ಕ್ವಾರಂಟೈನ್ ನಲ್ಲಿ ಸುಸೈಡ್ ಮಾಡಿಕೊಂಡ ವ್ಯಕ್ತಿಯಲ್ಲಿ ಕೊರೊನಾ ಪಾಸಿಟಿವ್!

ಮಂಗಳೂರು, ಮೇ ೨೩ ಮೂಡಬಿದ್ರೆ ಠಾಣಾ ವ್ಯಾಪ್ತಿಯ ಕಡಂದಲೆಯ ಕ್ವಾರಂಟೈನ್ ಕೇಂದ್ರದಲ್ಲಿ ಮೊನ್ನೆ ಆತ್ಮಹತ್ಯೆ ಮಾಡಿಕೊಂಡಿದ್ದ ಮುಂಬೈ ಮೂಲದ ವ್ಯಕ್ತಿಯ ಗಂಟಲ ದ್ರವ ಪರೀಕ್ಷೆ ವರದಿ ನಿನ್ನೆ ಲಭಿಸಿದ್ದು ಕೊರೊನಾ ಸೋಂಕು ದೃಢಪಟ್ಟಿದೆ.

ಮೃತ ವ್ಯಕ್ತಿ ಮುಂಬೈಯಿಂದ ಬಂದಿದ್ದು ಅಲ್ಲಿ ವ್ಯವಹಾರ ನಷ್ಟದಿಂದ ಕಂಗಾಲಾಗಿದ್ದರು ಎನ್ನಲಾಗಿದೆ. ಮುಂದೆ ಜೀವನ ಸಾಗಿಸುವುದು ಹೇಗೆ ಎಂಬ ಚಿಂತೆಯಲ್ಲಿ ಸಾವಿಗೆ ಶರಣಾಗಿದ್ದು ಇವರ ಪರೀಕ್ಷಾ ವರದಿ ಇಂದು ಲಭ್ಯವಾಗಿದೆ. ಮೃತರ ಪರೀಕ್ಷಾ ವರದಿಯಲ್ಲಿ ಕೋವಿಡ್೧೯ ಸೋಂಕು ದೃಢಪಟ್ಟಿದೆ. ವ್ಯಕ್ತಿ ಚೆಕ್ ಪೋಸ್ಟ್ ನಲ್ಲಿ ತಪಾಸಣೆಗೆ ಒಳಪಡುವ ಭಯದಿಂದ ಸಚ್ಚೇರಿಪೇಟೆ ಒಳರಸ್ತೆಯ ಮೂಲಕ ಕಡಂದಲೆ ಗ್ರಾಮಕ್ಕೆ ಬಂದಿದ್ದರು. ಬಳಿಕ ಅವರನ್ನು ಕಡಂದಲೆ ಶಾಲೆಯಲ್ಲಿ ಕ್ವಾರಂಟೈನ್ ಗೊಳಪಡಿಸಲಾಗಿತ್ತು. ಮೃತರ ಶವಸಂಸ್ಕಾರ ಬೋಳೂರಿನಲ್ಲಿ ನಡೆಸಲಾಗಿದೆ.

Leave a Comment