ಕ್ವೆಟ್ಟಾ: ಬಾಂಬ್ ಆಸ್ಫೋಟಕ್ಕೆ 15 ಮಂದಿ ಬಲಿ

ಕ್ವೆಟ್ಟಾ, ಆ.೧೩- ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ರ್ಯದ ಕ್ವೆಟ್ಟಾದಲ್ಲಿಂದು ಜನಭರಿತ ಮಾರುಕಟ್ಟೆಯಲ್ಲಿ ಬಾಂಬ್ ಸಿಡಿದು ಕನಿಷ್ಠ 15 ಮಂದಿ ಸತ್ತಿದ್ದಾರೆಂದು ಪೊಲೀಸರು ಹೇಳಿದ್ದಾರೆ.

ಮಧ್ಯ ಪ್ರಾಚ್ಯರ ಐಸಿಸ್ ಈ ಆಸ್ಫೋಟದ ಹೊಣೆ ಹೊತ್ತಿದೆ. ಮೋಟಾರ್ ಸೈಕಲ್ ಬಾಂಬರ್ 17 ಸೈನಿಕರನ್ನು ಕೊಂದಿದ್ದಾನೆಂದು ಆಪ್ಘಾನಿಸ್ತಾನ ಮತ್ತು ಪಾಕಿಸ್ತಾನದಲ್ಲಿ ತೆಳ್ಳಗೆ ನೆಲೆಯೂರಿರುವ ಐಸಿಸ್ ದೃಢಪಡಿಸಿದೆ.

ಈ ದುರಂತದಲ್ಲಿ 40 ಜನ ಗಾಯಗೊಂಡಿದ್ದಾರೆ. ಕ್ವೆಟ್ಟಾದಲ್ಲಿ ತುರ್ತು ಪರಿಸ್ಥಿತಿ ಜಾರಿಗೊಳಿಸಲಾಗಿದೆ ಹಾಗೂ ಎಲ್ಲಾ ಆಸ್ಪತ್ರೆಗಳನ್ನು ಕಟ್ಟೆಚ್ಚರದಲ್ಲಿ ಸಜ್ಜಾಗಿಡಲಾಗಿದೆ.
ಕ್ವೆಟ್ಟಾದ ಬಾಂಬ್ ನಿಷ್ಕ್ರಿಯ ದಳದ ಮುಖ್ಸಸ್ಥ ಅಸ್ಲಾಂ ತರೀನ್ ತನ್ನ ಬಾಂಬ್ ಇಟ್ಟಿದ್ದ ಮೋಟಾರ್ ಬೈಕನ್ನು ಸೈನಿಕರ ಟ್ರಕ್ ಮೇಲೆ ನುಗ್ಗಿಸಿದ್ದ, ಈ ಸತ್ತ 15 ಮಂದಿಯಲ್ಲಿ ಕನಿಷ್ಠ 7 ಮಂದಿ ನಾಗರೀಕರಾಗಿದ್ದಾರೆಂದು ಅವರು ಹೇಳಿದ್ದಾರೆ.

ದೇಶದ 70ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಗೆ ಭಂಗ ತರಲು ಭಯೋತ್ಪಾದಕರು ಪ್ರಯತ್ನಿಸುತ್ತಿದ್ದಾರೆಂದು ಪಾಕ್ ಸೇನಾ ಮುಖ್ಯಸ್ಥ ಕಮಾರ್ ಜವೇದ್ ಬಾಜ್ವಾ ಆರೋಪಿಸಿದ್ದಾರೆ.

ನಮ್ಮ ನಿರ್ಧಾರವನ್ನು ಯಾವುದೇ ಸವಾಲುಗಳು ಎದುರಾದರೂ ಬದಲಾಯಿಸುವುದಿಲ್ಲ. ಪ್ರತ್ಯೇಕತಾವಾದಿಗಳು ಮತ್ತು ಉಗ್ರರು ಬಲೂಚಿಸ್ತಾನದ ಶ್ರೀಮಂತ ಸಂಪನ್ಮೂಲಗಳನ್ನು ಗಮನಿಸಿ ಅದನ್ನು ಪ್ರತ್ಯೇಕ ಮಾಡಲು ಹೊರಟಿದ್ದಾರೆ. ಆದರೆ ಇದು ಎಂದೂ ಫಲಿಸದು ಎಂದು ಸೇನಾ ಮುಖಂಡರು ಹೇಳಿದ್ದಾರೆ.

ಐಸಿಸ್ ಜೊತೆಗೆ ತಾಲಿಬಾನ್ ಮತ್ತಿತರ ಇಸ್ಲಾಮಿಕ್ ಉಗ್ರರು ಈ ಪ್ರದೇಶದಲ್ಲಿ ಕಾರ್ಯಾಚರಣೆ ಮಾಡುತ್ತಿದ್ದು, ಬಲೂಚಿಸ್ತಾನದ ಗಡಿಗೆ ಇರಾನ್ ಮತ್ತು ಆಫ್ಘನ್ ಹೊಂದಿಕೊಂಡಿವೆ. ಕಳೆದ ವರ್ಷ ಅಮೆರಿಕ ಕೈಗೊಂಡ ಡ್ರೋಣ್ ಕಾರ್ಯಾಚರಣೆಯಲ್ಲಿ ತಾಲಿಬಾನ್ ಮುಖಂಡ ಮುಲಾ ಅಖ್ತರ್ ಮನ್ಸೂರ್ ಹತ್ಯೆಯಾಗಿತ್ತು. ಕಳೆದ ವರ್ಷ ಈ ಪ್ರದೇಶದಲ್ಲಿ ನಡೆದ ಭಯೋತ್ಪಾದಕ ಹಿಂಸಾಚಾರದಲ್ಲೂ 180 ಜನ ಸತ್ತಿದ್ದು, ಉಗ್ರರ ಅಟ್ಟಹಾಸ ಮುನ್ನೆಡೆದಿದೆ. ಐಸಿಸ್ ಹಲವು ಬಾಂಬ್ ಆಸ್ಫೋಟದಲ್ಲಿ ಭಾಗಿಯಾಗಿದೆ.

ನ್ಯಾಯಾಂಗ ತನಿಖೆಯೊಂದು ಈ ಪ್ರದೇಶಧಲ್ಲಿ ಉಗ್ರರನ್ನು ನಿಗ್ರಹಿಸಲು ಸೂಕ್ತ ಭದ್ರತಾ ವ್ಯವಸ್ಥೆ ಇಲ್ಲದಿರುವುದನ್ನು ಬಹಿರಂಗಪಡಿಸಿದೆ. ಸುಮಾರು 1500 ಉಗ್ರರು ಈ ಪರ್ವತ ಪ್ರದೇಶದಲ್ಲಿ ಅಡಗಿ ಕುಳಿತು ಹಿಂಸಾಚಾರದಲ್ಲಿ ತೊಡಗಿದ್ದಾರೆಂದು ಪೊಲೀಸರು ಮತ್ತು ಆಂತರಿಕ ಪತ್ತೆದಾರಿ ಸಂಸ್ಥೆಗಳು ಹೇಳುತ್ತವೆ.

Leave a Comment