ಕ್ರೀ‌ಡಾಕೂಟ: ಸೇಂಟ್ ಮೇರೀಸ್ ಶಾಲೆ ವಿಜೇತ

ಅರಸೀಕೆರೆ, ಆ. ೨೩- ನಗರದ ಶ್ರೀ ಜೇನುಕಲ್ ಕ್ರೀಡಾಂಗಣದಲ್ಲಿ ನಡೆದ ಹೋಬಳಿ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದಲ್ಲಿ ಅರಸೀಕೆರೆ ಸೇಂಟ್ ಮೇರೀಸ್ ಆಂಗ್ಲ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಅತಿ ಹೆಚ್ಚು ಕ್ರೀಡೆಗಳಲ್ಲಿ ವಿಜೇತರಾಗಿದ್ದಾರೆ.

ಬಾಲಕರ ವಿಭಾಗದಲ್ಲಿ ವಾಲಿಬಾಲ್, ಥ್ರೋಬಾಲ್‌ಗಳಲ್ಲಿ (ಪ್ರಥಮ), 100, 200 ಮೀಟರ್ (ಪ್ರಥಮ), ಎತ್ತರ ಜಿಗಿತ ಪ್ರಥಮ ಮತ್ತು ತೃತೀಯ ಸ್ಥಾನ, ಗುಂಡು ಎಸೆತ (ದ್ವಿತೀಯ), ಉದ್ದ ಜಿಗಿತ (ತೃತೀಯ), 4×100  ಮೀಟರ್ ರಿಲೇ ದ್ವಿತೀಯ ಸ್ಥಾನ, 400 ಮೀಟರ್ ದ್ವಿತೀಯ ಮತ್ತು ತೃತೀಯ ಸ್ಥಾನ, 600 ಮೀಟರ್ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಬಾಲಕಿಯರ ವಿಭಾಗದಲ್ಲಿ 100 ಮೀಟರ್ (ಪ್ರಥಮ), ಎತ್ತರ ಜಿಗಿತ ಪ್ರಥಮ ಮತ್ತು ತೃತೀಯ ಸ್ಥಾನ, 200 ಮೀಟರ್ ತೃತೀಯ ಸ್ಥಾನ, ಗುಂಡು ಎಸೆತ ದ್ವಿತೀಯ ಸ್ಥಾನ, ಉದ್ದ ಜಿಗಿತ ಪ್ರಥಮ ಮತ್ತು ದ್ವಿತೀಯ ಸ್ಥಾನ, 4×100  ಮೀಟರ್ ರಿಲೇ ಪ್ರಥಮ ಸ್ಥಾನ, ವಾಲೀಬಾಲ್, ಥ್ರೋಬಾಲ್ ಗಳಲ್ಲಿ ಪ್ರಥಮ, ಬಾಲಕಿಯರ ವಿಭಾಗದಲ್ಲಿ ಕುಮುದ ವೈಯಕ್ತಿಕ ಬಹುಮಾನ ಪಡೆದು ಬಾಲಕಿಯರ ವಿಭಾಗದ ಸಮಗ್ರ ಪ್ರಶಸ್ತಿ ಪಡೆದಿದ್ದಾರೆ.

ಅರಸೀಕೆರೆ ಸೇಂಟ್ ಮೇರೀಸ್ ಆಂಗ್ಲ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಸಿಸ್ಟರ್ ಜಿನ್ನಿಫರ್‍ರವರು ಶಾಲೆಯ ವಿದ್ಯಾರ್ಥಿಗಳಿಗೆ ಹಾಗೂ ದೈಹಿಕ ಶಿಕ್ಷಕರಾದ ಜೀವನ್ ಸರ್ ಹಾಗೂ ರವಿ ರವರನ್ನು ಅಭಿನಂದಿಸಿ ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಶುಭ ಕೋರಿದರು.

Leave a Comment