ಕ್ರಿಕೇಟ್ ಪ್ರೇಮಿ ನಿಧನ

ಹುಬ್ಬಳ್ಳಿ, ಡಿ 7: ನಗರದ ಹಳೇ-ಹುಬ್ಬಳ್ಳಿ ಜಂಗ್ಲೀಪೇಟ್ ನಿವಾಸಿ, ನಿವೃತ್ತ ರೈಲ್ವೇ ನೌಕರ, ಕ್ರಿಕೇಟ್ ಪ್ರೇಮಿ ಸೋಮಶೇಖರ ಚನ್ನಬಸಪ್ಪ ಗೋದಾವಿ (89) ಇವರು ಇಂದು ಬೆಳಗಿನ ಜಾವ 3 ಗಂಟೆಗೆ ನಿಧನರಾದರು.
ಮೃತರು ಮೂವರು ಪುತ್ರರು, ಇಬ್ಬರು ಪುತ್ರಿಯರು, ಸೊಸೆಯಂದಿರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಇವರು ತಮ್ಮ ಸುತ್ತಮುತ್ತಲಿನ ಬಳಗದಲ್ಲಿ ಮಹಾನ್ ಕ್ರಿಕೇಟ್ ಪ್ರೇಮಿ ಎಂದೇ ಗುರುತಿಸಲ್ಪಟ್ಟಿದ್ದರು. ಇವರಿಗೆ ಕ್ರಿಕೇಟ್ ಕ್ರೀಡೆ ಎಂದರೆ ಅತಿ ಅಚ್ಚು ಮೆಚ್ಚು. ಭಾರತ ಕ್ರಿಕೇಟ್ ತಂಡ ಜಯಶಾಲಿಯಾದರೆ ಇವರು ಜಂಗ್ಲಿಪೇಟ್ ಬಸವಣ್ಣದೇವರ ಗುಡಿಯಲ್ಲಿ ಭಾತರ ಕ್ರಿಕೇಟ್ ತಂಡದ ಹೆಸರಿನಲ್ಲಿ ಅಭಿಷೇಕವನ್ನು ಮಾಡಿಸುತ್ತಿದ್ದರು.
ಎದುರಾಳಿ ತಂಡದ ಪ್ರತಿ ವಿಕೇಟ್ ಪತನವಾದಾಗ ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದರು. ಇಂದಿಗೂ ಸಹ ಭಾರತ ಕ್ರಿಕೇಟ್ ತಂಡದ ಆಟವಿದ್ದಾಗ ಇವರ ಕ್ರಿಕೇಟ್ ಪ್ರೇಮಕ್ಕೆ ಸುತ್ತಮುತ್ತಲಿನ ಅಕ್ಕಿಪೇಟ್, ಕುರುಬರ ಓಣಿ, ಬಾಗಾರ ಪೇಟ್ ಓಣಿಯ ನಿವಾಸಿಗಳೆಲ್ಲ ಇವರ ಮನೆಯಲ್ಲೇ ಕುಳಿತು  ಕ್ರಿಕೇಟ್ ವೀಕ್ಷಣೆ ಮಾಡುತ್ತಿದ್ದರು.
ಭಾತರ ಕ್ರಿಕೇಟ್ ತಂಡ ವಿಶ್ವಕಪ್ ಗೆದ್ದಾಗ ಓಣಿಯಲ್ಲಿ ಸಿಹಿ ಊಟ ಹಾಕಿಸಿ ಸಂಭ್ರಮಿಸಿದ್ದರು. ಇತ್ತೀಚೆಗೆ ಅನಾರೋಗ್ಯವಾಗಿ ಆಸ್ಪತ್ರೆಯ `ಐಸಿಯು’ನಲ್ಲಿದ್ದಾಗ್ಯೂ ಸಹ ಇವರು ಕ್ರಿಕೇಟ್ ಮ್ಯಾಚ್ ಟಾಸ್ ಯಾರು ಗೆದ್ದರೆಂದು ಕೇಳಿದ್ದರು.
ಇವರ ನಿಧನದಿಂದ ಸುತ್ತಮುತ್ತಲಿನ ನಿವಾಸಿಗಳು ಒಬ್ಬ ಮಹಾನ್ ಕ್ರಿಕೇಟ್ ಪ್ರೇಮಿಯನ್ನು ಕಳೆದುಕೊಂಡಿದ್ದೇವೆ ಎಂದ ದು:ಖ ವ್ಯಕ್ತಪಡಿಸಿದ್ದಾರೆ.

Leave a Comment