ಕ್ಷೀರ ಪಥದಾಚೆ ಹೊಸ ನಕ್ಷತ್ರ ಪತ್ತೆ

ನಾಸಾ ವಿಜ್ಞಾನಿಗಳು ಕ್ಷೀರಪಥದ ಆಚೆಗಿನ ಅಪರೂಪದ ಏಕಾಂಗಿಯಾದ ಹಾಗೂ ವಿಶೇಷ ಮಾದರಿಯ ನ್ಯೂಟ್ರಾನ್ ನಕ್ಷತ್ರವನ್ನು ಪತ್ತೆ ಮಾಡಿದ್ದಾರೆ.

ಮೊದಲ ಬಾರಿಗೆ ಕ್ಷೀರ ಪಥದ ಆಚೆ ಇಂತಹ ನಕ್ಷತ್ರ ಕಾಣಿಸಿಕೊಂಡಿದೆ ಎಂದು ನಾಸಾ ವಿಜ್ಞಾನಿಗಳು ಹೇಳಿದ್ದಾರೆ.

ಭೂಮಿಯಿಂದ ೨೦೦,೦೦೦ ಕಿ.ಮೀನಷ್ಟು ದೂರದಲ್ಲಿರುವ ಈ ನಕ್ಷತ್ರವನ್ನು ಚಂದ್ರ ಎಕ್ಸ್‌ರೇ ವೀಕ್ಷಣಾಲಯ ಮತ್ತು ಚಿಲಿಯಲ್ಲಿರುವ ಯೂರೋಪಿಯನ್ ಯೂನಿಯನ್‌ನ ಅತಿ ದೊಡ್ಡ ಹಾಗೂ ಶಕ್ತಿಶಾಲಿ ಟೆಲಿಸ್ಕೋಪ್ ದತ್ತಾಂಶ ಬಳಸಿ ಪತ್ತೆ ಹಚ್ಚಲಾಗಿದೆ. ಈ ಹೊಸ ನಕ್ಷತ್ರದ ಶೋಧನೆ ಕುರಿತ ವರದಿ ನೇಚರ್ ಅಸ್ಟ್ರಾನಮಿ ನಿಯತಕಾಲಿಕದ ಇತ್ತೀಚಿನ ಸಂಚಿಕೆಯಲ್ಲಿ ಪ್ರಕಟವಾಗಿದೆ.

ನಕ್ಷತ್ರ ಹೊಳೆಯುತ್ತಿರುವ ಅನಿಲದ ಚೆಂಡು. ಇಂತಹ ಒಂದು ನಕ್ಷತ್ರದಲ್ಲಿ ಅತಿ ಭಾರವಾದ ದ್ರವ್ಯರಾಶಿ ಉತ್ಪತ್ತಿಯಾಗಿ ಒಳಗಿನ ಶಾಖ ಮಿತಿ ಮೀರಿ ಆಸ್ಫೋಟಗೊಳ್ಳುತ್ತದೆ. ಇದನ್ನು ಸೂಪರ್ ನೋವಾ ಎನ್ನುತ್ತೇವೆ. ಸೂಪರ್ ನೋವಾ ಆಸ್ಫೋಟದ ನಂತರದಲ್ಲಿ ನಕ್ಷತ್ರದ ಕುಸಿದ ಗರ್ಭವೇ ನ್ಯೂಟ್ರಾನ್ ನಕ್ಷತ್ರ. ಇದರಲ್ಲಿ ದ್ರವ್ಯರಾಶಿ ಅತಿ ಹೆಚ್ಚಿನ ಸಾಂದ್ರತೆಯಿಂದ ಕೂಡಿರುತ್ತದೆ.ಸೂರ್ಯನಲ್ಲಿಯ ಮೂಲ ವಸ್ತುವಿನ ೩.೨ರಷ್ಟು ಮೂಲವಸ್ತುವನ್ನು ಇದು ಹೊಂದಿರುತ್ತದೆ.

ನಕ್ಷತ್ರದ ಶಾಖ ಅದರ ಕೇಂದ್ರ ಬಿಂದುವಿನಿಂದ ಉತ್ಪತ್ತಿಯಾಗುತ್ತದೆ.

ಜಲಜನಕವು ಹೀಲಿಯಂ ಆಗಿ ಪರಿವರ್ತನೆ ಹೊಂದುವ ಪ್ರಕ್ರಿಯೆಯಲ್ಲಿ ಅಪಾರ ಪ್ರಮಾಣದ ಶಕ್ತಿ ಉತ್ಪತ್ತಿಯಾಗುತ್ತದೆ.

ಬಿಸಿ ಅನಿಲ ಮತ್ತು ಧೂಳೀನಕಣಗಳು ತಂಪಾದಾಗ ನಕ್ಷತ್ರ ಉಂಟಾಗುತ್ತದೆ. ಅನೇಕ ನಕ್ಷತ್ರಗಳು ಸಾವಿರಾರು ವರ್ಷಗಳವರೆಗೆ ಪ್ರಕಾಶಿಸುತ್ತವೆ. ನಕ್ಷತ್ರಗಳನ್ನು ಅತಿ ಶಾಖದ, ಮಧ್ಯಮ ಉಷ್ಣತೆಯ ಮತ್ತು ತಂಪಾದ ನಕ್ಷತ್ರಗಳೆಂದು ವರ್ಗೀಕರಿಸಲಾಗಿದೆ. ಅತಿ ಶಾಖದ ನಕ್ಷತ್ರಗಳು ನೀಲಿ ಬೆಳಕನ್ನು ಮತ್ತು ತಂಪು ನಕ್ಷತ್ರಗಳು ಕೆಂಪು ಬೆಳಕನ್ನು ಬೀರುತ್ತವೆ. ಮಧ್ಯಮ ಉಷ್ಣತೆ ನಕ್ಷತ್ರ ಹಳದಿ ಬಣ್ಣ ಪಡೆದಿರುತ್ತದೆ.

ಲಕ್ಷಾಂತರ ನಕ್ಷತ್ರಗಳಿಂದ ಕೂಡಿರುವ ಸಮುದಾಯವನ್ನು ನಕ್ಷತ್ರ ಮಂಡಲ ಎನ್ನುತ್ತೇವೆ. ಇವೆಲ್ಲ ಗುರುತ್ವಾಕರ್ಷಣಾ ಶಕ್ತಿಗೆ ಒಳಪಟ್ಟಿರುತ್ತವೆ. ೨೦ ಬಿಲಿಯನ್ ವರ್ಷಗಳ ಹಿಂದೆ ಜಗತ್ತು ಸೃಷ್ಠಿಯಾದಾಗ ನಕ್ಷತ್ರ ಸಮುದಾಯಗಳು ರೂಪುಗೊಂಡವು. ವಿಜ್ಞಾನಿಗಳ ಪ್ರಕಾರ ಪ್ರಾರಂಭದಲ್ಲಿ ಜಲಜನಕದ ಮೋಡ ಮಾತ್ರ ಇತ್ತು. ನಂತರದಲ್ಲಿ ಬೃಹದಾಕಾರದ ಅನಿಲ ಮೋಡಗಳು ಒಟ್ಟುಗೂಡಿ ನಕ್ಷತ್ರಗಳಂತೆ ಪ್ರಕಾಶಿಸಲು ಪ್ರಾರಂಭಿಸಿದವು.

ಆಕಾಶದಲ್ಲಿ ಒಟ್ಟು ೧೦೦,೦೦೦ ಮಿಲಿಯನ್ ನಕ್ಷತ್ರಗಳು ಇವೆ ಎಂದು ಅಂದಾಜಿಸಲಾಗಿದೆ. ಆದರೆ ನಮ್ಮ ಕಣ್ಣಿಗೆ ಕಾಣುವುದು ಸುಮಾರು ೩೦೦೦ ನಕ್ಷತ್ರಗಳು ಮಾತ್ರ.

ಅಮೆರಿಕಾದ ನಾಸಾ ವಿಜ್ಞಾನಿಗಳು ಇದೇ ಮೊದಲ ಬಾರಿಗೆ ಕ್ಷೀರಪಥದ ಆಚೆಗೆ ಅಪರೂಪದ ಏಕಾಂಗಿಯಾದ ಹಾಗೂ ವಿಶೇಷ ಮಾದರಿಯ ನ್ಯೂಟ್ರಾನ್ ನಕ್ಷತ್ರವನ್ನು ಪತ್ತೆ ಮಾಡಿದ್ದಾರೆ. ಭೂಮಿಯಿಂದ ೨೦೦,೦೦೦ ಕಿ.ಮೀನಷ್ಟು ದೂರದಲ್ಲಿರುವ ಈ ನಕ್ಷತ್ರವನ್ನು ಚಂದ್ರ ಎಕ್‌ಎ ವೀಕ್ಷಣಾಲಯ ಮತ್ತು ಯುರೋಪಿಯನ್ ಯೂನಿಯನ್‌ನ ಶಕ್ತಿಶಾಲಿ ಟೆಲಿಸ್ಕೋಪ್ ದತ್ತಾಂಶ ಬಳಸಿ ಪತ್ತೆ ಹಚ್ಚಲಾಗಿದೆ.

– ಉತ್ತನೂರು ವೆಂಕಟೇಶ್

Leave a Comment