ಕ್ಷೇತ್ರ ವಿಷಯ ಪ್ರಸ್ತಾಪ : ದದ್ದಲ – ನಾಡಗೌಡರ ಮಧ್ಯೆ ಜಟಾಪಟಿ

ಗಂಭೀರ ಸಭೆ : ಅಧಿಕಾರಿಗಳ ಮೊಬೈಲ್ ವೀಕ್ಷಣೆ
ರಾಯಚೂರು.ಅ.15- ಉಸ್ತುವಾರಿ ಸಚಿವರಾಗಿ ನೇಮಕಗೊಂ‌ಡು ತಿಂಗಳಾದ ನಂತರ ಜಿಲ್ಲೆಗೆ ಬಂದ ಉಸ್ತುವಾರಿ ಸಚಿವರಿಗೆ ತಮ್ಮ ಕ್ಷೇತ್ರ ಸಮಸ್ಯೆ ಮಾಹಿತಿ ನೀಡುವ ತುರುಸಿನಲ್ಲಿ ಕಾಂಗ್ರೆಸ್ ಮತ್ತು ಜಾದಳ ಶಾಸಕರ ಮಧ್ಯೆ ಜಟಾಪಟಿ ಘಟನೆ ಇಂದಿನ ಕೆಡಿಪಿ ಸಭೆಯಲ್ಲಿ ನಡೆಯಿತು.
ಗ್ರಾಮಾಂತರ ಕ್ಷೇತ್ರದ ಶಾಸಕ ದದ್ದಲ ಬಸವನಗೌ‌ಡ ಅವರು ತಮ್ಮ ಕ್ಷೇತ್ರದ ನೆರೆ ಪರಿಸ್ಥಿತಿ ಮತ್ತು ಪರಿಹಾರ ಕಾಮಗಾರಿಗಳಿಗೆ ಸಂಬಂಧಿಸಿ ಸಭೆಯಲ್ಲಿ ಸುಧೀರ್ಘವಾಗಿ ಹೇಳುತ್ತಿದ್ದರೂ, ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಶಾಸಕ ವೆಂಕಟರಾವ್ ನಾಡಗೌಡ ಅವರು, ದದ್ದಲ ಬಸವನಗೌಡ ಅವರನ್ನು ಉದ್ದೇಶಿಸಿ `ಸಾಕು ಕೂಡಪ್ಪ` ಎಂದು ಹೇಳಿದರು. ಇದಕ್ಕೆ ತೀವ್ರ ಅಸಮಾಧಾನಗೊಂಡ ದದ್ದಲ ಬಸವನಗೌಡ ಅವರು, ವೆಂಕಟರಾವ್ ನಾಡಗೌಡ ಅವರಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ದದ್ದಲ ಅವರು, ಜನ ನಮ್ಮನ್ನು ಇಲ್ಲಿ ಕೂಡಲು ಆಯ್ಕೆ ಮಾಡಿ ಕಳುಹಿಸಿಲ್ಲ. ಅವರ ಸಮಸ್ಯೆ ಬಗ್ಗೆ ಆಡಳಿತರೂಢ ಸಚಿವರನ್ನು ಕೇಳಬೇಕೆನ್ನುವ ಉದ್ದೇಶದಿಂದ ಕಳುಹಿಸಿದ್ದಾರೆಂದು ಉತ್ತರಿಸಿದರು. ಇದಕ್ಕೆ ಸಂಬಂಧಿಸಿ ಇಬ್ಬರ ಮಧ್ಯೆ ವಾಗ್ವಾದ ನಡೆಯಿತು. ನಂತರ ತಾವಾಗಿಯೇ ಮೌನವಾದರು.
@12bc = ಜನರಿಗೆ ಪ್ರಾಣ ಸಂಕಷ್ಟ : ಅಧಿಕಾರಿಗಳಿಗೆ ಮೊಬೈಲ್ ಆಟ
ಜಿಲ್ಲೆಯ ನೆರೆ ಪರಿಸ್ಥಿತಿ ಬಗ್ಗೆ ಕೆಡಿಪಿ ಸಭೆಯಲ್ಲಿ ಗಂಭೀರ ಚರ್ಚೆ ನಡೆಯುತ್ತಿದ್ದರೇ ಮತ್ತೊಂದೆಡೆ ಅಧಿಕಾರಿಗಳು ಮೊಬೈಲ್‌ನಲ್ಲಿ ಚಾಟಿಂಗ್ ಮತ್ತು ಭಾವಚಿತ್ರಗಳ ವೀಕ್ಷಣೆಯಲ್ಲಿ ತೊಡಗಿದ್ದರು. ಮುಂದಿನ ಸಾಲಿನಲ್ಲಿ ಕುಳಿತವರನ್ನು ಹೊರತು ಪಡಿಸಿದರೇ, ಹಿಂದಿನ ಸಾಲಿನ ಅನೇಕರು ತಮ್ಮದೇಯಾದ ಮೊಬೈಲ್ ಶೋಧಕಾರ್ಯದಲ್ಲಿ ತೊಡಗಿದ್ದರು. ವಾಟ್ಸಾಪ್‌ಗಳಲ್ಲಿ ಭಾವಚಿತ್ರಗಳನ್ನು ಹಾಗೂ ಹಾಸ್ಯಚಿತ್ರಗಳನ್ನು ನೋಡುವಲ್ಲಿ ಮಗ್ನರಾಗಿದ್ದರು.
ಸಭೆಯಲ್ಲಿ ಸಚಿವರು ಮತ್ತು ಶಾಸಕರು ನೆರೆ ಮತ್ತು ಪರಿಹಾರ ಕಾಮಗಾರಿ ಬಗ್ಗೆ ಚರ್ಚೆ ಕೈಗೊಂಡಿದ್ದೇ, ಅಧಿಕಾರಿಗಳು ಮಾತ್ರ ಇದ್ಯಾವುದರ ಬಗ್ಗೆ ಪರಿವಿಲ್ಲದೇ, ತಮ್ಮದೇಯಾದ ಕೆಲಸ ಕಾರ್ಯದಲ್ಲಿ ಮಗ್ನರಾಗಿದ್ದರು. ಮಾಧ್ಯಮಗಳ ಕ್ಯಾಮೆರಾ ನೋಡುತ್ತಿದ್ದಂತೆ ಮೊಬೈಲ್ ಮುಚ್ಚಿಟ್ಟು, ಸಭೆಯ ಚರ್ಚೆಯಲ್ಲಿ ಪಾಲ್ಗೊಂ‌ಡವರಂತೆ ವಿಚಿತ್ರ ನಟನೆ ಮಾಡುವುದು ಬಹುತೇಕ ಕಡೆ ಕಂಡು ಬಂದಿತು.

Leave a Comment