ಕ್ರೀಡಾ ರಂಗಕ್ಕೆ ರಜನೀಕಾಂತ್ ಪುತ್ರಿ  ಐಶ್ವರ್ಯಾ ಧನುಷ್ …!

ಚೆನ್ನೈ, ಜುಲೈ 19- ರಜನಿಕಾಂತ್ ಅವರ ಹಿರಿಯ ಪುತ್ರಿ,  ನಟ ಧನುಷ್ ಪತ್ನಿ  ಹಾಗೂ ಸಿನಿಮಾ  ನಿರ್ದೇಶಕಿ ಐಶ್ವರ್ಯಾ ಧನುಷ್ ಕ್ರೀಡಾ ಕ್ಷೇತ್ರ  ಪ್ರವೇಶಿಸಲು  ಸಜ್ಜುಗೊಂಡಿದ್ದಾರೆ.

ಈ ತಿಂಗಳು  25 ರಂದು  ದೆಹಲಿಯಲ್ಲಿ ನಡೆಯಲಿರುವ ಟೇಬಲ್ ಟೆನಿಸ್ ಪಂದ್ಯಾವಳಿಲ್ಲಿ  ಚೆನ್ನೈ ತಂಡದ   ನಿರ್ವಾಹಕರ ಪೈಕಿ ಒಬ್ಬರಾಗಲಿದ್ದಾರೆ. ದೆಹಲಿಯಲ್ಲಿ  ನಡೆಯಲಿರುವ  ಟೇಬಲ್ ಟೆನಿಸ್ ಪಂದ್ಯಾವಳಿಯಲ್ಲಿ   ದೆಹಲಿ, ಚೆನ್ನೈ, ಪುಣೆ, ಗೋವಾ , ಕೊಲ್ಕತ್ತಾ,  ಮುಂಬೈ ತಂಡಗಳು  ಪಾಲ್ಗೊಳ್ಳಲಿವೆ.

Leave a Comment