ಕ್ರೀಡೆಗಳು ಉತ್ತಮ ಆರೋಗ್ಯಕ್ಕೆ ಸಹಕಾರಿ

ಚಳ್ಳಕೆರೆ.ಡಿ.5; ಕ್ರೀಡೆಗಳು ಆರೋಗ್ಯ ದೃಷ್ಟಿಯಿಂದ ಹಾಗೂ ಮಕ್ಕಳ ಶೈಕ್ಷಣಿಕ ಕಲಿಕೆಗೆ ಉತ್ತೇಜನಕಾರಿ, ಯುವಕರು ಕ್ರೀಡೆಯಲ್ಲಿ  ಪಾಲ್ಗೊಳ್ಳುವುದರಿಂದ ದೈಹಿಕ, ಮಾನಸಿಕವಾಗಿ, ಸರ್ವತೋಮುಖ ಬೆಳವಣಿಗೆ ಸಾಧಿಸುವ ನೀಟ್ಟಿನಲ್ಲಿ ಸಹಕಾರಿಯಾಗಲಿದೆ ಎಂದು ಚಳ್ಳಕೆರೆ ಸರ್ಕಾರಿ ಪದವಿಪೂರ್ವ ಕಲೇಜಿನ ಪ್ರಾಂಶುಪಾಲರಾದ ಎನ್ ಕೃಷ್ಣ ಪ್ರಸಾದ್ ತಿಳಿಸಿದರು.

ತಾಲ್ಲೂಕಿನ ಬೆಳಗೆರೆ ಗ್ರಾಮದ ಬಿ. ಸೀತಾರಾಮಶಾಸ್ತ್ರಿ ಕಾಲೇಜು ಹಾಗು ಶ್ರೀ ಶಾರದ ವಿದ್ಯಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ದಿ. ಎಸ್.ಸುಂದರಮ್ಮ ಸ್ಮಾರಕ  ವಾರ್ಷಿಕ ಕ್ರೀಡೋತ್ಸವ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ಪೋಷಕರು ಮಕ್ಕಳನ್ನು ಕೇವಲ ಪಠ್ಯಗಳ ವಿಷಯಕ್ಕೆ

ಕೇಂದ್ರೀಕರಿಸದೆ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಹೆಚ್ಚಿನ ಉತ್ತೇಜನ ನೀಡಬೇಕು. ಪ್ರಾಥಮಿಕ ಶಾಲೆ ಹಂತದಲ್ಲಿಯೇ ಮಕ್ಕಳಲ್ಲಿ ಸ್ಪರ್ಧಾ ಮನೋಭಾವ ಮೂಡಿಸುವ ಮೂಲಕ ಮಕ್ಕಳು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಸಲ್ಲಿಸಲು ಅವಕಾಶ ಕಲ್ಪಿಸಿದಂತಾಗುತ್ತದೆ. ಬೆಳಗೆರೆ ಶಾಲೆಯಲ್ಲಿ ಉತ್ತಮ ವಾತವರಣವಿದ್ದು ಇಲ್ಲಿ ಕಲಿತ ಹಲವರು ಇಂದು ಉನ್ನತ ಹುದ್ದೆಯಲ್ಲಿ ಇದ್ದಾರೆ. ಈ ಶಾಲೆ ವಾತಾವರಣ  ನೋಡಿದರೆ ಗುರುಕುಲ ನೆನಪಾಗುತ್ತದೆ. 50 ವರ್ಷಗಳಿಂದ ವಾರ್ಷಿಕ ಕ್ರೀಡೋತ್ಸವ  ಮಾಡುತ್ತಿರುವುದು  ಉತ್ತಮವಾದದು ಎಂದರು. ಹಾಗು ಚಳ್ಳಕೆರೆಯಲ್ಲಿ ನಾಲ್ಕು  ವಿಜ್ಞಾನ ಸಂಸ್ಥೆಗಳು ಇದ್ದು ಇದು ಪ್ರಪಂಚಕ್ಕೆ  ಹೆಸರಾದಂತಹ ತಾಲ್ಲೂಕು ಹಾಗಿದೆ.

ಸಮಯ ಸಿಕ್ಕಾಗ  ಶಾಲೆ ಮಕ್ಕಳು ಕಲಿಯಲು ಇಂತಹ  ಸಂಸ್ಥೆಗಳಿಗೆ  ಕರೆದುಕೊಂಡು ಹೋಗಿ ವಿಜ್ಞಾನ ಬಗ್ಗೆ ತಿಳಿಸಬೇಕು ಎಂದರು. ಶಾರದ ಸಂಸ್ಥೆಯ ಮಾರ್ಗದರ್ಶಕ ಶ್ರೀಪಾದ್ ಪುಜಾರ್ ಮಾತನಾಡಿ ಭಾರತವು ಕ್ರೀಡಾ ಕ್ಷೇತ್ರದಲ್ಲಿ  ಉತ್ತಮ ಸಾಧನೆ ಮಾಡಿದೆ ವಿಶ್ವದ ಅತ್ಯಂತ  ದೊಡ್ಡ ಪ್ರಜಾಪ್ರಭುತ್ವವೆಂದು  ಹೆಸರು ಮಾಡಿರುವ ಮತ್ತು ಜನಸಂಖ್ಯೆಯ ದೃಷ್ಟಿಯಿಂದ ಕ್ರೀಡಾ ಕ್ಷೇತ್ರದಲ್ಲಿ  ಸಾಧನೆ ಮಾಡುವ ದಾರಿ ಇನ್ನು ಬಹಳವಿದೆ. ದೇಶದ ಎಲ್ಲಾ ಸ್ತರಗಳಲ್ಲಿ ಕ್ರೀಡೆಗೆ  ಪ್ರಾತಿನಿಧ್ಯಕೂಟ್ಟು ಪ್ರಜೆಗಳಲ್ಲಿ ಹುದುಗಿರುವ  ಪ್ರತಿಭೆಗಳನ್ನು ಹೆಕ್ಕಿ ತಗೆಯುತ್ತಿದೆ. ಈ ದಿಶೆಯಲ್ಲಿನ ನಮ್ಮ ಪ್ರಾಮಾಣಿಕ ಪ್ರಯತ್ನವಿರಲಿ ಎಂದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾದ ತಿಮ್ಮೆಗೌಡ,  ಪ್ರಾಂಶುಪಾಲೆ ಸರೊಜಮ್ಮ, ಮುಖ್ಯ ಶಿಕ್ಷಕ ವಿ ಎಚ್.ವೀರಣ್ಣ, ಉಪನ್ಯಾಸಕ ಚೆನ್ನಕೇಶವ,
ಧನಂಜಯ,ದ್ರಾಕ್ಷಾಯಣಿ, ವಾಯಿದ್, ಶಿಕ್ಷಕರಾದ ಗಿರೀಶ,ಚಿದಾನಂದ, ಮಂಜುನಾಥ, ಸುಹಾಸ್  ಹಾಗು ಶಾಲಾ ಸಿಬ್ಬಂದಿ ಇದ್ದರು.

Leave a Comment