ಕ್ಷುದ್ರಗ್ರಹದ ಖನಿಜಗಳ ಶೋಧನೆಗೆ ಓಸಿರಿಸ್-ರೆಕ್ಸ್ ಉಪಗ್ರಹ

ನಾಸಾದ ಓಸಿರಿಸ್-ರೆಕ್ಸ್ ಬಾಹ್ಯಾಕಾಶನೌಕೆ ಕ್ಷುದ್ರಗ್ರಹದಲ್ಲಿಯ (ಆಸ್ಟಿರಾಯಿಡ್) ಖನಿಜಗಳ ಶೋಧನೆಯಲ್ಲಿ ತೊಡಗಿದೆ.

ಕ್ಷುದ್ರಗ್ರಹಗಳಲ್ಲಿ ಬೆಲೆ ಬಾಳುವ ಖನಿಜಗಳು ಹೇರಳವಾಗಿದ್ದು, ಅಲ್ಲಿ ಖನಿಜಗಳ ಗಣಿಗಾರಿಕೆ ಮಾಡುವ ಸಾಧ್ಯತೆಯ ಕುರಿತಂತೆ ಪರಿಶೀಲಿಸುವುದೇ ನಾಸಾದ ಈ ಯೋಜನೆಯ ಉದ್ದೇಶ.

ಈ ಉದ್ದೇಶಕ್ಕಾಗಿ ನಾಸಾ ಓಸಿರಿಸ್-ರೆಕ್ಸ್ ಬಾಹ್ಯಾಕಾಶ ನೌಕೆಯನ್ನು ಫ್ಲೋರಿಡಾದ ಕೇಪ್ ಕಾನವೆರುಲ್‌ನಿಂದ 2016ರಲ್ಲಿ ಉಡಾವಣೆ ಮಾಡಿದೆ.
ಉಡಾವಣೆಗೊಂಡಿರುವ ನೌಕೆ, ಸೂರ್ಯನ ಸುತ್ತ ತನ್ನ ಕಕ್ಷೆಯಲ್ಲಿ ಕಳೆದೊಂದು ವರ್ಷದಿಂದ ಸುತ್ತುತ್ತಿದ್ದು, ಮುಂದೆ ಭೂಮಿಗೆ ಸಮೀಪದ ಬೆನ್ನು ಹೆಸರಿನ ಕ್ಷುದ್ರಗ್ರಹದತ್ತ ಯಾನ ಬೆಳೆಸುತ್ತದೆ.

ಮುಂದಿನ ಆಗಸ್ಟ್ ತಿಂಗಳಲ್ಲಿ ಬೆನ್ನು ಕ್ಷುದ್ರಗ್ರಹದ ಮೊದಲ ಚಿತ್ರಗಳನ್ನು ರವಾನಿಸಲಿದೆ. 2020ರ ವೇಳೆಗೆ ಓಸಿರಿಸ್-ರೆಕ್ಸ್-ನೌಕೆ ಬೆನ್ನು ಕ್ಷುದ್ರಗ್ರಹದ ಮೇಲ್ಮೈಯಲ್ಲಿ ಇಳಿಯಲಿದೆ ಎಂದು ನಾಸಾ ಹೇಳಿದೆ.

ಆ ಸಂದರ್ಭದಲ್ಲಿ ಗ್ರಹವನ್ನು ಕೊರೆದು ಅಲ್ಲಿ ಕಲ್ಲುಮಣ್ಣಿನ ಮೂರು ಮಾದರಿಗಳನ್ನು ಸಂಗ್ರಹಿಸಲಿದೆ. ನಾಲ್ಕು ವರ್ಷಗಳ ಕಾಲ ಬಾಹ್ಯಾಕಾಶದಲ್ಲಿದ್ದುಕೊಂಡು ಬೆನ್ನು ಕ್ಷುದ್ರಗ್ರಹದ ಆಕಾರ, ಅದರಲ್ಲಿರುವ ಖನಿಜ ಮತ್ತು ಅದರ ರಾಸಾಯನಿಕ ಗುಣಗಳ ಅಧ್ಯಯನ ನಡೆಸಲಿದೆ.

ಮಾರ್ಚ್ 2021ರಲ್ಲಿ ಓಸಿರಿಸ್-ರೆಕ್ಸ್ ಭೂಮಿಯತ್ತ ಪ್ರಯಾಣ ಬೆಳೆಸಲಿದ್ದು, ಸೆಪ್ಟೆಂಬರ್ 2023ರ ವೇಳೆಗೆ ಭೂಮಿಗೆ ಹತ್ತಿರವಾಗುತ್ತದೆ. ಆ ಸಂದರ್ಭದಲ್ಲಿ ತಾನು ಸಂಗ್ರಹಿಸಿರುವ ಮಾದರಿಗಳ ಕ್ಯಾಪ್ಸೂಲ್‌ ಅನ್ನು ಭೂಮಿಗೆ ಚಿಮ್ಮಿಸುತ್ತದೆ ಎಂದೂ ನಾಸಾ ಹೇಳಿದೆ.

ಬೆನ್ನು ಹೆಸರಿನ ಕ್ಷುದ್ರಗ್ರಹದಲ್ಲಿಯ ಕಬ್ಬಿಣ ಮತ್ತು ನಿಕ್ಕಲ್ ಖನಿಜಗಳ ಶೋಧನೆಗಾಗಿ ನಾಸಾ ಓಸಿರಿಸ್-ರೆಕ್ಸ್ ಬಾಹ್ಯಾಕಾಶ ನೌಕೆಯನ್ನು ರವಾನಿಸಿದೆ.

ಕ್ಷುದ್ರಗ್ರಹಗಳಲ್ಲಿ ಬೆಲೆ ಬಾಳುವ ಖನಿಜಗಳು ಹೇರಳವಾಗಿದ್ದು, ಅವುಗಳ ಗಣಿಗಾರಿಕೆ ಮಾಡಲು ಸಾದ್ಯವೇ ಎಂಬುದರ ಪರಿಶೀಲನೆಯೇ ಈ ಯಾನದ ಉದ್ದೇಶ.

2016ರಲ್ಲಿ ಯಾನ ಆರಂಭಿಸಿರುವ ನೌಕೆ, ಸೂರ್ಯನ ಸುತ್ತ ತನ್ನ ಕಕ್ಷೆಯಲ್ಲಿ ಸುತ್ತುತ್ತಿದ್ದು, ತನ್ನ ಕಾಯಕ ನಿರ್ವಹಣೆಗಾಗಿ ತನ್ನಲಿರುವ ಪ್ಯಾನೆಲ್‌ಗಳ ಮೂಲಕ ವಿದ್ಯುತ್ ಉತ್ಪಾದಿಸಿಕೊಳ್ಳುತ್ತದೆ.

2021ರಲ್ಲಿ ಭೂಮಿಯತ್ತ ಮರಳಲು ಯಾನ ಆರಂಭಿಸಿ, 2023ರ ವೇಳೆ ಭೂಮಿಗೆ ಮರಳುತ್ತದೆ ಎಂದು ನಾಸಾ ಹೇಳಿದೆ.

Leave a Comment