ಕ್ರೀಡೆ : ಸೋಲು-ಗೆಲುವು ಸಮಾನ ಸ್ವೀಕರಿಸಿ

ರಾಯಚೂರು.ಸೆ.09- ಕ್ರೀಡೆಯಲ್ಲಿ ಸೋಲು, ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕೆಂದು ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಅರ್ಜುನ್ ಹೇಳಿದರು.
ನಗರದ ಸ್ವಾಮಿ ವಿವೇಕಾನಂದ ಬಿಪಿಇಡಿ ಕಾಲೇಜು ಮೈದಾನದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಮಿಲ್ಟನ್ ಹಿರಿಯ ಪ್ರಾಥಮಿಕ ಶಾಲೆ ಮಕ್ತಾಲಪೇಟೆ ಇವರ ಸಂಯುಕ್ತಾಶ್ರಯದಲ್ಲಿ ನಯಾಮದರಸಾ ಹೋಬಳಿ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. ಮಿಲ್ಟನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹೆಚ್.ವೆಂಕಟೇಶ ಮಾತನಾಡುತ್ತಾ, ಕ್ರೀಡೆಯಲ್ಲಿ ಭಾಗವಹಿಸುವುದರಿಂದ ದೈಹಿಕ ಮತ್ತು ಮಾನಸೀಕ ಆರೋಗ್ಯವೃದ್ಧಿಯಾಗಲಿದೆ.
ಸೋಲು, ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು. ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಹೊರ ತರಲು ಕ್ರೀಡೆ ಸೂಕ್ತ ವೇದಿಕೆಯಾಗಿದೆಂದರು. ರುಸ್ಮಾ ಅಧ್ಯಕ್ಷ ರಾಜಾ ಶ್ರೀನಿವಾಸ ಮಾತನಾಡಿ, ಇಲಾಖೆಯ ಕಾರ್ಯಕ್ರಮವನ್ನು ಖಾಸಗಿ ಶಿಕ್ಷಣ ಸಂಸ್ಥೆಗಳ ಸಹಭಾಗಿತ್ವದಲ್ಲಿ ಆಯೋಜಿಸುತ್ತಿರುವುದು ಶ್ಲಾಘನೀಯವೆಂದರು.
ವೇದಿಕೆಯಲ್ಲಿ ಗಿರೀಶ ಆಚಾರಿ, ಮುಕ್ತಿಯಾರ ಹುಸೇನ್, ಯಂಕಪ್ಪ ಪಿರಂಗಿ, ಹೆಚ್.ವನಜಾ, ದತ್ತುರಾವ್ ದೇಸಾಯಿ, ವಿನೂತ್, ಜಿ.ಮೂಕಪ್ಪ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Comment