ಕ್ರೀಡಾಕೂಟಕ್ಕೆ ಚಾಲನೆ

ಹೊಸಪೇಟೆ, ಸೆ.8: ನಗರದ ಮುನ್ಸಿಪಲ್ ಮೈದಾನದಲ್ಲಿ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ತಾಲೂಕು ಪಂಚಾಯಿತಿ ಅಧ್ಯಕ್ಷೆ ಜೋಗದ ನೀಲಮ್ಮ ಚಾಲನೆ ನೀಡಿದರು.

ತಾಲೂಕಿನ 9 ವಲಯ ವ್ಯಾಪ್ತಿಯ ಶಾಲೆಗಳ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಖೋ, ಖೋ, ವಾಲಿಬಾಲ್, ಥ್ರೋಬಾಲ್, ಕಬಡ್ಡಿ, ಓಟದ ಸ್ಪರ್ಧೆ, ಉದ್ದ ಜಿಗಿತ, ಎತ್ತರ ಜಿಗಿತ, ಡಿಸ್ಕಸ್ ಎಸೆತ, ಗುಂಡು ಎಸೆತ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದ ನಂತರ ನಡೆದ 600 ಮೀಟರ್ ಓಟದ ಸ್ಪರ್ಧೆಯಲ್ಲಿ ಕಲ್ಲಹಳ್ಳಿ ಶಾಲೆಯ ಲಕ್ಷ್ಮಿಬಾಯಿ ಪ್ರಥಮ, ಗಾದಿಗನೂರು ಶಾಲೆಯ ಗಾಯತ್ರಿ ದ್ವಿತೀಯ ಹಾಗೂ ಅದೇ ಗ್ರಾಮದ ಕೆ. ಪುಷ್ಪಾ ತೃತೀಯ ಸ್ಥಾನ ಪಡೆದರು.

ಬಾಲಕರ ವಿಭಾಗದಲ್ಲಿ ಕಲ್ಲಹಳ್ಳಿಯ ನಾಗಾ ನಾಯ್ಕ ಪ್ರಥಮ, ಸೋಮಪ್ಪ ಕ್ಯಾಂಪಿನ ಬಿ. ನೇಟಕಲ್ಲ ದ್ವಿತೀಯ ಹಾಗೂ ಡಿ.ಬಿ. ಡ್ಯಾಂನ ರಾಜ ತೃತೀಯ ಬಹುಮಾನ ಗಳಿಸಿದರು.

ನಗರಸಭೆ ಅಧ್ಯಕ್ಷ ಗುಜ್ಜಲ್ ನಿಂಗಪ್ಪ, ಸದಸ್ಯರಾದ ಬಸವರಾಜ, ಬಡಾವಲಿ, ಗೌಸ್, ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಶಿವಮೂರ್ತಿ, ಅಂಜುಮನ್ ಕಮಿಟಿ ಅಧ್ಯಕ್ಷ ಅಬ್ದುಲ್ ಖಾದರ್ ರಫಾಯ್, ಕ್ಷೇತ್ರ ಶಿಕ್ಷಣಾಧಿಕಾರಿ ಎಲ್.ಡಿ. ಜೋಶಿ, ದೈಹಿಕ ಶಿಕ್ಷಣ ಪರಿವೀಕ್ಷಕ ಬಸವರಾಜ ಜತ್ತಿ, ತಾಲೂಕು ಕ್ರೀಡಾ ಸಮಿತಿಯ ಸಂಘಟಕ ಬಿ. ಚಂದ್ರಶೇಖರ್ ಇದ್ದರು.

Leave a Comment