ಅಥವಾ ಟೀ ಕುಡಿಯುವುದು ಹಲವರ ಅಭ್ಯಾಸ. ಕೆಲವರಿಗೆ ಟೀ ಕುಡಿಯದೆ ಇದ್ದರೆ ಸಮಾಧಾನವಾಗುವುದಿಲ್ಲ. ಅಷ್ಟರಮಟ್ಟಿಗೆ ಚಹಾ ಸೇವನೆ ಅವರ ಬದುಕಿನಲ್ಲಿ ಹಾಸುಹೊಕ್ಕಾಗಿರುತ್ತದೆ.

ಚಹಾದಲ್ಲಿ ಆಂಟಿ ಆಕ್ಸಿಡೆಂಟ್‌ಗಳಿರುತ್ತವೆ. ಚಹಾದಲ್ಲಿರುವ ಟ್ಯಾನಿನ್ ಅಥವಾ ಕ್ಯಾಬೆಚೆನ್ ಎಂಬ ಕಣಗಳು ರಾಸಾಯನಿಕ ಕ್ರಿಯೆಗಳನ್ನು ಚುರುಕುಗೊಳಿಸುತ್ತವೆ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತವೆ. ಆದರೆ ಚಹಾವನ್ನು ಖಾಲಿಹೊಟ್ಟೆಯಲ್ಲಿ ಸೇವಿಸುವುದು ಆರೋಗ್ಯಕ್ಕೆ ಮಾರಕ. ಹಾಗಾಗಿ ಖಾಲಿಹೊಟ್ಟೆಯಲ್ಲಿ ಟೀ ಸೇವನೆ ಬೇಡ.

ಮುಂಜಾನೆ ಖಾಲಿಹೊಟ್ಟೆಯಲ್ಲಿ ಚಹಾ ಕುಡಿಯುವುದರಿಂದ ಜೀವ ರಾಸಾಯನಿಕ ವ್ಯವಸ್ಥೆಯಲ್ಲಿ ಏರುಪೇರು ಉಂಟಾಗಿ, ಜಠರ ರಸದ ಆಮ್ಲೀಯತೆ – ಕ್ಷಾರೀಯತೆ ಸಮತೋಲನ ತಪ್ಪುವುದೇ ಇದಕ್ಕೆ ಕಾರಣ. ಹೀಗಾಗಿ ದೇಹದಲ್ಲಿ ಹಲವು ತೊಂದರೆಗಳು ಉಂಟಾಗುತ್ತವೆ.

ಖಾಲಿಹೊಟ್ಟೆಯಲ್ಲಿ ಟೀ ಸೇವನೆಯಿಂದ ಹಲ್ಲುಗಳ ಹೊರ ಕವಚ ಶೀಘ್ರವಾಗಿ ಸವೆಯುತ್ತದೆ. ಖಾಲಿಹೊಟ್ಟೆಯಲ್ಲಿ ಟೀ ಕುಡಿದಾಗ ಹೊಟ್ಟೆಯುಬ್ಬರಿಕೆಯಾಗುತ್ತದೆ. ಖಾಲಿಹೊಟ್ಟೆಯಲ್ಲಿ ಟೀ ಕುಡಿದರೆ ಜೀರ್ಣರಸಗಳೊಂದಿಗೆ ಪ್ರತಿಕ್ರಿಯೆಯಾಗಿ ವಾಯು ಉತ್ಪತ್ತಿಯಾಗುತ್ತದೆ. ಇದು ಹೊಟ್ಟೆಯುಬ್ಬರಕ್ಕೆ ಹಾಗೂ ಮಲಬದ್ಧತೆ ತರುತ್ತದೆ.

ಖಾಲಿಹೊಟ್ಟೆಯಲ್ಲಿ ಟೀ ಕುಡಿಯುವುದರಿಂದ ಉದ್ವೇಗ ಮತ್ತು ನಿದ್ರೆಗೆ ಸಂಬಂಧಿಸಿದ ತೊಂದರೆಗಳು ಎದುರಾಗಬಹುದು, ವಾಕರಿಕೆ, ತಲೆ ತಿರುಗುವುದು.
ಹಾಗಾಗಿ ಚಹಾವನ್ನು ಖಾಲಿಹೊಟ್ಟೆ ಬದಲು ಉಪಾಹಾರ ಸೇವಿಸಿದ ನಂತರ ಕುಡಿಯುವುದು ಒಳ್ಳೆಯದು.

Leave a Comment