ಕ್ಲಬ್ ಮೇಲೆ ಸಿಸಿಬಿ ದಾಳಿ: 22 ಜನರ ಬಂಧನ

ಬೆಂಗಳೂರು, ಆ.25.ನಗರದ ನ್ಯೂ ಗೋಲ್ಡನ್ ಲಕ್ ರಿಕ್ರಿಯೇಷನ್ ಅಸೋಶಿಯೇಷನ್ ಕ್ಲಬ್‍ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ, 22 ಜನರನ್ನು ಬಂಧಿಸಿದ್ದಾರೆ.

ಕುಮಾರ್ (46), ಚಾನ್ (45), ವೀರಪ್ಪ (60) ಗೋಪಾಲ್ (60) ಮೋಯಿನ್ (51),

ಮಧು (47) ಸೇರಿ 22 ಮಂದಿ ಬಂಧಿತರು.

ಜೆ.ಬಿ.ನಗರದ ಅನ್ನಪೂರ್ಣೆಶ್ವರಿ ಕಾಂಪ್ಲೆಕ್ಸ್ ನ ನ್ಯೂ ಗೋಲ್ಡನ್ ಲಕ್ ರಿಕ್ರಿಯೇಷನ್ ಅಸೋಷಿಯೇಷನ್ ನಲ್ಲಿ ಸದಸ್ಯರಲ್ಲದ ವ್ಯಕ್ತಿಗಳು ಜೂಜಾಡುತ್ತಿದ್ದಾರೆ ಎಂಬ ಖಚಿತ  ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಶನಿವಾರ  ಕಾರ್ಯಾಚರಣೆ ಕೈಗೊಂಡಿದ್ದರು.

ಕ್ಲಬ್ ಮಾಲಿಕರಾದ ರಮೇಶ್ (35) ಮತ್ತು ಜಯಪ್ಪ (63) ಅವರನ್ನು ಬಂಧಿಸಿ, 1.42 ಲಕ್ಷ ನಗದು  ಮತ್ತು 12  ಇಸ್ಪೀಟ್ ಕಟ್ಟುಗಳನ್ನು ವಶಪಡಿಸಿಕೊಳ್ಳಲಾಗಿದೆ.  ಈ ಸಂಬಂಧ ಜೀವನ್ ಬಿಮಾ ನಗರ ಪೊಲೀಸ್‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು  ಪೊಲೀಸರು ತಿಳಿಸಿದ್ದಾರೆ.

ಸಿಸಿಬಿ ವಿಶೇಷ ವಿಚಾರಣಾ ದಳದ ಸಹಾಯಕ ಪೊಲೀಸ್‍ ಆಯುಕ್ತ ಎನ್. ಹೆಚ್. ರಾಮಚಂದ್ರಯ್ಯ  ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.

Leave a Comment