ಕ್ರಿಕೆಟ್ ಬೆಟ್ಟಿಂಗ್ ಜಾಲ: ಮೂವರ ಸೆರೆ ಉಳ್ಳಾಲ-ಮಂಗಳೂರು ಪೊಲೀಸರ ಕಾರ್ಯಾಚರಣೆ

ಮಂಗಳೂರು, ಜು.೧೨- ವಿಶ್ವಕಪ್ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿಕೊಂಡಿದ್ದ ಜಾಲವನ್ನು ಬೇಧಿಸಿರುವ ಉಳ್ಳಾಲ ಠಾಣಾ ಪೊಲೀಸರು ಇಬ್ಬರು ಕುಖ್ಯಾತ ಬೆಟ್ಟಿಂಗ್ ದಂಧೆಕೋರರನ್ನು ವಶಕ್ಕೆ ಪಡೆದುಕೊಂಡು ಕಾನೂನು ಕ್ರಮ ಜರುಗಿಸಿದ್ದಾರೆ. ಬಂಧಿತರನ್ನು ತಲಪಾಡಿ ನಾರ್ಲ ಹೌಸ್ ನಿವಾಸಿ ಸಂತೋಶ್ ಅಲಿಯಾಸ್ ಸಂತು(೩೫) ಹಾಗೂ ಕಂಕನಾಡಿ ಲೋವರ್ ಬೆಂದೂರ್ ಫ್ರಾನ್ಸಿಸ್ ಕಂಪೌಂಡ್ ನಿವಾಸಿ ಜೀವನ್ ಕುಮಾರ್(೨೫) ಎಂದು ಹೆಸರಿಸಲಾಗಿದೆ.
ಆರೋಪಿಗಳು ವಿಶ್ವಕಪ್ ಕ್ರಿಕೆಟ್‌ನಲ್ಲಿ ವಿವಿಧ ಪಂದ್ಯಗಳ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದು ಲಕ್ಷಾಂತರ ರೂಪಾಯಿ ಹಣವನ್ನು ಜೂಜು ನಡೆಸುತ್ತಿದ್ದುದು ಬೆಳಕಿಗೆ ಬಂದಿದೆ. ಬಂಧಿತರಿಂದ ೭೦ ಸಾವಿರ ರೂ. ನಗದು, ೫ ಮೊಬೈಲ್ ಫೋನ್, ಹ್ಯೂಂಡೈ ಕ್ರೆಟಾ ಕಾರನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಇನ್ನೊಂದು ಪ್ರಕರಣ ಮಂಗಳೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು ಆರೋಪಿ ಬಂಟ್ವಾಳ ಮುಡಿಪು ಕುರ್ನಾಡ್ ನಿವಾಸಿ ನಿಶಾಂತ್(೨೧) ಎಂಬಾತನನ್ನು ಬಂಧಿಸಲಾಗಿದೆ. ಬಂಧಿತನಿಂದ ೭೦ ಸಾವಿರ ರೂ. ನಗದು ವಶಕ್ಕೆ ಪಡೆಯಲಾಗಿದೆ. ಪೊಲೀಸರು ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದಾರೆ.

Leave a Comment