ಕ್ಷಯರೋಗ ಎಚ್ಚರ ಅವಶ್ಯ

ಪ್ರತಿವರ್ಷ ಮಾರ್ಚ್ ೨೪ರನ್ನು ವಿಶ್ವ ಕ್ಷಯ ರೋಗದಿನವನ್ನಾಗಿ ಆಚರಿಸಲಾಗುತ್ತಿದೆ. ಇದರ ಉದ್ದೇಶ: ಸರ್ಕಾರ, ಆರೋಗ್ಯ ಸಂಸ್ಥೆಗಳು, ವಿಭಾಗಗಳು, ಸ್ವಯಂಸೇವಾ ಸಂಸ್ಥೆಗಳು ಒಂದಾಗಿ ಹೆಚ್ಚುತ್ತಿರುವ ಈ ಸಾಂಕ್ರಾಮಿಕ ಪಿಡುಗನ್ನು ನಿವಾರಿಸುವುದು.
ಈ ದಿನವನ್ನು ಆಚರಿಸುವ ಮುಂಚೆ ಡಾ|| ರಾಬರ್ಟ್ ಕಾಕ್ ಎನ್ನುವ ಮಹಾಜ್ಞಾನಿಯನ್ನು ನೆನೆಪಿಸಿಕೊಳ್ಳಬೇಕು ಆತನು ಕ್ಷಯರೋಗದ ಸೂಕ್ಷ್ಮಾಣು ಕಂಡುಹಿಡಿದು, ಕ್ಷಯರೋಗದ ಕಾರಣಗಳು ಹಾಗೂ ಮುಂದೆ ನಿರಂತರ ವೈಜ್ಞಾನಿಕ ಸಂಶೋಧನೆಗಳಿಂದ ಚಿಕಿತ್ಸಾ ಪದ್ಧತಿಯು ತಿಳಿಯಲ್ಪಟ್ಟಿದೆ.
ಆದರೂ ಇತ್ತೀಚಿನ ದಿನಗಳಲ್ಲಿ ಕ್ಷಯದಿಂದ ನರಳುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಕಾರಣಗಳು ಹಲವಾರು. ಅಪೌಷ್ಟಿಕತೆ, ಮೇಲಿಂದ ಮೇಲೆ ಕಾಡುವ ವೈರಾಣುಗಳು, ರೋಗ ನಿರೋಧಕಗಳ ಕೊರತೆ, ಲಸಿಕೆಗಳ ವೈಫಲ್ಯ, ಹೆಚ್.ಐ.ವಿ. ಸೋಂಕು, ಚಿಕಿತ್ಸೆಯನ್ನು ಗುರುತಿಸುವಲ್ಲಿ ಹಾಗೂ ಚಿಕಿತ್ಸೆಗೆ ಗುಣಪಡಿಸುವಲ್ಲಿ ನಿಧಾನ, ಬದಲಾಗುತ್ತಿರುವ ಈ ಸೂಕ್ಷ್ಮಾಣುಗಳ ಅನುವಂಶೀಯತೆ – ಅದರ ಪರಿಣಾಮ ಕ್ಷಯದ ಔಷಧಿಗಳು ಕೆಲಸ ಮಾಡದಿರುವುದು – ಈ ಮೇಲ್ಕಂಡ ಹಲವಾರು ಕಾರಣಗಳಿಂದ ಈ ಖಾಯಿಲೆಯಿಂದ ನರಳುತ್ತಿರುವ ಸಂಖ್ಯೆಯು ಹೆಚ್ಚಾಗುತ್ತಿದೆ.
ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ಪ್ರತಿ ವರ್ಷ ಕ್ಷಯ ರೋಗದಿಂದ ಸಾಯುತ್ತಿರುವ ಸಂಖ್ಯೆ ೨.೨ ಲಕ್ಷದಿಂದ ೪ ಲಕ್ಷದವರೆಗೆ ಇದೆ ಎಂದು ಅಂದಾಜಿಸಲಾಗಿದೆ ಮತ್ತು ಪ್ರಪಂಚದಾದ್ಯಂತ ಕಂಡುಹಿಡಿದ ಹೊಸ ಕ್ಷಯರೋಗಿಗಳ ಸಂಖ್ಯೆಯಲ್ಲಿ ಶೇ. ೨೭ರಷ್ಟು ಭಾರತದ ರೋಗಿಗಳು.
ಆದರೆ ಮುಖ್ಯವಾದ ಅಂಶವೆಂದರೆ ಸುಮಾರು ೮೦,೦೦೦ ರೋಗಿಗಳು ಅಂದರೆ ಶೇ.೧೧ರಷ್ಟು ರೋಗಿಗಳಲ್ಲಿ ಕ್ಷಯಕ್ಕೆ ಸಂಬಂಧಿಸಿದ ಔಷಧಿಗಳು ಪರಿಣಾಮಕಾರಿಯಾಗಿ ಕೆಲಸ ಮಾಡದಿರುವುದು ಇದು ಆತಂಕಕಾರಿ ಬೆಳವಣಿಗೆ. ಇದನ್ನು ಆಡಿug ಖesisಣಚಿಟಿಣ ಣubeಡಿಛಿuಟosis ಎನ್ನುತ್ತಾರೆ. ಅಂದರೆ ಹೊಸ ರೋಗಿಗಳಲ್ಲಿ ಶೇಖಡ ೨.೫ರಷ್ಟು ಜನರಲ್ಲಿ ಔಷಧಿಗಳು ಕೆಲಸ ಮಾಡುವುದು ಅಪಾಯಕಾರಿ ಅಂಶ. ಇದನ್ನು ಔಷಧ ನಿರೋಧ ಕ್ಷಯ ಎನ್ನಬಹುದು.

ಚಿಹ್ನೆಗಳು: ವಿಶೇಷತೆಯೆಂದರೆ ಈ ಸೋಂಕುವಿನಿಂದ ಮೊದಲ ಹಂತದಲ್ಲಿ ಯಾವುದೇ ಚಿಹ್ನೆಗಳಿರುವುದಿಲ್ಲ, ಕ್ರಮೇಣವಾಗಿ ಉಲ್ಬಣಗೊಂಡು ಇಡೀ ಶರೀರವನ್ನು ವ್ಯಾಪಿಸುತ್ತದೆ.
ಹೆಚ್ಚಿನ ರೀತಿಯಲ್ಲಿ ಶ್ವಾಸಕೋಶದ ಚಿಹ್ನೆಗಳು ಕಾಣಿಸಿಕೊಳ್ಳುತ್ತವೆ. ಅಂದರೆ ಮೇಲಿಂದ ಮೇಲೆ ಜ್ವರ, ಕೆಮ್ಮು, ಕಫ, ರಕ್ತ ಸಹಿತ ಕಫ, ಸುಸ್ತು, ತೂಕ ಕಡಿಮೆಯಾಗುವುದು, ಹಸಿವು ಕಡಿಮೆಯಾಗುವುದು. ಹಾಗೆಯೇ ಶ್ವಾಸಕೋಶ ಹೊರತುಪಡಿಸಿ ಬೇರೆ ಅಂಗಾಂಗಗಳಲ್ಲಿ ಕ್ಷಯ ಕಾಣಿಸಿಕೊಳ್ಳಬಹುದು. ಅಂದರೆ ಮೆದುಳು, ಯಕೃತ್, ಗುಲ್ಮ, ಮೂತ್ರಪಿಂಡ, ಗ್ರಂಥಿ, ದುಗ್ದರಸ ಗ್ರಂಥಿಗಳ ಉಬ್ಬುವಿಕೆ.
ಹರಡುವ ವಿಧಾನಗಳು: ಈ ರೋಗವು ಕ್ಷಯದಿಂದ ಬಳಲುತ್ತಿರುವ ರೋಗಿಯಿಂದ ಹರಡುವ ಸಾಧ್ಯತೆಗಳು ಹೆಚ್ಚು. ಅಂದರೆ, ಕೆಮ್ಮು, ಸೀನು, ಮಾತನಾಡುವಾಗ ಹೊರಬರುವ ಕಣಗಳಲ್ಲಿ ಸೋಂಕುಗಳು ಗಾಳಿಯಲ್ಲಿ ಹರಡಿ ಇನ್ನೊಬ್ಬರ ಶ್ವಾಸಕೋಶದಲ್ಲಿ ಸೇರಿ ಸೋಂಕು ಹರಡುತ್ತದೆ. ಆದರೆ ಬೇಗ ಚಿಕಿತ್ಸೆ ಕೊಡುವುದರಿಂದ ಈ ರೀತಿ ಹರಡುವುದು ಕಡಿಮೆಯಾಗುತ್ತದೆ, ಕೈಕುಲುಕುವುದರಿಂದ ಹಾಗೂ ಆಹಾರ ಪದಾರ್ಥಗಳನ್ನು ಹಂಚಿಕೊಳ್ಳುವುದರಿಂದ ಇದು ಹರಡುವುದಿಲ್ಲ.
ಕ್ಷಯ ರೋಗದಲ್ಲಿ ಎರಡು ವಿಧಗಳು:-
ಗುಪ್ತವಾದ ಕ್ಷಯ ಮತ್ತು ಉಲ್ಬಣಗೊಂಡ ಕ್ಷಯ:
ಗುಪ್ತವಾದ ಕ್ಷಯದಲ್ಲಿ ರೋಗ ಚಿಹ್ನೆಗಳು ಕಡಿಮೆ. ಎದೆಯ ಕ್ಷ-ಕಿರಣಗಳು ಸಹಜವಾಗಿರುತ್ತದೆ ಆದರೆ ಉಲ್ಬಣಗೊಂಡ ಕ್ಷಯದಲ್ಲಿ ಚಿಹ್ನೆಗಳು ಹಾಗೂ ಎದೆಯ ಕ್ಷ-ಕಿರಣದಲ್ಲಿ ಸೋಂಕುಗಳು ಕಾಣುತ್ತವೆ.
ಕೆಲವೊಂದು ಸಂದರ್ಭಗಳಲ್ಲಿ ಗುಪ್ತವಾದ ಕ್ಷಯ ಉಲ್ಬಣಗೊಂಡು ಕ್ಷಯವಾಗಿ ಬದಲಾವಣೆಗೊಳ್ಳುತ್ತದೆ. ಅಂದರೆ ಸಕ್ಕರೆ ಖಾಯಿಲೆ, ಅಪೌಷ್ಟಿಕತೆ, ರೋಗನಿರೋಧಕ ಕೊರತೆ ಇರುವ ಖಾಯಿಲೆಗಳು, ಕ್ಯಾನ್ಸರ್ ಖಾಯಿಲೆ ಇತ್ಯಾದಿ.
ರೋಗ ಕಂಡು ಹಿಡಿಯುವ ವಿಧಾನಕ್ಕೆ ರಕ್ತ ಪರೀಕ್ಷೆ:-
ಮಾಂಟೆಕ್ಸ್ ಎನ್ನುವ ಪರೀಕ್ಷಾ ವಿಧಾನದಲ್ಲಿ ಕ್ಷಯದ ರೋಗಾಣುಗಳು ಚರ್ಮದಲ್ಲಿ ತೋರಿಸುವ ಅತಿ ಪ್ರತಿಕ್ರಿಯೆಯನ್ನು ಅವಲಂಬಿಸಿ ರೋಗದ ಪತ್ತೆ.
ಶ್ವಾಸಕೋಶ ಕ್ಷ-ಕಿರಣದಲ್ಲಿ ರೋಗದ ಸೋಂಕು ಹಾಗೂ ತೀವ್ರತೆಯನ್ನು ಕಾಣಬಹುದು.
ಕಫದ ಪರೀಕ್ಷೆಯಿಂದ ಕ್ಷಯ ರೋಗಾಣುಗಳನ್ನು ಪತ್ತೆ ಹಚ್ಚಬಹುದು ಹಾಗೂ ಮುಂದುವರೆದ ಹಾಗೆ ಕ್ಷಯದ ವಂಶವಾಹಿನಿಗಳು ಮತ್ತು ಔಷಧ ಕ್ಷಮತೆಯನ್ನು ಪತ್ತೆ ಹಚ್ಚಬಹುದು ಇದಕ್ಕೆ ಜೀನ್ ವಂಶವಾಹಿನಿ ನುರಿತ ಪದ್ದತಿ (ಉeಟಿe exಠಿeಡಿಣ) ಎನ್ನುತ್ತಾರೆ.
ಚಿಕಿತ್ಸೆ:
ರಾಷ್ಟ್ರೀಯ ಕ್ಷಯ ರೋಗ ನಿರ್ಮೂಲನಾ ಸಂಸ್ಥೆ ಕ್ಷಯ ರೋಗ ನಿರ್ಮೂಲನೆಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಅದರಲ್ಲಿ ಪ್ರಮುಖವಾಗಿ ರೋಗ ಪತ್ತೆ ಹಚ್ಚುವುದು ಹಾಗೂ ಚಿಕಿತ್ಸೆಯನ್ನು ಉಚಿತವಾಗಿ ನೀಡುವುದು. ಇದರಲ್ಲಿ ಎರಡು ವರ್ಗಗಳಾಗಿ ಮಾಡಿ, ಚಿಹ್ನೆಗಳ ಪ್ರಕಾರ ರೋಗಿಗಳಿಗೆ ಚಿಕಿತ್ಸೆಯನ್ನು ನೀಡಲಾಗುತ್ತದೆ.
ಸವಾಲುಗಳು:-
ಕ್ಷಯ ರೋಗದ ಚಿಕಿತ್ಸೆಯಲ್ಲಿ ಸವಾಲುಗಳು ಅನೇಕ. ಅದರಲ್ಲೂ ಔಷಧ ಪ್ರತಿರೋಧ ಶಕ್ತಿಹೀನತೆಯಿಂದ ಔಷಧಿಗಳು ಪರಿಣಾಮಕಾರಿಯಾಗಿ ಕೆಸ ಮಾಡದೇ ಇರುವುದು, ಮುಂಬರುವ ದಿನಗಳಲಿ ರೋಗಿಗಳನ್ನು ಕಾಡುತ್ತದೆ. ಹಾಗೆಯೇ ಮುಂದುವರೆದರೆ ಪರಿಣಾಮಕಾರಿಯಾದ ಔಷಧಗಳು ಕಡಿಮೆಯಾಗಿ ವ್ಯಾಪಕವಾಗಿ ಸೋಂಕು ಹರಡುವ ಸಾಧ್ಯತೆ ಹೆಚ್ಚು.
ರೋಗ ತಡೆಗಟ್ಟುವ ಕೆಲವು ಮುಖ್ಯ ಅಂಶಗಳು:
ಹುಟ್ಟಿದಾಗ ಬಿ.ಸಿ.ಜಿ. ಲಸಿಕೆ ಹಾಕಿಸುವುದು.
ಎದೆ ಹಾಲುಣಿಸುವಿಕೆ.
ಅಪೌಷ್ಠಿಕತೆಯನ್ನು ತಡೆಗಟ್ಟುವುದು.
ಎಂ.ಆರ್ ಲಸಿಕೆಯ ಅಭಿಯಾನದ ಸಫಲತೆ
ಕ್ಷಯ ರೋಗದ ಚಿಹ್ನೆಗಳು ಕಂಡುಬಂದಲ್ಲಿ ತಕ್ಷಣ ವೈದ್ಯರನ್ನು ಭೇಟಿಯಾಗುವುದು
ಚಿಕಿತ್ಸಾ ಪದ್ಧತಿ ಮತ್ತು ಅನುಸರಣೆ ಬಹಳ ಮುಖ್ಯವಾದುದು.
ಕಾಲಕಾಲಕ್ಕೆ ಪರೀಕ್ಷೆ, ಸೋಂಕುಗಳು ಹರಡದಂತೆ ವೈಯಕ್ತಿಕವಾಗಿ ಹಾಗೂ ಸಾರ್ವಜನಿಕ ತಿಳುವಳಿಕೆ.
ಕೆಮ್ಮುವಾಗ ದೂರವಿರುವುದು ಮತ್ತು ಕರವಸ್ತ್ರವನ್ನು ಉಪಯೋಗಿಸುವುದು, ಮುಖ ಕವಚವನ್ನು ಧರಿಸುವದು, ಕೈಯನ್ನು ಶುಚಿಯಾಗಿ ಇಟ್ಟುಕೊಳ್ಳುವುದು ಇತ್ಯಾದಿ.
ಬನ್ನಿ ಸ್ನೇಹಿತರೆ ಸಾರ್ವಜನಿಕರಲ್ಲಿ ಈ ರೋಗದ ಬಗ್ಗೆ ಅರಿವು ಮೂಡಿಸಿ “ಕ್ಷಯವನ್ನು ಕೊನೆಗಾಣಿಸಲು ಎಲ್ಲರೂ ಒಂದಾಗೋಣ”

– ಡಾ|| ಸೋಮಶೇಖರ
ಪ್ರಾಧ್ಯಾಪಕರು – ಶ್ವಾಸಕೋಶ ತಜ್ಜರು, ರಾಮಯ್ಯ ವೈದ್ಯಕೀಯ ಸಂಸ್ಥೆ

Leave a Comment