ಕ್ರೀಡಾಕೂಟದಲ್ಲಿ ಅಂಬೇಡ್ಕರ್ ಕಾಲೇಜಿಗೆ ಬಹುಮಾನ

ಹಿರಿಯೂರು.ಸೆ.11: ನಗರದ ತಾಲೂಕು ಕ್ರೀಡಾಂಗಣದಲ್ಲಿ  ನಡೆದ ಪದವಿ ಪೂರ್ವ ಕಾಲೆಜುಗಳ ಕ್ರೀಡಾಕೂಟದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಬಹುಮಾನ ಪಡೆದಿದ್ಧಾರೆ. ಬಾಲಕರ ವಿಭಾಗದಲ್ಲಿ 1500ಮೀ ಓಟ, ಕಬ್ಬಡಿ ಹಾಗೂ ಷಟಲ್ ಬ್ಯಾಟ್‍ಮಿಂಟನ್ ದ್ವಿತೀಯ ಸ್ಥಾನ, ಬಾಲಕಿಯ ವಿಭಾಗದಲ್ಲಿ 4*100ಮೀ ರಿಲೇ ಹಾಗೂ 800ಮೀ ಓಟ ದ್ವಿತೀಯ ಸ್ಥಾನ, ಎತ್ತರ ಜಿಗಿತ ಹಾಗೂ ತ್ರಿವಿಧ ಜಿಗಿತ ತೃತೀಯ ಸ್ಥಾನಗಳಿಸಿ ಬಹುಮಾನ ಪಡೆದಿದ್ದಾರೆ. ಬಾಲಕರ ವಿಭಾಗದ 1500ಮೀ ಓಟದಲ್ಲಿ ನೀತೀಶಕುಮಾರ್ ಹಾಗೂ ಬಾಲಕಿಯರ ವಿಭಾಗದಲ್ಲಿ 800ಮೀ ಓಟದಲ್ಲಿ ಲಕ್ಷ್ಮೀದೇವಿ ಅವರು ಜಿಲ್ಲಾ ಮಟ್ಟಕ್ಕೆಡ ಆಯ್ಕೆಯಾಗಿದ್ದಾರೆ. ವಿದ್ಯಾಸಂಸ್ಥೆ ಕಾರ್ಯದರ್ಶಿ ಶಾಂತಮ್ಮ, ಪ್ರಾಂಶುಪಾಲ ಬಿ.ಪಿ.ತಿಪ್ಪೇಸ್ವಾಮಿ, ದೈಹಿಕ ಶಿಕ್ಷಣ ನಿರ್ದೇಶಕ ಮಂಜು ಹಾಗೂ ಉಪನ್ಯಾಸಕರ ವರ್ಗದವರು ಅಭಿನಂದಿಸಿದ್ದಾರೆ.

Leave a Comment