ಕ್ರಿಯಾಚಿಂತಕ ಪ್ರಶಸ್ತಿ ಪ್ರದಾನ 1 ರಂದು

ಕಲಬುರಗಿ ಫೆ 28: ಪ್ರೊ ಎಸ್.ಎಸ್ ಆಲಗೂರ ಪ್ರತಿಷ್ಠಾನದ ವತಿಯಿಂದ ಮಾರ್ಚ 1 ರಂದು ಬೆಳಿಗ್ಗೆ 10 ಗಂಟೆಗೆ ನಗರದ ಡಾ ಎಸ್.ಎಂ ಪಂಡಿತರಂಗಮಂದಿರದಲ್ಲಿ ಕ್ರಿಯಾ ಚಿಂತಕ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.ಅ.ಕ ಸ್ನೇಹಗಂಗಾ ವಾಹಿನಿ ಸಂಸ್ಥಾಪಕ ಗೌರವಾಧ್ಯಕ್ಷರಾಗಿದ್ದ ಪ್ರೊ ಎಸ್.ಎಸ್ ಆಲಗೂರ ಅವರ ಹುಟ್ಟು ಹಬ್ಬದ ಪ್ರಯುಕ್ತ ಪ್ರತಿಷ್ಠಾನವು ಈ ವರ್ಷದಿಂದ  ಕ್ರಿಯಾಚಿಂತಕ ಪ್ರಶಸ್ತಿ  ಆರಂಭಿಸಿದೆ  ಎಂದು ಪ್ರೊ ಆರ್ ಕೆ ಹುಡಗಿ ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹೋರಾಟಗಾರ ಸಾಮಾಜಿಕ ಚಿಂತಕ ಸಿದ್ಧನಗೌಡ ಪಾಟೀಲ ಅವರನ್ನು  ಈ ಸಾಲಿನ ಕ್ರಿಯಾಚಿಂತಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ .ಪ್ರಶಸ್ತಿಯು 25 ಸಾವಿರ ರೂ ನಗದು, ಪ್ರಶಸ್ತಿ ಫಲಕ, ಪ್ರಶಸ್ತಿ ಪತ್ರ ಒಳಗೊಂಡಿದೆ. ನಿವೃತ್ತ ಕನ್ನಡ ಪ್ರಾಧ್ಯಾಪಕ ಡಾ.ಸಿ ವೀರಣ್ಣ ಕಾರ್ಯಕ್ರಮ ಉದ್ಘಾಟಿಸುವರು.ಚಿಂತಕ ಡಾ ಎಸ್ ನಟರಾಜ ಬೂದಾಳು ಪ್ರಶಸ್ತಿ ಪ್ರದಾನ ಮಾಡುವರು. ಕನ್ನಡ ಪ್ರಾಧ್ಯಾಪಕ ಡಾ.ಈಶ್ವರಯ್ಯ ಮಠ ವಿಶೇಷ ಉಪನ್ಯಾಸ ನೀಡುವರು

ಮುಖ್ಯ ಅತಿಥಿಗಳಾಗಿ  ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ ಚಂಚನಸೂರ, ಮಾಜಿ ಸಚಿವ ಡಾ ಶರಣಪ್ರಕಾಶ ಪಾಟೀಲ, ವಿಧಾನ ಪರಿಷತ್ತು ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಸೇರಿದಂತೆ ಅನೇಕ ಗಣ್ಯರು  ಆಗಮಿಸಲಿದ್ದು, ಕಲಬುರಗಿ ನ್ಯಾಯವಾದಿಗಳ ಸಂಘದ ಮಾಜಿ ಅಧ್ಯಕ್ಷ ಡಿ.ಎಸ್ ನಾಮದಾರ ಅಧ್ಯಕ್ಷತೆ ವಹಿಸುವರು ಎಂದರು. ಸುದ್ದಿಗೋಷ್ಠಿಯಲ್ಲಿ ಪ್ರೊ ಎಲ್,ಬಿ ಹಿಟ್ಟಿನ್, ಡಾ ಟಿ.ಡಿ ರಾಜ,ಡಿ.ಎಸ್ ನಾಮದಾರ ,ಶರಣಗೌಡ ಪಾಟೀಲ ಉಪಸ್ಥಿತರಿದ್ದರು.

Leave a Comment