ಕ್ವಾರಂಟೈನ್ ನಲ್ಲಿದ್ದ 124 ಜನರಿಗೆ ಸಸಿ ವಿತರಣೆ

ಬಳ್ಳಾರಿ, ಮೇ.26: ತಾಲೂಕಿನ ಬೈರದೇವನಹಳ್ಳಿ ಗ್ರಾಮದ ಕ್ವಾರಂಟೈನ್ ನಲ್ಲಿದ್ದ 124 ಜನರಿಗೆ ಕೊರೊನಾ ನೆಗೆಟಿವ್ ಬಂದಿದ್ದರಿಂದ ಇವರೆಲ್ಲರಿಗೆ ಸಸಿಗಳನ್ನು ನೀಡಿ ಬೀಳ್ಕೊಡಲಾಯಿತು.
ಇದೇ ವೇಳೆ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆ ಬಳ್ಳಾರಿ ಗ್ರಾಮಾಂತರ ಕ್ಷೇತ್ರ ಘಟಕದ ಅಧ್ಯಕ್ಷ ಬಾಣಾಪುರ ಪೊಂಪನಗೌಡ ಅವರು, ಕೊರೊನಾ ವೈರಸ್ ಬಗ್ಗೆ ಯಾರೂ ಭಯಭೀತರಾಗದೇ ಮುಂಜಾಗ್ರತೆ ವಹಿಸಬೇಕು, ಸಾಮಾಜಿಕ ಅಂತರ ಕಾಪಾಡಬೇಕು. ಪ್ರತಿಯೊಬ್ಬರು ಮಾಸ್ಕ್ ಗಳನ್ನು ಧರಿಸಬೇಕು ಇದರಿಂದ ಮಾತ್ರ ಕೊರೊನಾ ವೈರಸ್ ನಿಂದ ದೂರವಿರಲು ಸಾಧ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷೆಯನ್ನು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರಾದ ಅನುಸೂಯ ವಹಿಸಿದ್ದರು.
ಕಾರ್ಯಕ್ರಮದಲ್ಲಿ ವಸತಿ ಶಾಲೆಯ ನಿಲಯ ಪಾಲಕ ಕೆ.ಗಿರೀಶ್, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಟಿ.ನೀಲಮ್ಮ ಹೊನ್ನಪ್ಪ ಮುಖಂಡರಾದ ದೊಡ್ಡ ಹೊನ್ನಪ್ಪ, ವಂಡ್ರಪ್ಪ, ಮುಖ್ಯಪೇದೆ ಮಲ್ಲಿಕಾರ್ಜುನ, ಪೋಟೋ ರಾಮಣ್ಣ, ಅಂಜಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Share

Leave a Comment