ಕ್ರೀಡಾಸ್ಪೂರ್ತಿ ಉತ್ತಮ ಭವಿಷ್ಯ – ಬೋಸರಾಜು

ರಾಜ್ಯ ಮಟ್ಟದ ಹೊನಲು ಬೆಳಕು ಖೋ ಖೋ ಉದ್ಘಾಟನೆ
ರಾಯಚೂರು.ಫೆ.08- ಕ್ರೀಡೆಗಳಿಂದ ದೈಹಿಕ ಆರೋಗ್ಯ ಕಾಯ್ದುಕೊಳ್ಳುವುದರೊಂದಿಗೆ ತಮ್ಮ ಪ್ರತಿಭೆ ಮೂಲಕ ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರ ಮಟ್ಟದಲ್ಲಿ ಹೆಚ್ಚಿನ ಸ್ಥಾನ ಗಳಿಸಿ, ಭವಿಷ್ಯತ್ತಿನಲ್ಲಿ ಉತ್ತಮ ಜೀವನ ನಿರ್ವಹಿಸಲು ಸಾಧ್ಯವೆಂದು ವಿಧಾನ ಪರಿಷತ್ ಸದಸ್ಯ ಎನ್.ಎಸ್.ಬೋಸರಾಜು ಅವರು ಹೇಳಿದರು.
ಅವರು ನಿನ್ನೆ ಸಂಜೆ ಯರಮರಸ್‌ನಲ್ಲಿ ರಾಜ್ಯ ಮಟ್ಟದ ಖೋ ಖೋ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು. ಕ್ರೀಡೆ ವ್ಯಕ್ತಿತ್ವ ಬದಲಿಸುವ ನಿರ್ಣಾಯಕವಾಗಿದೆ. ಯುವ ಜನರಲ್ಲಿ ಸ್ಪರ್ಧಾತ್ಮಕತೆ ಮೂಡಿಸುತ್ತದೆ. ದೈಹಿಕ ಆರೋಗ್ಯಕ್ಕೆ ಕ್ರೀಡೆ ಚಟುವಟಿಕೆ ಅತ್ಯಂತ ಮುಖ್ಯವೆಂದರು. ರಾಜ್ಯ ಮಟ್ಟದ ಈ ಹೊನಲು ಬೆಳಕು ಖೋ ಖೋ ಆಯೋಜನೆ ಅತ್ಯಂತ ಶ್ಲಾಘನೀಯವಾಗಿದೆ. ಇಂತಹ ಚಟುವಟಿಕೆ ಮೇಲಿಂದ ಮೇಲೆ ನಡೆಯುವುದರಿಂದ ಈ ಭಾಗದ ಪ್ರತಿಭೆಗಳಿಗೆ ಅವಕಾಶ ನೀಡಿದಂತಾಗುತ್ತದೆ.
ಈ ಪಂದ್ಯಾವಳಿಗೆ ಬೆಂಗಳೂರು, ಮಂಗಳೂರು, ಮೈಸೂರು, ಹಾಸನ, ಮಂಡ್ಯ, ಶಿವಮೊಗ್ಗ ಜಿಲ್ಲೆಗಳಿಂದ ಅನೇಕ ತಂಡಗಳು ಆಗಮಿಸಿವೆ. ಮೂರು ದಿನಗಳ ಕಾಲ ಈ ಕಾರ್ಯಕ್ರಮ ನಡೆಯಲಿದೆ. ಊಟ, ವಸತಿ ಮತ್ತು ಸಂಚಾರಕ್ಕೆ ಸೌಕರ್ಯ ಮಾಡಿಕೊಡಲಾಗಿದೆ. ಬಹುಮಾನವೂ ಅತ್ಯುತ್ತಮವಾಗಿ ನಿಗದಿ ಪಡಿಸಲಾಗಿದೆ. ಪ್ರಥಮ ಬಹುಮಾನ 20 ಸಾವಿರ, ಎರಡನೇ ಬಹುಮಾನ 15 ಸಾವಿರ, ತೃತೀಯ ಬಹುಮಾನ 10 ಸಾವಿರ ನಿಗದಿ ಪಡಿಸಲಾಗಿದೆ.
ರಾಜ್ಯ ಮಟ್ಟದ ಈ ಹೊನಲು ಬೆಳಕು ಪಂದ್ಯಾವಳಿಗಾಗಿ ಅತ್ಯುತ್ತಮವಾಗಿ ಮೈದಾನ ವ್ಯವಸ್ಥೆ ಮಾಡಲಾಗಿದೆ. ನಿನ್ನೆ ರಾತ್ರಿ ನಡೆದ ಪಂದ್ಯಾವಳಿಯಲ್ಲಿ ಕ್ರೀಡಾಪಟುಗಳ ಆಟ ಕ್ರೀಡಾಭಿಮಾನಿಗಳಲ್ಲಿ ಭಾರೀ ಉತ್ಸಾಹ ಮೂಡಿಸಿತು. ಖೋ ಖೋ ನೋಡಲು ಕಿಕ್ಕಿರಿದು ನೆರೆದ್ದರು. ನಿನ್ನೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಿಲ್ಪಾ ಮೆಡಿಕೇರ್ ವ್ಯವಸ್ಥಾಪಕ ನಿರ್ದೇಶಕರಾದ ವಿಷ್ಣುಕಾಂತ ಬುತಡಾ, ನಗರಸಭೆ ಸದಸ್ಯರಾದ ಸಣ್ಣ ನರಸರೆಡ್ಡಿ, ಜಯಣ್ಣ, ಶ್ರೀನಿವಾಸ ರೆಡ್ಡಿ, ಕೆ.ಶಾಂತಪ್ಪ, ಸಾಜೀದ್ ಸಮೀರ್, ಅಶೋಕ, ವಿನೋದ ರೆಡ್ಡಿ, ರಾಘವೇಂದ್ರ ರೆಡ್ಡಿ, ಜಿಂದಪ್ಪ, ಸೈಯದ್ ಶಾಲಂ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Comment